WATCH-ತುಮಕೂರು ದಸರಾದಲ್ಲಿ ಭಕ್ತರನ್ನು ಆಕರ್ಷಿಸುತ್ತಿದೆ ರೋಬೋಟ್ ಆನೆ - robot elephant - ROBOT ELEPHANT
🎬 Watch Now: Feature Video
Published : Oct 5, 2024, 3:21 PM IST
ತುಮಕೂರು: ನಗರದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದಲ್ಲಿ ರೋಬೋಟ್ ಆನೆ ಭಕ್ತರನ್ನು ಸೆಳೆಯುತ್ತಿದೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ಶಕ್ತಿ ದೇವತೆಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಅದರ ಪಕ್ಕದಲ್ಲಿ ರೋಬೋಟ್ ಆನೆಯನ್ನು ಕೂಡ ಇರಿಸಲಾಗಿದೆ.
ಸ್ವಿಚ್ ಮೂಲಕ ಆನೆಯ ಕಿವಿ ಹಾಗೂ ಸೊಂಡಿಲನ್ನು ಆಪರೇಟ್ ಮಾಡಲಾಗುತ್ತಿದೆ. ಜಿಲ್ಲೆಯ ಕುಣಿಗಲ್ ತಾಲೂಕಿನ ಶ್ರೀಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಈ ರೋಬೋಟ್ ಆನೆಯನ್ನು ಪೇಟಾ ಸಂಸ್ಥೆಯು ದಾನವಾಗಿ ನೀಡಿದೆ. ತುಮಕೂರು ದಸರಾ ದೇವಿಗೆ ಚಂದ್ರಗಂಟಿ ಅಲಂಕಾರವನ್ನು ಮಾಡಿ ಪೂಜಿಸಲಾಗುತ್ತಿದೆ.
ಕಳೆದ ಮೂರು ದಿನಗಳಿಂದ ದೇವಿಗೆ ವಿವಿಧ ಅಲಂಕಾರಗಳನ್ನು ಮಾಡಿ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ. ಈ ನಡುವೆ ಈ ವೇದಿಕೆಯಲ್ಲಿ ಬಹು ಆಕರ್ಷಣೀಯವಾಗಿ ಯಡಿಯೂರು ಸಿದ್ದಲಿಂಗೇಶ್ವರ ದೇಗುಲದಿಂದ ತರಿಸಲಾಗಿರುವ "ರೋಬೋಟ್ ಆನೆಯು ಭಕ್ತರನ್ನು ಸೆಳೆಯುತ್ತಿದೆ. ಈ ಮೂಲಕ ಈ ಮಹೋತ್ಸವದಲ್ಲಿ ಒಂದು ಕೊರತೆಯನ್ನು ಈ ರೋಬೋಟ್ ಆನೆ ನೀಗಿಸಿದೆ ಎಂದೇ" ಹೇಳಬಹುದಾಗಿದೆ ಎನ್ನುತ್ತಾರೆ ಅರ್ಚಕರು.
ಇದನ್ನೂ ಓದಿ: ಒಂದೇ ಗರ್ಭಗುಡಿಯಲ್ಲಿ ನವದುರ್ಗೆಯರು: ಹಾವೇರಿಯಲ್ಲಿ ಶರನ್ನವರಾತ್ರಿ ಸಂಭ್ರಮ - NAVADURGA