ETV Bharat / state

ಬರೋಬ್ಬರಿ 511 ಕಳವು ಪ್ರಕರಣ ಬೇಧಿಸಿದ ಮೈಸೂರು ಪೊಲೀಸರು

ಮೈಸೂರು ಪೊಲೀಸರು 2018-2019 ನೇ ಸಾಲಿನಲ್ಲಿ 511 ಕಳವು ಪ್ರಕರಣಗಳನ್ನ ಪತ್ತೆ ಹಚ್ಚಿದ್ದಾರೆ. ಅಲ್ಲದೆ, 415 ಆರೋಪಿಗಳನ್ನು ಬಂಧಿಸಿ, 5,96,67,763 ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

author img

By

Published : Jul 2, 2019, 5:17 PM IST

ಮೈಸೂರು ಪೊಲೀಸರು.

ಮೈಸೂರು: 2018-2019 ನೇ ಸಾಲಿನಲ್ಲಿ 511 ಕಳವು ಪ್ರಕರಣಗಳನ್ನ ಪತ್ತೆ ಹಚ್ಚಿರುವ ಮೈಸೂರು ಪೊಲೀಸರು, ಒಟ್ಟು 415 ಆರೋಪಿಗಳನ್ನು ಬಂಧಿಸಿ, 5,96,67,763 ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

2018 ರಲ್ಲಿ 621 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 341 ಪ್ರಕರಣಗಳು ಪತ್ತೆಯಾಗಿವೆ. ಕಳ್ಳತನವಾದ 7,04,30,703 ರೂ. ಮೌಲ್ಯದ ವಸ್ತುಗಳಲ್ಲಿ 4,07,14,263 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2019 ರಲ್ಲಿ 288 ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ 170 ಪ್ರಕರಣಗಳನ್ನು ಬೇಧಿಸಿದ್ದು, 3,34,49,969 ರೂ. ಮೌಲ್ಯದ ಕಳುವಾದ ವಸ್ತುಗಳಲ್ಲಿ 1,89,53,500 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 2018 ಹಾಗೂ 2019 ರಲ್ಲಿ ಒಟ್ಟು 909 ಪ್ರಕರಣಗಳು ದಾಖಲಾಗಿದ್ದು, 511 ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು, 10,47,80,762 ರೂ. ಮೌಲ್ಯದ ಕಳ್ಳತನವಾದ ವಸ್ತುಗಳಲ್ಲಿ 5,96,67,763 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

6 ಕೆಜಿ 321 ಗ್ರಾಂ ಚಿನ್ನಾಭರಣ, 8 ಕೆ.ಜಿ. ಬೆಳ್ಳಿ, 211 ಬೈಕ್, 27 ಕಾರು ಹಾಗೂ ಜೀಪ್, 35 ಇತರೆ ವಾಹನಗಳು, 131 ಮೊಬೈಲ್, 12 ಲ್ಯಾಪ್‍ಟಾಪ್, 1,12,09,550 ಕೋಟಿ ರೂ. ನಗದು, 30 ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಆಪರೇಷನ್ ಸನ್‍ರೈಸ್ ಮತ್ತು ಸನ್‍ಸೆಟ್, ಆಪರೇಷನ್ ಫಾಸ್ಟ್​ ಟ್ರ್ಯಾಕ್​, ಆಪರೇಷನ್ ಡಿಕಾಯ್​ ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ಪೊಲೀಸರು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.

ಆಷಾಢ ಸಿದ್ಧತೆ:

ಜುಲೈ 5,12,19, 26 ರಂದು ಆಷಾಢ ಶುಕ್ರವಾರ ಮತ್ತು ಜುಲೈ 24 ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯೋತ್ಸವಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದೆ. 8 ಎಸಿಪಿ, 31 ಇನ್‍ಸ್ಪೆಕ್ಟರ್, 28 ಪಿಎಸ್‍ಐ, 124 ಎಎಸ್‍ಐ, 806 ಪೇದೆಗಳು, 160 ಮಹಿಳಾ ಪೇದೆಗಳು, 174 ಹೋಂ ಗಾರ್ಡ್ಸ್​ ನಿಯೋಜಿಸಲಾಗಿದೆ. ಅಲ್ಲದೇ ನಗರ ಕಮಾಂಡೋ ಪಡೆ, ಅಶ್ವ ದಳ, 8 ಸಿಎಆರ್ ತುಕಡಿ, 4 ಕೆಎಸ್‍ಆರ್​ಪಿ ತುಕಡಿ, 3 ಎಎಸ್‍ಸಿ ಟೀಂ, 4 ಆಂಬ್ಯುಲೆನ್ಸ್, 4 ಅಗ್ನಿಶಾಮಕ ದಳ, 2 ಇಂಟರ್​ಸೆಪ್ಟರ್ ವಾಹನ, ಮೊಬೈಲ್ ಕಮಾಂಡ್ ಸೆಂಟರ್ ವಾಹನ, ಗರುಡ ವಾಹಗಳನ್ನು ಬಳಸಿಕೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ವಿವರಿಸಿದರು.

Intro:ಸುದ್ದಿಗೋಷ್ಠಿBody:
ಮೌಲ್ಯಯುತ ವಸ್ತುಗಳು ವಾಪಸ್ ಸಿಕ್ಕಿದ್ದಕ್ಕೆ ಪೊಲೀಸರಿಗೆ ಸೆಲ್ಯೂಟ್ ಎಂದು ಮಾಲೀಕರು
ಮೈಸೂರು: 2018-2019ನೇ ಸಾಲಿನಲ್ಲಿ 511 ವಿವಿಧ ಸ್ವತ್ತು ಕಳುವು ಪ್ರಕರಣಗಳು ಪತ್ತೆ ಹಚ್ಚಿ, 415 ಆರೋಪಿಗಳ ಬಂಧಿಸಿ, 5,96,67,763 ಮೌಲ್ಯದ ಮಾಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
2018ರಲ್ಲಿ 621 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 341 ಪ್ರಕರಣಗಳು ಪತ್ತೆಯಾಗಿ 7,04,30,703 ಕಳುವಾದ ಒಟ್ಟು ಮೌಲ್ಯದಲ್ಲಿ 4,07,14,263 ಮೌಲ್ಯದ ವಸ್ತುಗಳನ್ನು ಅಮಾನತುಪಡಿಸಿಲಾಗಿದ್ದು, 2019ರಲ್ಲಿ 288 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 170 ಪ್ರಕರಣಗಳನ್ನು ಬೇಧಿಸಿದ್ದು, 3,34,49,969 ಮೌಲ್ಯದ ಕಳುವಾದ ವಸ್ತುಗಳಲ್ಲಿ 1,89,53,500 ಮೌಲ್ಯದ ವಸ್ತುಗಳನ್ನು ಅಮಾನತ್ತುಗೊಳಿಸಲಾಗಿದ್ದು, 2018 ಹಾಗೂ 2019ರಲ್ಲಿ ಒಟ್ಟು 909 ಪ್ರಕರಣ ದಾಖಲಾಗಿದ್ದು, 511 ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು, 10,47,80,762 ಕಳುವಾದ ಮೌಲ್ಯಗಳಲ್ಲಿ, 5,96,67,763 ಮೌಲ್ಯದ ವಸ್ತುಗಳನ್ನು ಅಮಾನತಗೊಳಿಸಲಾಗಿದೆ.
6 ಕೆಜಿ 321 ಗ್ರಾಂ ಚಿನ್ನಾಭರಣ, 8 ಕೆ.ಜಿ.ಬೆಳ್ಳಿ, 211 ಬೈಕ್, 27 ಕಾರು ಹಾಗೂ ಜೀಪ್, 35 ಇತರೇ ವಾಹನಗಳು, 131 ಮೊಬೈಲ್, 12 ಲ್ಯಾಪ್‍ಟಾಪ್, 1,12,09,550 ಕೋಟಿ ರೂ.ನಗದು, 30 ಜಾನುವಾರು ವಶಪಡಿಸಿಕೊಳ್ಳಲಾಗಿದೆ.
ಆಪರೇಷನ್ ಸನ್‍ರೈಸ್ ಮತ್ತು ಸನ್‍ಸೆಟ್, ಆಪರೇಷನ್ ಫಾಸ್ಟ್ ಟ್ರಾಕ್, ಆಪರೇಷನ್ ಡಿಕಾಯ್ ವಿವಿಧ ಕಾರ್ಯಕ್ರಮಗಳ ಮೂಲಕ ಪೊಲೀಸರು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹೇಳಿದರು.
ಆಷಾಢ ಸಿದ್ದತೆ:
ಜುಲೈ 5,12,19,26 ಆಷಾಢ ಶುಕ್ರವಾರ ಮತ್ತು  ಜುಲೈ 24ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯೋತ್ಸವಕ್ಕೆ ಪೊಲೀಸ್ ಬಿಗಿಬಂದೋ ವ್ಯವಸ್ಥೆ ಮಾಡಲಾಗಿದ್ದು, 8 ಎಸಿಪಿ, 31 ಮಂದಿ ಇನ್‍ಸ್ಪೆಕ್ಟರ್, 28 ಪಿಎಸ್‍ಐ, 124 ಎಎಸ್‍ಐ, 806 ಪೇದೆಗಳು, 160 ಮಹಿಳಾ ಪೇದೆಗಳು, 174 ಹೋಂಗಾರ್ಡ್ ನಿಯೋಜಿಸಲಾಗಿದ್ದು, ಅಲ್ಲದೇ ನಗರ ಕಮಾಂಡೋ ಪಡೆ, ಅಶ್ವರೋಹಿ ದಳ, 8 ಸಿಎಆರ್ ತುಕಡಿ, 4 ಕೆಎಸ್‍ಆರ್‍ಪಿ ತುಕಡಿ, 3 ಎಎಸ್‍ಸಿ ಟೀಂ,4 ಅಂಬ್ಯುಲೆನ್ಸ್, 4 ಅಗ್ನಿಶಾಮಕ ದಳ,  2 ಇಂಟರ್‍ಸೆಪ್ಟರ್ ವಾಹನ, ಮೊಬೈಲ್ ಕಮಾಂಡ್ ಸೆಂಟರ್ ವಾಹನ, ಗರುಡಾ ವಾಹಗಳನ್ನು ಬಳಸಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದರು.Conclusion:ಸುದ್ದಿಗೋಷ್ಠಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.