ETV Bharat / state

ಕಳೆದ 42 ವರ್ಷಗಳಲ್ಲಿ ಇಂತಹ ಪರಿಸ್ಥಿತಿ ನನಗೆ ಬಂದಿರಲಿಲ್ಲ : ಮಾಜಿ ಸಂಸದ ರಮೇಶ್ ಕತ್ತಿ - RAMESH KATTI

ಮಾಜಿ ಸಂಸದ ರಮೇಶ್​ ಕತ್ತಿ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಮಾತನಾಡಿದ್ದಾರೆ. ಕಳೆದ 42 ವರ್ಷಗಳಲ್ಲಿ ಇಂತಹ ಪರಿಸ್ಥಿತಿ ನನಗೆ ಬಂದಿರಲಿಲ್ಲ ಎಂದು ಹೇಳಿದ್ದಾರೆ.

ramesh-katti
ಮಾಜಿ ಸಂಸದ ರಮೇಶ್ ಕತ್ತಿ (ETV Bharat)
author img

By ETV Bharat Karnataka Team

Published : Oct 5, 2024, 3:47 PM IST

Updated : Oct 5, 2024, 4:33 PM IST

ಚಿಕ್ಕೋಡಿ (ಬೆಳಗಾವಿ) : ನಾನು ಕಳೆದ 42 ವರ್ಷಗಳಿಂದ ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಒಡನಾಟ ಇಟ್ಟುಕೊಂಡು 10 ವರ್ಷಗಳ ಕಾಲ ನಿರ್ದೇಶಕನಾಗಿ, ಐದು ವರ್ಷ ಉಪಾಧ್ಯಕ್ಷನಾಗಿ, 27 ವರ್ಷ ಅಧ್ಯಕ್ಷನಾಗಿ ಕಾರ್ಯವನ್ನು ನಿರ್ವಹಿಸಿದ್ದೇನೆ. ಆದರೆ, ಇಂಥ ಪರಿಸ್ಥಿತಿ ನನಗೆ ಎಂದೂ ಬಂದಿರಲಿಲ್ಲ. ಇದರಿಂದ ನಾನು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ಅವರು ಹೇಳಿದ್ದಾರೆ.

ಅವರು ಶುಕ್ರವಾರ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ರಾಜೀನಾಮೆ ನೀಡಿದ ಬಳಿಕ ಶನಿವಾರ ಅವರ ಸ್ವಗೃಹವಾದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಮಾಧ್ಯಮಗೋಷ್ಟಿ ಕರೆದು ಮಾತನಾಡಿದರು. 42 ವರ್ಷಗಳಿಂದ ಡಿಸಿಸಿ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದೇನೆ. ನನಗೆ 60 ವರ್ಷ ಪೂರ್ಣವಾಗಿದೆ. ಹೀಗಾಗಿ ನಾನು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ. ಹೊರಗಡೆ ರಾಜಕಾರಣದಲ್ಲಿ ಬಣ ಇರಬಹುದು. ಆದರೆ, ಡಿಸಿಸಿ ಬ್ಯಾಂಕಿನ ವಿಚಾರಕ್ಕೆ ಬಂದರೆ ಯಾವುದು ಇಲ್ಲಿ ಬಣ ರಾಜಕೀಯ ಇಲ್ಲ. ಆದರೆ, ಇತ್ತೀಚಿಗೆ ಕೆಲವು ನಿರ್ಣಯ ತೆಗೆದುಕೊಳ್ಳುವುದಕ್ಕೆ ನನಗೆ ಒಂದು ಅಂತಿಮ ಹಂತಕ್ಕೆ ಬರೋದಕ್ಕೆ ಆಗಲಿಲ್ಲ. ಕೆಲವರು ಹೊಸ ಸದಸ್ಯತ್ವ ಶಿಫಾರಸು ನೀಡಿದರೆ, ಇನ್ನೂ ಕೆಲವರು ಬೇಡ ಅಂತಿದ್ರು. ಇದರಿಂದ ನೋವಾಗಿ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.

ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿದರು (ETV Bharat)

ಎಲ್ಲ ನಿರ್ದೇಶಕರು ಒಗ್ಗಟ್ಟಾಗಿ ಇದ್ದೇವೆ. ಎಲ್ಲರ ಜೊತೆ ಮಾತನಾಡಿಯೇ ರಾಜೀನಾಮೆ ನೀಡಿದ್ದೇನೆ. ಅವಿಶ್ವಾಸ ನಿರ್ಣಯ ಮಾಡುವ ಚರ್ಚೆ ಆಗಿಲ್ಲ. ಯಾವ ನಿರ್ದೇಶಕರು ನನ್ನ ವಿರುದ್ಧ ಕೆಲಸ ಮಾಡಿಲ್ಲ. ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಿದ್ದಾರೆ. ಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ಬಣ ರಾಜಕಾರಣ ಇಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರಾಜೀನಾಮೆ ನೀಡಿದ್ದೇನೆ ಎಂದು ರಮೇಶ್​ ಕತ್ತಿ ಸ್ಪಷ್ಟಪಡಿಸಿದರು.

ಹೊಸ ಸದಸ್ಯತ್ವ ಮಾಡುವ ವಿಚಾರದಲ್ಲಿ ಗೊಂದಲ‌ ನಿರ್ಮಾಣವಾಗಿತ್ತು. ಅದು ಅತಿರೇಕಕ್ಕೆ ಹೋದ ಕಾರಣ ರಾಜಕಾರಣ ಒತ್ತಡದಿಂದ ನಾನೇ ನಿರ್ಧಾರ ಮಾಡಿದ್ದೇನೆ. ಸದಸ್ಯತ್ವ ಮಾಡುವ ಕುರಿತು ಅಂತಿಮ ತೀರ್ಮಾನಕ್ಕೆ ಆಗದ ಕಾರಣ ರಾಜೀನಾಮೆ ನೀಡಿದ್ದೇ‌‌ನೆ‌. 42 ವರ್ಷದಲ್ಲಿ ನನ್ನ ಕಡೆಯಿಂದ ತಪ್ಪಾಗಿದ್ದರೂ ಅದು ಬ್ಯಾಂಕಿನ ಹಿತದೃಷ್ಟಿಯಿಂದ ಮಾಡಿರಬಹುದು. ‌ತಪ್ಪಿನಿಂದ ಯಾರಿಗಾದರು ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಬ್ಯಾಂಕ್ ಸದೃಢವಾಗಿದೆ. ಯಾರು ಹಣ ವಿತ್ ಡ್ರಾ ಮಾಡಬೇಡಿ. ನನ್ನ ರಾಜೀನಾಮೆಯಿಂದ ಇಟ್ಟಿರುವ ಠೇವಣಿ ವಾಪಸ್​ ಪಡೆಯಬಾರದು ಎಂದು ರೈತರಲ್ಲಿ ಕತ್ತಿ ಮನವಿ ಮಾಡಿದರು.

ಸಿಎಂ ಸಿದ್ದರಾಮಯ್ಯರನ್ನು ಹಾಡಿಹೊಗಳಿದ ರಮೇಶ ಕತ್ತಿ: ಸಿದ್ದರಾಮಯ್ಯ ಸ್ವಚ್ಛ, ದಕ್ಷ ಆಡಳಿತಗಾರ. ನಾವು ಮೊದಲಿನಿಂದಲೂ ಸಿದ್ದರಾಮಯ್ಯರನ್ನು ನೋಡಿಕೊಂಡು ಬಂದವರು. ಅವರು ಜನತಾ ಪರಿವಾರದಿಂದ ಬಂದವರು. ನಾವು ಸಹ ಜನತಾ ಪರಿವಾರದಿಂದ ಬಂದವರು. ಎಲ್ಲೋ, ಏನೋ ಸಿದ್ದರಾಮಯ್ಯನವರ ಮೇಲೆ ಆರೋಪ ಬಂದಿದೆ. ಅದು ನಿಜಾನೋ ಅಥವಾ ಸುಳ್ಳೋ ಎಂಬುದು ಗೊತ್ತಾಗಬೇಕಿದೆ. ಆಡು ಮುಟ್ಟದ ಸೊಪ್ಪಿಲ್ಲ, ಕತ್ತಿ ಸಹೋದರರು ಹೋಗದ ಪಕ್ಷವಿಲ್ಲ ಎಂಬಂತಿದೆ. ಆಗಿನ ರಾಜಕಾರಣಕ್ಕೂ ಈಗಿನ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ಸಿದ್ದರಾಮಯ್ಯ ಬಹಳಷ್ಟು ಬಾರಿ ಹಣಕಾಸು ಸಚಿವಾಲಯವನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ರಾಜಕಾರಣ ತುಂಬಾ ಬದಲಾವಣೆಯಾಗಿದೆ. ಈಗಿನ ರಾಜಕಾರಣ ಮಾಡುವುದು ಕಷ್ಟಕರ. ಒಬ್ಬರ ಮೇಲೆ ಒಬ್ಬರು ಆರೋಪ- ಪ್ರತ್ಯಾರೋಪ ಮಾಡಿಕೊಂಡು ಸಮಾಜದ ಕೆಲಸವನ್ನು ಮರೆಯುತ್ತಿದ್ದಾರೆ ಎಂಬುದು ನನ್ನ ಭಾವನೆ ಎಂದು ರಮೇಶ್​ ಕತ್ತಿ ಹೇಳಿದರು.

ಇದನ್ನೂ ಓದಿ : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ಸ್ವಇಚ್ಛೆಯಿಂದ ರಾಜೀನಾಮೆ: ಬಾಲಚಂದ್ರ ಜಾರಕಿಹೊಳಿ - Balachandra Jarkiholi

Last Updated : Oct 5, 2024, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.