ETV Bharat / sukhibhava

ಕಲಿಕೆಯ ಬಗ್ಗೆ ಬೇಡ ನಿರಾಸಕ್ತಿ, ಮಕ್ಕಳಲ್ಲಿ ಬೆಳೆಸಿ ಓದಿನ ಹವ್ಯಾಸ... - ಅನೇಕ ಮಕ್ಕಳಿಗೆ ಓದು ಮಜಾ ನೀಡಿದರೆ

ಓದು ಎಂಬುದು ಅತ್ಯವಶ್ಯಕ. ಈ ಹಿನ್ನೆಲೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಓದಿನ ಶಿಸ್ತು ಬೆಳೆಸುವುದು ಅಗತ್ಯವಾಗಿದೆ. ಈ ಬಗ್ಗೆ ತಜ್ಞರು ಕೆಲ ಸಲಹೆಗಳನ್ನು ನೀಡಿದ್ದಾರೆ. ಅವು ಹೀಗಿವೆ

develop-the-habit-of-reading-in-children

author img

By ETV Bharat Karnataka Team

Published : Aug 26, 2023, 11:30 AM IST

ಅನೇಕ ಮಕ್ಕಳಿಗೆ ಓದು ಮಜಾ ನೀಡಿದರೆ, ಮತ್ತೆ ಕೆಲವರಿಗೆ ಅದು ಬೇಸರದ ಸಂಗತಿ. ಶಾಲೆಯಿಂದ ಮರಳಿದ ತಕ್ಷಣ ಹೋಂ ವರ್ಕ್​ ಮಾಡುವ ಅಭ್ಯಾಸ ಅನೇಕ ಮಕ್ಕಳಿಗೆ ಇರುವುದಿಲ್ಲ. ಈ ರೀತಿ ಪ್ರತಿನಿತ್ಯದ ಓದಿನಲ್ಲಿ ಆಸಕ್ತಿ ಇಲ್ಲದ ಮಕ್ಕಳಿಗೆ ಓದಿನತ್ತ ಸೆಳೆಯುವಂತೆ ಮಾಡುವುದು ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರು ಕೆಲವು ಸಲಹೆಯನ್ನು ನೀಡಿದ್ದಾರೆ.

ಕೆಲವು ಮಕ್ಕಳು ಶಾಲಾ ಹೋಂ ವರ್ಕ್​ ಅನ್ನು ಯಾವುದೇ ಸಹಾಯವಿಲ್ಲದೇ, ತಮ್ಮ ಪಾಡಿಗೆ ಮಾಡಿ ಮುಗಿಸುತ್ತಾರೆ. ಆದರೆ, ಕೆಲವು ಮಕ್ಕಳು ಪುಸ್ತಕವನ್ನೇ ತೆರೆಯುವುದಿಲ್ಲ. ಮತ್ತೆ ಕೆಲವರು ಪೋಷಕರ ಒತ್ತಾಯದ ಮೇರೆಗೆ ಓದಿನ ಚಟುವಟಿಕೆ ಮುಗಿಸುತ್ತಾರೆ. ಹೇಗೆ ಆಗಲಿ ಮಕ್ಕಳು ಶಾಲೆಯ ಹೋಂವರ್ಕ್​ ಮುಗಿಸುವುದು ಅವಶ್ಯವಾಗಿದೆ. ತಮ್ಮ ಓದಿನ ಚಟುವಟಿಕೆಯನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಾಧ್ಯ. ಇದು ಮಕ್ಕಳಲ್ಲಿ ಬುದ್ದಿ ಬೆಳವಣಿಗೆಗೆ ಬೇಕಾದ ಅಗತ್ಯ ಕೌಶಲ್ಯವನ್ನು ನೀಡುತ್ತದೆ.

ಓದಿನ ಅಭ್ಯಾಸ ಮಕ್ಕಳಲ್ಲಿ ಏಕಾಗ್ರತೆಯನ್ನು ಬೆಳೆಸುತ್ತದೆ. ಇದರಿಂದ ಅವರ ಮಿದುಳು ಚಟುವಟಿಕೆಯಿಂದ ಚಿಂತಿಸುವ ಸಾಮರ್ಥ್ಯವನ್ನು ಹೊಂದಬಹುದು. ಅಲ್ಲದೇ, ಹೊಸ ವಿಚಾರಗಳ ಬಗ್ಗೆ ಅವರಲ್ಲಿ ಕುತೂಹಲ ಮತ್ತು ಭಾಷೆ ಕಲಿಕೆಯನ್ನು ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತದೆ.

ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಿಸುವಲ್ಲಿ ಪರಿಸರ ಕೂಡ ಪ್ರಮುಖವಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರು ಓದುವ ಕೋಣೆ ವಾತಾವರಣ ಓದಿನ ಅಭಿರುಚಿಗೆ ಅನುಗುಣವಾಗಿ ಇರಲಿ. ಹೋಂ ವರ್ಕ್​ ಅನ್ನು ಮಾಡಲು ಅವರಿಗೆ ಅನುಕೂಲವಾಗುವಂತೆ ಟೇಬಲ್​ ಮತ್ತು ಪುಸ್ತಕದ ರ್ಯಾಕ್​ ಅನ್ನು ರೂಮಿನ ಒಂದು ಕೋಣೆಯಲ್ಲಿ ಜೋಡಿಸಿಡಿ. ಇದರ ಜೊತೆಗೆ ಅವರಿಷ್ಟವಾದ ಗೊಂಬೆ, ಕಥೆ ಪುಸ್ತಕ ಮತ್ತು ಪಠ್ಯ ಪುಸ್ತಕವನ್ನು ಜೋಡಿಸಿದೆ. ಜೊತೆಗೆ ಅವರಿಗೆ ಆಟವಾಡಲು ಮತ್ತು ಓದಲು ಕೆಲವು ಸಮಯವನ್ನು ನಿಗದಿ ಪಡಿಸಿ. ಅವರಿಷ್ಟವಾದ ಕಥೆಯನ್ನು ಓದಿದ ಬಳಿಕ ಹೋಂವರ್ಕ್​ ಅನ್ನು ಮಾಡಲು ಬಿಡಿ ಅಥವಾ ಹೋಂ ವರ್ಕ್​ ಮಾಡಿದರೆ, ಕಥೆ ಹೇಳುವುದಾಗಿ ತಿಳಿಸಿದೆ. ಈ ಎಲ್ಲ ಚಟುವಟಿಕೆಗಳು ಅವರಲ್ಲಿ ಶಿಕ್ಷಣದ ಆಸಕ್ತಿಯನ್ನು ಹೆಚ್ಚಿಸುತ್ತದೆ.

ಇಷ್ಟೇ ಅಲ್ಲದೇ, ಮಕ್ಕಳಿಗೆ ಸದಾ ಓದು ಎಂಬುವ ಬದಲು ನಿರ್ದಿಷ್ಟ ಸಮಯವನ್ನು ನಿಗದಿಸಿ, ಅದರ ಅನುಸಾರ ಅವರಲ್ಲಿ ಓದುವ ಅಭ್ಯಾಸ ರೂಢಿಸಿ. ಮಕ್ಕಳು ದೊಡ್ಡವರು ಜೊತೆಯಲ್ಲಿದ್ದಾಗ ಓದುವುದು ಮತ್ತು ಬರೆಯುವ ಅಭ್ಯಾಸವನ್ನು ಹೆಚ್ಚು ಹೊಂದಿರುತ್ತಾರೆ ಎಂಬುದು ಮರೆಯಬೇಡಿ. ವಿಜ್ಞಾನ ಮತ್ತು ಗಣಿತದ ಅಭ್ಯಾಸಗಳಿಗೆ ಪ್ರತಿನಿತ್ಯದ ಜೀವನದ ಉದಾಹರಣೆಯನ್ನು ಹೊಂದಿರುತ್ತದೆ. ಇದನ್ನು ವಿವರಿಸಿ ಅವರಿಗೆ ತಿಳಿಸಿ, ಇದರಿಂದ ಅವರ ಓದಿನ ಅಭ್ಯಾಸ ಹೆಚ್ಚಿಸಬಹುದು. ಜೊತೆಗೆ ಇದು ಅವರಲ್ಲಿ ನೆನಪಿನಲ್ಲಿ ಉಳಿಯಲು ಸಾಧ್ಯವಾಗಿಸುತ್ತದೆ. ಮಕ್ಕಳಿಗೆ ಆಸಕ್ತಿ ಹೊಂದಿರದ ವಿಷಯಗಳಲ್ಲೂ ಅವರಲ್ಲಿ ಆಸಕ್ತಿ ಮೂಡಿಸಿ ಕಲಿಸುವುದು ಹೇಗೆ ಎಂಬುದು ಅರಿಯುವುದು ಮುಖ್ಯ. ಪ್ರತಿನಿತ್ಯದ ಓದು ಅವರಲ್ಲಿ ಶಿಸ್ತು ಬೆಳೆಸಲು ಸಾಧ್ಯವಾಗಿಸುತ್ತದೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣದ ಬಳಕೆ ಯುವಜನತೆ ಮತ್ತು ಮಕ್ಕಳಲ್ಲಿ ಖಿನ್ನತೆ ಉಂಟು ಮಾಡಲ್ಲ: ಸಂಶೋಧನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.