ETV Bharat / state

ಮೈಸೂರಲ್ಲಿ ಸರಗಳ್ಳನ ಬಂಧನ: ಚಿನ್ನಾಭರಣ ವಶ

ನಗರದ ವಿವಿಧ ಪೊಲೀಸ್​ ಠಾಣೆಗಳಲ್ಲಿ ದಾಖಲಾಗಿರುವ ಸರಗಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

author img

By

Published : Jan 4, 2020, 7:15 AM IST

ಸರಗಳ್ಳನನ್ನು ಬಂಧಿಸಿದ ಪೊಲೀಸರು
Police arrested chain snatcher

ಮೈಸೂರು: ವಿವಿಧ ಪೊಲೀಸ್​ ಠಾಣೆಗಳಲ್ಲಿ ಸರಗಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿ ಲಕ್ಷಗಟ್ಟಲೆ ಬೆಲೆ ಬಾಳುವ ಆಭರಣಗಳು ಸೇರಿದಂತೆ ಬೈಕ್​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸತ್ಯನಗರ ನಿವಾಸಿ ಸೈಯದ್ ಉಮ್ಮರ್(39) ಬಂಧಿತ ಆರೋಪಿ. ವಿದ್ಯಾರಣ್ಯಪುರಂ ಪೊಲೀಸರು ಜೆಪಿ ನಗರದ ಲಿಂಕ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ಬೈಕ್​ ಮೇಲೆ ಬರುತ್ತಿದ್ದ ಆರೋಪಿ ಉಮ್ಮರ್​ನನ್ನು ತಡೆದು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಆಗ ವಿವಿಧ ಠಾಣೆಗಳಲ್ಲಿ ಸರಗಳ್ಳತನ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.

ಬಂಧಿತನಿಂದ 9.32 ಲಕ್ಷ ರೂ. ಮೌಲ್ಯದ 233 ಗ್ರಾಂ ತೂಕದ 7 ಚಿನ್ನದ ಮಾಂಗಲ್ಯ ಸರಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಹೊಂಡಾ ಆಕ್ಟಿವಾ ಸ್ಕೂಟರ್​ ವಶಪಡಿಸಿಕೊಳ್ಳಲಾಗಿದೆ.

Intro:ಸರಗಳ್ಳ ಬಂಧನBody:ಮೈಸೂರು: ಸರಗಳ್ಳನನ್ನು ಬಂಧಿಸಿ, ಆತನಿಂದ ೯.೩೨ ಲಕ್ಷ ರೂ ಬೆಲೆಬಾಳುವ ೨೩೩ ಗ್ರಾಂ ತೂಕದ ೭ ಚಿನ್ನದ ಮಾಂಗಲ್ಯ ಸರ, ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಸತ್ಯನಗರ ನಿವಾಸಿ ಸೈಯದ್ ಉಮ್ಮರ್(೩೯) ಬಂಧಿತ ಸರಗಳ್ಳ. ವಿದ್ಯಾರಣ್ಯಪುರಂ ಪೊಲೀಸರು ಜೆ.ಪಿ.ನಗರದ ಲಿಂಕ್ ರಸ್ತೆಯಲ್ಲಿ ಸರಗಳ್ಳತನ ತಡೆ ಸಂಬಂಧ ವಾಹನಗಳನ್ನು ಚೆಕ್ ಮಾಡುತ್ತಿರುವಾಗ ನಂಜನಗೂಡು ರಸ್ತೆಯ ಕಡೆಯಿಂದ ಜೆ.ಪಿ.ನಗರದ ಲಿಂಕ್ ರಸ್ತೆಯಲ್ಲಿ ಬಿಳಿ ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಅನುಮಾನಾಸ್ಪದವಾಗಿ ಬರುತ್ತಿದ್ದ ಈತನನ್ನು ಹಿಡಿದು ಪರಿಶೀಲಿಸಲಾಗಿ, ನೊಂದಣಿ ಸಂಖ್ಯೆ ಕೆಎ-೫೩-ಆರ್-೨೧೦೯ ಎಂದು ಇದ್ದು, ಸ್ಕೂಟರ್‌ನ ಡಿಕ್ಕಿ ಪರಿಶೀಲಿಸಲಾಗಿ ಸ್ಕೂಟರ್‌ನ ಡಿಕ್ಕಿಯಲ್ಲಿ ಕೆಎ-೫೫-ಆರ್-೫೬೨೩ ಎಂದು ನಮೂದಾಗಿರುವ ನಂಬರ್ ಪ್ಲೇಟ್, ನಂಬರ್ ಸ್ಟಿಕ್ಕರ್‌ಗಳು ಇದ್ದು, ಆತನ ಅಂಗಶೋಧನೆ ಮಾಡಲಾಗಿ ಆತನ ಪ್ಯಾಂಟ್ ಜೇಬಿನಲ್ಲಿ ಒಂದು ಚಿನ್ನದ ಸರದ ತುಂಡು ಸಿಕ್ಕಿದ್ದು, ಈತನನ್ನು ಠಾಣೆಗೆ ಕರೆತಂದು ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ, ಈತನು ವಿದ್ಯಾರಣ್ಯಪುರಂ, ಕುವೆಂಪುನಗರ ಹಾಗೂ ಆಲನಹಳ್ಳಿ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಸರಗಳ್ಳತನಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈತನ ಮಾಹಿತಿಯಿಂದ ೭ ಸರಗಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ೯.೩೨ ಲಕ್ಷ ರೂ.ಮೌಲ್ಯದ ೨೩೩ ಗ್ರಾಂ ತೂಕದ ೭ ಚಿನ್ನದ ಮಾಂಗಲ್ಯ ಸರಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಹೊಂಡಾ ಆಕ್ಟಿವಾ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪತ್ತೆ ಕಾರ್ಯದಿಂದ ವಿದ್ಯಾರಣ್ಯಪುರಂ ಠಾಣೆಯ-೦೫ ಸರಗಳ್ಳತನ ಪ್ರಕರಣ, ಕುವೆಂಪುನಗರ ಠಾಣೆ ಮತ್ತು ಆಲನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.Conclusion:ಸರಗಳ್ಳ ಬಂಧನ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.