ETV Bharat / state

ಹದಿನೈದು ಲಕ್ಷ ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ತುಮಕೂರಿನ ವ್ಯಕ್ತಿ

ಸುಮಾರು‌ 300 ಗ್ರಾಂ ತೂಗುವ ಚಿನ್ನಾಭರಣವನ್ನು ಹಿಂತಿರುಗಿಸಿ ತುಮಕೂರಿನ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ.

Etv Bharattumkur-man-has-handover-the-gold-to-lady-who-lost
Etv Bharatಹದಿನೈದು ಲಕ್ಷ ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ತುಲಕೂರಿನ ವ್ಯಕ್ತಿ
author img

By

Published : Oct 11, 2022, 4:15 PM IST

ತುಮಕೂರು: ಇಲ್ಲಿನ ವಕ್ಕೋಡಿ ಗ್ರಾಮದ ಗುರುರಾಜ್ ಎಂಬುವವರು ಕಳೆದು ಹೋದ ಬ್ಯಾಗ್​ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಶಿವಮೊಗ್ಗ ಮೂಲದ ಕುಟುಂಬವೊಂದು 300 ಗ್ರಾಂ ಚಿನ್ನ ಇದ್ದು ಬ್ಯಾಗ್​ ಕಳೆದುಕೊಂಡಿತ್ತು. ಪೊಲೀಸರ ಸಹಾಯದಿಂದ ಗುರುರಾಜ್​ ಅವರು ಬ್ಯಾಗನ್ನು ಮಾಲೀಕರು ಮರಳಿಸಿದ್ದಾರೆ.

ತುಮಕೂರು ತಾಲೂಕಿನ ವಕ್ಕೋಡಿ ಗ್ರಾಮದ ಗುರುರಾಜ್ ನ್ಯಾಯಾಲಯದಲ್ಲಿ ಎಫ್​ಡಿಎ ಆಗಿ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗ ರೈಲ್ವೆ‌ ನಿಲ್ದಾಣದ ಲಿಫ್ಟ್​ನಲ್ಲಿ ಬ್ಯಾಗ್ ಪತ್ತೆಯಾಗಿತ್ತು. ರೈಲು ತುಂಬಾ ಬ್ಯಾಗ್ ಕಳೆದುಕೊಂಡವರನ್ನು ಹುಡುಕಿದ್ದಾರೆ. ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ತುಮಕೂರಿಗೆ ಬಂದಿದ್ದಾರೆ.

ಹದಿನೈದು ಲಕ್ಷ ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ತುಲಕೂರಿನ ವ್ಯಕ್ತಿ

ಶಿವಮೊಗ್ಗದ ವಿನೋಭಾನಗರದ ಅರ್ಪಿತಾ ಕುಟುಂಬ ಚಿಂತಾಮಣಿಗೆ ಸಂಬಂಧಿಕರ ಮದುವೆಗೆ ಹೊರಟಿತ್ತು. ಈ ವೇಳೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್ ಕಳೆದುಕೊಂಡಿದ್ದರು. ಬ್ಯಾಗ್ ನಾಪತ್ತೆಯಿಂದ ಕಂಗಾಲಾಗಿದ್ದ ಕುಟುಂಬ. ಬ್ಯಾಗ್​ನಲ್ಲಿ 300 ಗ್ರಾಂ ಚಿನ್ನದ ಒಡವೆ ಇದ್ದ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋಗಿದ್ದಾರೆ. ಪೊಲೀಸರು ಗುರುರಾಜ್​ ನೀಡಿದ್ದ ಮಾಹಿತಿ ಆಧರಿಸಿ ಅದೇ ಬ್ಯಾಗ್​ ಎಂದು ಅಂದಾಜಿಸಿದ್ದಾರೆ.

ರೈಲ್ವೆ ಪೊಲೀಸರು ಬ್ಯಾಗ್ ಇದ್ದ ಬಗ್ಗೆ ಗುರುರಾಜ್ ಜೊತೆ ಮೊಬೈಲ್​ನಲ್ಲಿ ಮಾತನಾಡಿದರು. ಅರ್ಪಿತಾ ಕುಟುಂಬಕ್ಕೆ ಬ್ಯಾಗ್ ಹಿಂತಿರುಗಿಸಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗ ನಗರ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ರಾಜ್ಯಕ್ಕೆ ಪ್ರಥಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.