ETV Bharat / state

ಸರ್ಕಾರಿ ಶಾಲೆ ಮುಂದೆ ಜನರು ದಾಖಲಾತಿಗೆ ಸಾಲಿನಲ್ಲಿ‌ ನಿಲ್ಲುವಂತಾಗಬೇಕು: ಸಚಿವ ಸುರೇಶ್ ಕುಮಾರ್ - ಸರ್ಕಾರಿ ಶಾಲೆ

ನರೇಗಾ ಯೋಜನೆಯಡಿ ಶಾಲೆಯಲ್ಲಿ ಆಟದ ಮೈದಾನ, ಕಾಂಪೌಂಡ್, ಕೈತೋಟ, ‌ಮಳೆ ನೀರು ಕೊಯ್ಲು ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಬಹುದು. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

Suresh kumar
ಸಚಿವ ಸುರೇಶ್ ಕುಮಾರ್
author img

By

Published : Feb 20, 2021, 8:48 PM IST

ರಾಮನಗರ: ಸರ್ಕಾರಿ ಶಾಲೆಗಳಲ್ಲೂ ಮಕ್ಕಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಬೇಕಿರುವ ಸೌಲಭ್ಯವನ್ನು ಕಲ್ಪಿಸಿ ಸರ್ಕಾರಿ ಶಾಲೆಯ ಮುಂದೆ ದಾಖಲಾತಿಗೆ ಜನರು ಸರದಿ‌ ಸಾಲಿನಲ್ಲಿ‌ ನಿಲ್ಲುವಂತೆ‌ ಬೆಳೆಯಬೇಕು ಎಂದು‌ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ‌ ಸಚಿವ‌ ಎಸ್.ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಕಣ್ವ ಡಯಾಗ್ನಾಸ್ಟಿಕ್​​ ಡಾ. ವೆಂಕಟಪ್ಪ ಅವರು ಹೊಂಗನೂರು ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿರುತ್ತಾರೆ ಹಾಗೂ ಶಾಲೆಗೆ ಬೇಕಿರುವ ಮೂಲಭೂತ ವ್ಯವಸ್ಥೆ ಕಲ್ಪಿಸಲು ಮುಂದೆ ಬಂದಿರುತ್ತಾರೆ. ಈ ಹಿನ್ನೆಲೆ ಸಚಿವರು ಇಂದು ಚನ್ನಪಟ್ಟಣ ತಾಲೂಕಿನ ಹೊಂಗನೂರು ಶಾಲೆಗೆ ಭೇಟಿ ನೀಡಿ ಚರ್ಚಿಸಿದರು.

ಹೊಂಗನೂರು ಶಾಲೆ 4.5 ಎಕರೆ ಸ್ಥಳಾವಕಾಶ ಹೊಂದಿದ್ದು, ಇಲ್ಲಿ ಕ್ರೀಡೆ, ಸಂಸ್ಕೃತಿಕ ಚಟುವಟಿಕೆ, ಪಠ್ಯ ಚಟುವಟಿಕೆ ನಡೆಸಲು ಮಕ್ಕಳಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಬಹುದು. ಇದಕ್ಕೆ ಒಳ್ಳೆಯ ರೀತಿಯಲ್ಲಿ ಯೋಜನೆ ರೂಪಿಸಿ ಡಾ. ವೆಂಕಟಪ್ಪ ಅವರು ಶಾಲೆ ಅಭಿವೃದ್ಧಿಪಡಿಸಲು ಮುಂದೆ ಬಂದಿರುವುದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ನರೇಗಾ ಯೋಜನೆಯಡಿ ಶಾಲೆಯಲ್ಲಿ ಆಟದ ಮೈದಾನ, ಕಾಂಪೌಂಡ್, ಕೈತೋಟ, ‌ಮಳೆ ನೀರು ಕೊಯ್ಲು ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಬಹುದು. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ‌‌‌‌. ಮುಂದಿನ ಶೈಕ್ಷಣಿಕ ವರ್ಷ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಿ ಎಂದರು. ಹೊಂಗನೂರು ಭಾಗದಿಂದ ಬಹಳಷ್ಟು ವಿದ್ಯಾರ್ಥಿಗಳು ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಚನ್ನಪಟ್ಟಣಕ್ಕೆ ತೆರಳುತ್ತಾರೆ. ಹೊಂಗನೂರಿನಲ್ಲಿ ಎಲ್​ಕೆಜಿಯಿಂದ ಪಿಯುಸಿವರೆಗೂ ವಿದ್ಯಾಭ್ಯಾಸ ನೀಡಲು ಕೆಪಿಎಸ್ ಶಾಲೆಯಾಗಿ ಪರಿವರ್ತಿಸಲು ಅಥವಾ ಸೂಕ್ತ ಯೋಜನೆ ರೂಪಿಸಲು ಚಿಂತಿಸಲಾಗುವುದು ಎಂದರು.

ಇದನ್ನೂ ಓದಿ: ರಾಜ್ಯಕ್ಕೆ ಕೊರೊನಾ 2ನೇ ಅಲೆ ಭೀತಿ : ವಿದೇಶಕ್ಕೆ ಪ್ರಯಾಣ ಬೆಳಸುವವರಿಗೆ ಟಫ್ ರೂಲ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.