ETV Bharat / state

ಎಲ್ಲರೂ ಮಾಸ್ಕ್​ ಧರಿಸುವ ಅವಶ್ಯಕತೆ ಇಲ್ಲ: ಡಾ.ಕೆ.ಸುಧಾಕರ್ ಸ್ಪಷ್ಟನೆ

ರಾಜ್ಯದಲ್ಲಿ ಯಾವುದೇ ಕೊರೊನಾ ವೈರಸ್​ನಿಂದ ಬಳಲುವವರು ಪತ್ತೆಯಾಗಿಲ್ಲ. ರೋಗದ ಲಕ್ಷಣ ಇರುವವರು ಮಾತ್ರ ಮಾಸ್ಕ್​ಗಳನ್ನು ಹಾಕಿಕೊಳ್ಳಬೇಕು. ಇಲ್ಲವೇ ನೆಗಡಿ, ಕೆಮ್ಮಿನಿಂದ ಬಳಲುವವರು ಸರ್ಜಿಕಲ್ ಮಾಸ್ಕ್​ ಧರಿಸಬೇಕು ಎಂದು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್​ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದರು.

minister dr.sudhakar
ಸಚಿವ ಡಾ.ಕೆ.ಸುಧಾಕರ್
author img

By

Published : Mar 9, 2020, 7:22 AM IST

ಮಂಡ್ಯ: ರಾಜ್ಯದಲ್ಲಿ ಯಾವುದೇ ಕೊರೊನಾ ವೈರಸ್​ನಿಂದ ಬಳಲುವವರು ಪತ್ತೆಯಾಗಿಲ್ಲ. ರೋಗದ ಲಕ್ಷಣ ಇರುವವರು ಮಾತ್ರ ಮಾಸ್ಕ್​ಗಳನ್ನು ಹಾಕಿಕೊಳ್ಳಬೇಕು. ಇಲ್ಲವೇ ನೆಗಡಿ, ಕೆಮ್ಮಿನಿಂದ ಬಳಲುವವರು ಸರ್ಜಿಕಲ್ ಮಾಸ್ಕ್​ ಧರಿಸಬೇಕು ಎಂದು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್​ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಸಚಿವ ಡಾ.ಕೆ.ಸುಧಾಕರ್

ನಗರದ ‌ಮಿಮ್ಸ್‌ಗೆ ಭೇಟಿ ನೀಡಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋವಿಡ್​-19 ರೋಗದ ಬಗ್ಗೆ ತಪ್ಪು ಗ್ರಹಿಕೆಗಳು ಹರಡುತ್ತಿವೆ. ಇದಕ್ಕಾಗಿ ನಿತ್ಯ ಸಂಜೆ 6ಗಂಟೆಗೆ ಸರ್ಕಾರದಿಂದ ಬುಲೆಟಿನ್ ಮೂಲಕ ವಿವರಣೆ ನೀಡಲಾಗುತ್ತಿದೆ. ದಯವಿಟ್ಟು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಹಲವು ಆರ್ಥಿಕ ಇತಿಮಿತಿಗಳ ನಡುವೆ ಯಡಿಯೂರಪ್ಪ ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ. ಸಾಮಾಜಿಕ ನ್ಯಾಯಕ್ಕೆ, ಮಕ್ಕಳು ಮತ್ತು ಮಹಿಳೆಯರ ವಿಭಾಗ, ಮೂಲ ಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.

ಬಜೆಟ್​ ಬಗ್ಗೆ ನೂತನ ಸಚಿವರನ್ನು ಕೇಳಿ ಎಂದು ಹೆಚ್​ಡಿಕೆ ಇತ್ತೀಚೆಗೆ ನೀಡಿದ ಹೇಳಿಕೆಗೆ ಉತ್ತರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.