ಗಂಗಾವತಿ (ಕೊಪ್ಪಳ): ಗಂಗಾವತಿಯಿಂದ ಬೇರ್ಪಟ್ಟ ನಂತರ ಇದೇ ಮೊದಲ ಬಾರಿಗೆ ಕಾರಟಗಿಯಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.
‘ಅನ್ನದಕ್ಷಯದಲ್ಲಿ ಅಕ್ಷರ ಜಾತ್ರೆ' ಎಂಬ ಶೀರ್ಷಿಕೆಯಡಿ ತಯಾರಿಸಲಾದ ಲಾಂಛನದ ಮೇಲ್ಭಾಗದಲ್ಲಿ ಎರಡು ಕಡೆ ಕನ್ನಡ ಧ್ವಜ, ಒಳಗೆ ಭತ್ತದ ಸಸಿ, ಉಳುಮೆ ಮಾಡುತ್ತಿರುವ ರೈತರನ್ನು ಚಿತ್ರಿಸಲಾಗಿದೆ. ಮತ್ತೊಂದೆಡೆ ತಾಲೂಕಿನಲ್ಲಿ ಬೆಳೆಯುವ ಭತ್ತವನ್ನು ಸಂಸ್ಕರಿಸುವ ರೈಸ್ ಮಿಲ್ಗಳ ಚಿತ್ರ, ಐತಿಹಾಸಿಕ ಧಾರ್ಮಿಕ ತಾಣ ದೇವಿಬೆಟ್ಟದ ಮಧ್ಯ ಕಾರಟಗಿಯ ಪ್ರಸಿದ್ಧ ಶರಣಬಸವೇಶ್ವರರ ವಿಗ್ರಹದ ಚಿತ್ರಗಳನ್ನು ಹೊಂದಿದೆ.

ಕೆಳಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಲಾಂಛನ ಹಾಗೂ ಮತ್ತೊಂದೆಡೆ ಕನ್ನಡತಾಯಿ ಭುವನೇಶ್ವರಿಯನ್ನು ಒಳಗೊಂಡ ಕರ್ನಾಟಕ ನಕ್ಷೆಯನ್ನು ಚಿತ್ರಿಸಿದ್ದು, ಲಾಂಛನದ ಮೇಲ್ಭಾಗದಲ್ಲಿ ಕಾರಟಗಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ಬರಹವಿದೆ.
ಇದನ್ನೂ ಓದಿ: ಸಕಾಲದಲ್ಲಿ ಚಿಕಿತ್ಸೆ ಸಿಗದೆ ಹೆರಿಗೆ ಪ್ರಕರಣ; ವೈದ್ಯರ ಅಮಾನತಿಗೆ ಭಾಗ್ಯವತಿ ಬೋಲಾ ಆಗ್ರಹ