ETV Bharat / state

ಯಶಸ್ವಿ ಅಕ್ಷರ ಜಾತ್ರೆ... ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಮೆಚ್ಚುಗೆಯ ಮಹಾಪೂರ! - Kannada Literary Conference

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ‌ಜನ ಭೇಟಿ ನೀಡುವ ಮೂಲಕ ಅಭೂತಪೂರ್ವ ಯಶಸ್ವಿಯಾಗಿದ್ದು, ಸಮ್ಮೇಳನದ ಯಶಸ್ಸಿಗೆ ಕಾರಣರಾದ ಅಧಿಕಾರಿ ವರ್ಗಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

85th All India Kannada Literary Conference...Officials getting compliments!
ಯಶಸ್ವಿ ಅಕ್ಷರ ಜಾತ್ರೆ...ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಮೆಚ್ಚುಗೆಯ ಮಹಾಪೂರ!
author img

By

Published : Feb 9, 2020, 12:19 PM IST

ಕಲಬುರಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ‌ಜನ ಸೇರುವ ಮೂಲಕ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದೆ.

ಫೆ. 5, 6, ಹಾಗೂ 7ರಂದು ಮೂರು ದಿನಗಳ ಕಾಲ ಕಲಬುರಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಸಮ್ಮೇಳನ ಯಾವುದೇ ಅಡೆತಡೆಗಳಿಲ್ಲದೇ ಅದ್ಧೂರಿಯಾಗಿ ನೆರವೇರಿದೆ. ರಾಜ್ಯದ ಹಲವೆಡೆಗಳಿಂದ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ ಸಾಗರದಂತೆ ಹರಿದು ಬಂದಿದ್ದು ಸಮ್ಮೇಳನದ ಕಳೆ ಹೆಚ್ಚಿಸಿತು. ‌ಜಿಲ್ಲಾಡಳಿತ ಸಮ್ಮೇಳನಕ್ಕೆ ಆಗಮಿಸಿದ ಜನರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆಯನ್ನು ವಹಿಸಿತ್ತು. ಪೊಲೀಸ್ ಇಲಾಖೆ ಕೂಡಾ ಮುಂಜಾಗೃತ ಕ್ರಮವಾಗಿ 4,000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸುವುದರ ಜೊತೆಗೆ ಡ್ರೋಣ್​ ಬಳಸುವ ಮೂಲಕ ಭದ್ರತೆ ಒದಗಿಸಿದರು. ಒಟ್ಟಿನಲ್ಲಿ ಎಲ್ಲರ ಅಭಿಮಾನ ಹಾಗೂ ಶ್ರಮದಿಂದ ಬಿಸಿಲೂರಿನ ಕನ್ನಡ ಜಾತ್ರೆ ಒಂದು ರೀತಿ ಯಶಸ್ವಿ ಇತಿಹಾಸವನ್ನೇ ನಿರ್ಮಿಸಿದೆ.

85th All India Kannada Literary Conference...Officials getting compliments!
ಯಶಸ್ವಿ ಅಕ್ಷರ ಜಾತ್ರೆ...ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಮೆಚ್ಚುಗೆಯ ಮಹಾಪೂರ!

ಡಿಸಿಗೆ ಮೆಚ್ಚುಗೆಯ ಮಹಾಪೂರ:

ಸಮ್ಮೇಳನ ಜವಾಬ್ದಾರಿ ಹೊತ್ತು ಹಗಲು ರಾತ್ರಿ ಎನ್ನದೇ ಶ್ರಮಿಸಿದ ಜಿಲ್ಲಾಧಿಕಾರಿ ಬಿ.ಶರತ್ ಅವರಿಗೆ ಅಭಿನಂದನೆ,‌ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿವೆ. ಸಮ್ಮೇಳನ ವೇದಿಕೆಯಿಂದ ಹಿಡಿದು ಊಟದ ವ್ಯವಸ್ಥೆ, ಎಲ್ಲವೂ ಅಚ್ಚುಕಟ್ಟಾಗಿ ನಿಭಾಯಿಸಿ, ಅಧಿಕಾರಿಗಳಿಗೆ ಜವಾಬ್ದಾರಿ ವಹಿಸುವುದರ ಜೊತೆಗೆ ತಾವು ಸಮ್ಮೇಳನ ಸ್ಥಳದಲ್ಲೇ ಬೀಡುಬಿಟ್ಟು ಸಾಮಾನ್ಯರಲ್ಲಿ ಸಾಮಾನ್ಯರಂತೆ ಎಲ್ಲವನ್ನು ನೋಡಿಕೊಳ್ಳುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕಾರಣರಾಗಿದ್ದು, ಕನ್ನಡದ ಡಿಸಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಮ್ಮೇಳನ ನಂತರ ಬಣಗುಟ್ಟುತಿರುವ ವಿ.ವಿ ಆವರಣ:

ಸಮ್ಮೇಳನ ಹಿನ್ನೆಲೆ ವಿವಿಗೆ ಜನಸಾಗರವೇ ಹರಿದುಬಂದಿದ್ದು, ವಿವಿಗೆ ಕಳೆ ಉಂಟು ಮಾಡಿತ್ತು. ಸಮ್ಮೇಳನ ಮುಗಿದ ಬಳಿಕ ವಿವಿ ಆವರಣ ಹಾಗೂ ಸಮ್ಮೇಳನದ ಶ್ರೀವಿಜಯ ಪ್ರಧಾ‌ನ ವೇದಿಕೆ ಅಕ್ಷರಶಃ ಬಣಗುಡುತ್ತಿದೆ.

ವಿವಿ ಆವರಣ ಸ್ವಚ್ಚಗೊಳಿಸುವಲ್ಲಿ ತೊಡಗಿದ ಕೂಲಿ ಕಾರ್ಮಿಕರು:

ಹೆಚ್ಚು ಜನ ಸೇರಿದ್ದರಿಂದ ಸ್ಥಳ ಅಸ್ತವ್ಯಸ್ತವಾಗಿದ್ದು, ಪೌರ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕ ಮಹಿಳೆಯರು ವೇದಿಕೆ ಹಾಗೂ ವಿವಿ ಆವರಣವನ್ನು ಶುಚಿಗೊಳಿಸುವಲ್ಲಿ ನಿರತರಾಗಿದ್ದಾರೆ.

ಒಟ್ಟಿನಲ್ಲಿ ಮೂರು ದಿನಗಳ ಕಾಲ ನಡೆದ ಅಕ್ಷರ ಜಾತ್ರೆ ಒಂದು ರೀತಿಯ ಇತಿಹಾಸವನ್ನೇ ಹುಟ್ಟುಹಾಕಿದೆ. ಸಮ್ಮೇಳನದ ಯಶಸ್ಸಿಗೆ ಕಾರಣರಾದ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳಿಗೆ, ಹಾಗೂ ಕಸಾಪ ಸಮಿತಿಗೆ ಕಲಬುರಗಿ ಜನತೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.