ಧಾರವಾಡ: ಹಿರಿಯ ಸಾಹಿತಿ ನಾಡೋಜ ಚನ್ನವೀರ ಕಣವಿ ಕೋವಿಡ್ನಿಂದ ಗುಣಮುಖರಾಗಿದ್ದು, ಅವರನ್ನು ನಾನ್ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕೋವಿಡ್ ನೆಗೆಟಿವ್ ವರದಿ ಬಂದಿದ್ದು, ನಾನ್ ಕೋವಿಡ್ ಐಸಿಯುಗೆ ಅವರನ್ನು ಸ್ಥಳಾಂತರಿಸಲಾಗಿದೆ. ಅವರು ಮೆಕ್ಯಾನಿಕಲ್ ವೆಂಟಿಲೇಟರ್ನಲ್ಲಿದ್ದಾರೆ, ಆರೋಗ್ಯ ಕ್ಷೀಣವಾಗಿದೆ. ಚಿಕಿತ್ಸೆ ಮುಂದುವರೆದಿದೆ ಎಂದು ಆಸ್ಪತ್ರೆಯಿಂದ ಬುಲೆಟಿನ್ ಬಿಡುಗಡೆ ಮಾಡಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕಳೆದ ಒಂದು ವಾರದಿಂದ ಕಣವಿ ಅವರು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದಿಂದ ತೆರಳಿದಾಗ ಅವರಲ್ಲಿ ಕೊರೊನಾ ದೃಡಪಟ್ಟಿತ್ತು.