ETV Bharat / state

ರಾಣೆಬೆನ್ನೂರಿನಿಂದ ಕಾಶ್ಮೀರದವರೆಗೆ ಬೈಕ್ ರೈಡ್: ಯುವತಿಗೆ ಅತಿ ಕಿರಿಯ ಏಕವ್ಯಕ್ತಿ ಬೈಕ್ ರೈಡರ್ ಎಂಬ ಹೆಗ್ಗಳಿಕೆ

20 ದಿನಗಳ ಕಾಲ 6200 ಕಿ.ಮೀ ದೂರವನ್ನು ಒಬ್ಬಳೇ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಕಾಶ್ಮೀರದವರೆಗೆ ಬೈಕ್ ರೈಡ್​ ಮಾಡಿ ಅತೀಕಿರಿಯ ವಯಸ್ಸಿನ ಏಕವ್ಯಕ್ತಿ ಬೈಕ್ ರೈಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

author img

By

Published : Mar 29, 2022, 10:55 PM IST

Updated : Mar 30, 2022, 10:23 AM IST

bike ride Haveri to Kashmir
ಅತೀಕಿರಿಯ ಏಕವ್ಯಕ್ತಿ ಬೈಕ್ ರೈಡರ್ ಕೋಮಲ ಪಾಟೀಲ್

ಹಾವೇರಿ: ಕರ್ನಾಟಕದ ಅತಿಕಿರಿಯ ಏಕವ್ಯಕ್ತಿ ಬೈಕ್ ರೈಡರ್ ಎಂಬ ಹೆಗ್ಗಳಿಕೆಗೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಕೋಮಲ ಪಾಟೀಲ್ ಭಾಜನಳಾಗಿದ್ದಾರೆ. 19 ವರ್ಷದ ಕೋಮಲ ಮಾರ್ಚ್ 8 ರಂದು ರಾಣೆಬೆನ್ನೂರಿನಿಂದ ಕಾಶ್ಮೀರದವರೆಗೆ ಬೈಕ್ ರೈಡ್ ಕೈಗೊಂಡಿದ್ದರು. ಸುಮಾರು 20 ದಿನಗಳ ಕಾಲ 6,200 ಕಿಲೋ ಮೀಟರ್​ ದೂರವನ್ನು ಒಬ್ಬಳೇ ಕ್ರಮಿಸುವ ಮೂಲಕ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಣೆಬೆನ್ನೂರಿನಿಂದ ಮುಂಬೈ, ವಡೋದರ, ಉದಯಪುರ, ಜೈಪುರ, ಅಮೃತಸರ್​ ಮೂಲಕ ಗ್ಯಾಂಗ್ಟಕ್‌, ಶ್ರೀನಗರವರೆಗೆ ಕೋಮಲ ಬೈಕ್ ರೈಡ್ ಮಾಡಿದ್ದಾರೆ. ಲೂದಿಯಾನಾದಿಂದ ಶಿಮ್ಲಾ, ದೆಹಲಿ, ಆಗ್ರಾ, ಇಂದೋರ್, ಔರಂಗಾಬಾದ್ ಮೂಲಕ ಸೊಲ್ಲಾಪುರ ಮಾರ್ಗವಾಗಿ ರಾಣೆಬೆನ್ನೂರಿಗೆ ಕೋಮಲ ಹಿಂದಿರುಗಿದ್ದಾರೆ. ದೇಶದ ಜನತೆಯಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ, ಖಿನ್ನತೆ ವಿರುದ್ಧ ಹೋರಾಟ, ಒಂದೇ ದೇಶ, ಒಂದೇ ಜನ ಮತ್ತು ಮೊದಲು ಸುರಕ್ಷಿತ ಪಯಣ ಎಂಬ ಟ್ಯಾಗ್ ಲೈನ್‌ನೊಂದಿಗೆ ಕೋಮಲ ಬೈಕ್​ ರೈಡ್ ಮಾಡಿದ್ದಾರೆ.

ರಾಣೆಬೆನ್ನೂರಿನಿಂದ ಕಾಶ್ಮೀರದವರೆಗೆ ಯುವತಿಯ ಬೈಕ್ ರೈಡ್

ಕೇರಳದ 21 ವರ್ಷದ ಅಮೃತ್ ಜೋಶಿ ಬೈಕ್ ಮೇಲೆ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದಳು. ಇದರಿಂದಾಗಿ ಬೈಕ್‌ನಲ್ಲಿ ಏಕವ್ಯಕ್ತಿಯಾಗಿ ಉತ್ತರಭಾರತ ಪ್ರವಾಸ ಮಾಡಿದ ಭಾರತದ ಕಿರಿಯ ಯುವತಿ ಎಂಬ ಹೆಗ್ಗಳಿಕೆಗೆ ಅಮೃತ ಜೋಶಿ ಪಾತ್ರವಾಗಿದ್ದರು. ಇದರಿಂದ ಉತ್ತೇಜಿತಳಾಗಿ ತಾನು ಏಕೆ ಈ ರೀತಿಯ ದಾಖಲೆ ಮಾಡಬಹುದು ಎಂದು ಬೈಕ್ ರೈಡಿಂಗ್ ಮಾಡಿದೆ. ಇದರಿಂದಾಗಿ ಇದೀಗ ರಾಜ್ಯದಲ್ಲಿ ಅತಿಕಿರಿಯ ಏಕವ್ಯಕ್ತಿ ಬೈಕ್ ರೈಡರ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದೇನೆ ಎಂದು ತಿಳಿಸಿದರು.

ಮುಂದೆ ದಕ್ಷಿಣ ಭಾರತ ಸೇರಿದಂತೆ ಲಡಾಖ್​ ಮತ್ತು ಅಂತಾರಾಷ್ಟ್ರೀಯವಾಗಿ ಬೈಕ್ ರೈಡ್​ ಮಾಡಬೇಕು ಎಂಬ ಕನಸು ಹೊಂದಿದ್ದೇನೆ. ಈ ಕುರಿತಂತೆ ಹೆಚ್ಚಿನ ತಯಾರಿಯ ಅಗತ್ಯತೆ ಇದೆ ಎಂದು ಕೋಮಲ ತಿಳಿಸಿದರು. ತನ್ನೆಲ್ಲಾ ಆಸೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ತಂದೆ ತಾಯಿಯ ಹಾರೈಕೆಗೆ ಕೋಮಲ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ರಾಮನಗರ: ಯುವ ಅನ್-ಸ್ಟಾಪೇಬಲ್ ಮೂಲಕ ಸರ್ಕಾರಿ ಮಕ್ಕಳಿಗೆ ಟ್ಯಾಬ್ ವಿತರಣೆ

Last Updated : Mar 30, 2022, 10:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.