ETV Bharat / state

ರಾಸುಗಳ ನಿಗೂಢ ಸಾವು ಪ್ರಕರಣ: ಮೃತ ಎತ್ತುಗಳ ಸಂಖ್ಯೆ 30ಕ್ಕೆ ಏರಿಕೆ - mandya same family 30 cattles died news

ಮಂಡ್ಯದ ಕೀಲಾರ ಗ್ರಾಮದಲ್ಲಿ ರಾಸುಗಳು ನಿಗೂಢವಾಗಿ ಸಾವಿಗೀಡಾಗುತ್ತಿದ್ದು, ರೈತ ಕುಟುಂಬ ಕಂಗಾಲಾಗಿದೆ.

same family 30 cattles died in mandya
ಕೀಲಾರ ಗ್ರಾಮದ ಒಂದೇ ಕುಟುಂಬದಲ್ಲಿ ಸಾವನ್ನಪ್ಪುತ್ತಿರುವ ರಾಸುಗಳು
author img

By

Published : Sep 24, 2021, 2:25 PM IST

ಮಂಡ್ಯ: ತಾಲೂಕಿನ ಕೀಲಾರ ಗ್ರಾಮದ ಒಂದೇ ಕುಟುಂಬದಲ್ಲಿನ ರಾಸುಗಳ ಸಾವು ಮತ್ತೆ ಮುಂದುವರೆದಿದೆ. 14 ದಿನಗಳ ಅಂತರದಲ್ಲಿ ಮತ್ತೊಂದು ಎತ್ತು ಮೃತಪಟ್ಟಿದ್ದು, ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ.

ಚೆನ್ನಾಗಿಯೇ ಇದ್ದ ಎತ್ತು ಇಂದು ಮುಂಜಾನೆ 6 ಗಂಟೆಗೆ ಅಸ್ವಸ್ಥಗೊಂಡು ಒದ್ದಾಡಲು ಆರಂಭಿಸಿತು. ತಕ್ಷಣವೇ ರೈತ ವೈದ್ಯರಿಗೆ ಮಾಹಿತಿ ನೀಡಿದ್ದು, ಕೀಲಾರ ಪಶುವೈದ್ಯಾಧಿಕಾರಿ ತಂಡ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಿದ್ದಾರೆ. ಆದರೂ ಚಿಕಿತ್ಸೆ ನೀಡಿದ 9 ಗಂಟೆ ಬಳಿಕ ಎತ್ತು ಮೃತಪಟ್ಟಿದೆ. ವಿಪರ್ಯಾಸ ಎಂದರೆ, ರೈತನ ಮನೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ಕ್ಯಾಮರಾ ಕಣ್ಗಾವಲು ಹೊರತಾದ ಸ್ಥಳದಲ್ಲಿ ಎತ್ತು ಮೃತಪಟ್ಟಿದೆ.

ಮೃತ ಎತ್ತಿನ ಮರಣೋತ್ತರ ಪರೀಕ್ಷೆ:

ಎತ್ತು ಮೃತಪಟ್ಟ ಹಿನ್ನೆಲೆಯಲ್ಲಿ ಇಲಾಖೆಯ ನಿರ್ದೇಶಕರಾದ ಡಾ.ಕೃಷ್ಣಾರೆಡ್ಡಿ(ಬೆಂಗಳೂರು), ಡಾ.ವೀರಭದ್ರಯ್ಯ(ಮೈಸೂರು), ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನ ತಜ್ಞವೈದ್ಯರಾದ ಡಾ.ರವೀಂದ್ರ ಹೆಗ್ಗಡೆ, ಡಾ.ಶಿವಶಂಕರ, ಡಾ.ಸಂತೋಷ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಇದೇ ತಂಡ ಮೃತ ಎತ್ತಿನ ಮರಣೋತ್ತರ ಪರೀಕ್ಷೆಯನ್ನೂ ನಡೆಸಿ, ರಾಸುವಿನ ದೇಹದ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ಕೊಂಡೊಯ್ಯಲಾಯಿತು.

ಕೀಲಾರ ಗ್ರಾಮದ ಒಂದೇ ಕುಟುಂಬದಲ್ಲಿ ಸಾವನ್ನಪ್ಪುತ್ತಿರುವ ರಾಸುಗಳು

ಇದನ್ನೂ ಓದಿ: ಮಂಡ್ಯ: ಜಾನುವಾರುಗಳ ನಿಗೂಢ ಸಾವು; ರೈತ ಕುಟುಂಬ ಕಂಗಾಲು

30ಕ್ಕೇರಿದ ರಾಸುಗಳ ಸಾವಿನ ಸಂಖ್ಯೆ:

ಮೃತಪಟ್ಟ ಎತ್ತು ಸೇರಿದಂತೆ ಒಟ್ಟು ಸಾವನ್ನಪ್ಪಿದ ರಾಸುಗಳ ಸಂಖ್ಯೆ 30ಕ್ಕೇರಿದೆ. ಅಚ್ಚರಿ ಎಂದರೆ, ಕಳೆದ 14 ದಿನಗಳ ಅವಧಿಯಲ್ಲೇ ಎರಡು ಜೋಡೆತ್ತುಗಳು ಮೃತಪಟ್ಟಿವೆ. ಸೆ. 10 ರಂದು ಗಣೇಶನ ಹಬ್ಬದ ದಿನ ಒಂದು ಎತ್ತು ಸಾವನ್ನಪ್ಪಿತ್ತು. ಇದೀಗ ಉಳಿದ ಮತ್ತೊಂದು ಎತ್ತು ಅಸುನೀಗಿದೆ.

ಇಲಾಖೆಗೆ ಸವಾಲಾದ ಪ್ರಕರಣ:

ರಾಸುಗಳ ಸಾವಿನ ರಹಸ್ಯವನ್ನು ಬಹಿರಂಗಪಡಿಸಿ, ಸಾವಿಗೆ ಕಾರಣ ಪತ್ತೆಹಚ್ಚುವಂತೆ ಗ್ರಾಮಸ್ಥರು, ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದರೊಂದಿಗೆ ರಾಸುಗಳ ಸಾವಿನ ಕುರಿತು ಹತ್ತಾರು ಅನುಮಾನಗಳು ಮೂಡಿದ್ದು, ಸಾವಿನ ನಿಗೂಢತೆ ಭೇದಿಸುವುದು ಪಶು ಇಲಾಖೆ ಅಧಿಕಾರಿಗಳಿಗೆ ಸವಾಲಾಗಿದೆ.

ಒಂದೇ ರೀತಿಯಲ್ಲಿ ಮೃತಪಟ್ಟ ಎಲ್ಲ ರಾಸುಗಳು:

ಒಂದೇ ಕುಟುಂಬದವರಿಗೆ ಸೇರಿದ ರಾಸುಗಳು ಸಾಯಲು ಕಾರಣವೇನು?, ಒಂದು ತಾಲೂಕಿನಲ್ಲೋ ಅಥವಾ ಒಂದೇ ಗ್ರಾಮದಲ್ಲಿ ಬೇರೆ ಬೇರೆ ಕುಟುಂಬಗಳಿಗೆ ಸೇರಿದ ರಾಸುಗಳು ಮೃತಪಟ್ಟಿದ್ದರೆ ಅದು ಸಹಜವಾಗಿರುತ್ತಿತ್ತು. ಆದರೆ, ಒಂದೇ ಕುಟುಂಬಕ್ಕೆ ಸೇರಿದ ರಾಸುಗಳು ಮಾತ್ರ ಸಾವಿಗೀಡಾಗುತ್ತಿರುವುದು ವಿಚಿತ್ರವಾಗಿದೆ. ಅದರಲ್ಲೂ ಎಲ್ಲ ರಾಸುಗಳು ಒಂದೇ ರೀತಿ ಮೃತಪಡುತ್ತಿವೆ. ಜತೆಗೆ 15 ದಿನಗಳು ಅಥವಾ ತಿಂಗಳ ಅಂತರದಲ್ಲಿ ಎತ್ತುಗಳು ಸಾವಿಗೀಡಾಗುತ್ತಿವೆ.

ವಿಷಪ್ರಾಷನ ಕಾರಣ ಎಂದ ವರದಿ:

30 ರಾಸುಗಳ ಸಾವಿನ ಪೈಕಿ ಮೂರು ಪ್ರಕರಣಗಳಲ್ಲಿ 'ವಿಷಪ್ರಾಷನ' ಕಾರಣ ಎಂದು ವರದಿ ಬಂದಿದೆ. ಹೀಗಾಗಿ ಯಾರೋ ಬೇಕು ಅಂತಲೇ ರಾಸುಗಳಿಗೆ ವಿಷವುಣಿಸುತ್ತಿರುವ ಅನುಮಾನ ಕಾಡುತ್ತಿದೆ. ಆದರೆ, ಉಳಿದ ರಾಸುಗಳ ಕುರಿತು ಯಾವುದೇ ವರದಿ ಬಾರದಿರುವುದು ಗೊಂದಲಕ್ಕೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.