ಹಾಸನ : ಇಂದೂ ಸಹ ಕಾಂಗ್ರೆಸ್ ನಾಯಕ ಎ. ಮಂಜು ಶಾಸಕ ಪ್ರೀತಂಗೌಡರ ಮನೆಗೆ ಉಪಹಾರಕ್ಕೆಂದು ತೆರಳಿ ಕೆಲವೊಂದು ಚರ್ಚೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಎ.ಮಂಜು, ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ನನ್ನ ಸ್ನೇಹಿತ ತಿಂಡಿಗೆ ಬನ್ನಿ ಅಂತ ಕರೆದರೂ ಹಾಗಾಗಿ ಬಂದಿದ್ದೇನೆ. ಯಡಿಯೂರಪ್ಪನವರ ಭೇಟಿ ಕೂಡ ಮಾಡಿದ್ದೇನೆ, ಈಗಾಗಲೇ ಎರಡು ತಾಲೂಕಿನಲ್ಲಿ ಬೆಂಬಲಿಗರ ಹಿತೈಷಿಗಳ ಸಭೆ ಕರೆದು ಚರ್ಚೆ ಮಾಡಿದ್ದೇನೆ. ಇನ್ನು ನಾಲ್ಕು ತಾಲೂಕಿನಲ್ಲಿ ಸಭೆ ನಡೆಸಿ ನಾನು ಮುಂದಿನ ನಿರ್ಧಾರವನ್ನು ಸೋಮವಾರ ಅಂತಿಮಗೊಳಿಸುತ್ತೇವೆ ಎಂದರು.
ನನ್ನ ನಿಲುವು ಕುಟುಂಬ ರಾಜಕರಣದ ವಿರುದ್ಧ. ದೇವೇಗೌಡರು ಸ್ಪರ್ಧೆ ಮಾಡಿದ್ರೆ ನಾನು ಬೆಂಬಲ ಸೂಚಿಸುತ್ತೇವೆ ಅಂತ ಹೇಳಿದ್ದೆ ಆದರೆ ದೇವೇಗೌಡರು ಮೊಮ್ಮಗನನ್ನ ಕಣಕ್ಕಿಳಿಸಿದ್ದು ವೈಯಕ್ತಿಕವಾಗಿ ನನಗೆ ಇಷ್ಟ ಇಲ್ಲ. ಹಾಗಾಗಿ ಮುಂದಿನ ನಡೆಯನ್ನು ನಾನು ಸೋಮವಾರ ಮಾಧ್ಯಮದ ಮುಂದೆ ತಿಳಿಸುತ್ತೇನೆ ಅಂತ ಪರೋಕ್ಷವಾಗಿ ಮತ್ತೆ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದರು.
ಈ ವೇಳೆ ಮಾತನಾಡಿದ ಪ್ರೀತಂಗೌಡ, ಅವರು ನನ್ನ ಆತ್ಮೀಯರು ದೂರವಾಣಿ ಕರೆ ಮಾಡಿ ತಿಂಡಿಗೆ ಬನ್ನಿ ಎಂದು ಕರೆದೆಹಾಗಾಗಿ ಎ ಮಂಜು ನಮ್ಮ ಮನೆಗೆ ಆಗಮಿಸಿದ್ದಾರೆ. ರಾಜಕೀಯವಾಗಿ ಯಾವುದೇ ಚರ್ಚೆ ನಡೆಸಿಲ್ಲ. ನನ್ನಿಂದಲೇ ಎಲ್ಲ ಎನ್ನುವವರಅಹಂನಿಂದ ರಾಜಕೀಯದಲ್ಲಿ ಏನೇನು ಬದಲಾವಣೆಯಾಗುತ್ತದೆ ನೋಡುತ್ತಿರಿ ಎಂದರು.