ಹುಬ್ಬಳ್ಳಿ: ಬಂಗಾರದ ನಾಣ್ಯಗಳೆಂದು ನಂಬಿಸಿ ನಕಲಿ ನಾಣ್ಯಗಳನ್ನು ನೀಡಿ ವ್ಯಕ್ತಿಯೊಬ್ಬರಿಗೆ 6 ಲಕ್ಷ ರೂ ಪಂಗನಾಮ ಹಾಕಿದ ಘಟನೆ ನಗರದ ಹೊಸ ಗಬ್ಬೂರಲ್ಲಿ ನಡೆದಿದೆ.
ಮಹಾರಾಷ್ಟ್ರದ ಮೊಹಿಲಾ ದತಾನಿ ನಗರದ ಸಹದೇವ ಸಿರೋಹಿ ಎಂಬುವರಿಗೆ ಹುಬ್ಬಳ್ಳಿಯ ರವಿ ಹೆಸರಿನ ವ್ಯಕ್ತಿ ವಾಟ್ಸಾಪ್ ಮೂಲಕ ಪರಿಚಯವಾಗಿದ್ದ. ಒಂದು ವಾರದ ಹಿಂದೆ ಅವರಿಗೆ ಕರೆ ಮಾಡಿದ ರವಿ, ತಮ್ಮಲ್ಲಿ ಬಂಗಾರದ ನಾಣ್ಯಗಳಿವೆ. ಅವುಗಳನ್ನು ಇಲ್ಲಿ ಮಾರಾಟ ಮಾಡಲು ಆಗುತ್ತಿಲ್ಲ. ನಿಮಗೆ ಕಡಿಮೆ ಬೆಲೆಗೆ ನೀಡುತ್ತೇನೆ ಎಂದು ಹೇಳಿದ್ದಾನೆ.
ರವಿ ಎಂಬುವನ ಮಾತು ನಂಬಿದ ಸಿರೋಹಿ ಡಿ. 23ರಂದು ಹುಬ್ಬಳ್ಳಿಗೆ ಬಂದಿದ್ದಾರೆ. ಹೊಸ ಗಬ್ಬೂರಿನ ಪಿಬಿ ರಸ್ತೆಯ ಜೈನ ಮಂದಿರದ ಬಳಿ ರವಿ, ಇನ್ನಿಬ್ಬರ ಜೊತೆ ಬಂದು ಸಿರೋಹಿಯವರನ್ನು ಭೇಟಿಯಾಗಿ 100 ಗ್ರಾಂ. ನಕಲಿ ಬಂಗಾರದ ನಾಣ್ಯಗಳನ್ನು ನೀಡಿ, 6 ಲಕ್ಷ ರೂ ಪಡೆದುಕೊಂಡು ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ಅನುಮಾನ ಬಂದ ಸಿರೋಹಿ, ನಾಣ್ಯಗಳನ್ನು ಪರೀಕ್ಷಿಸಿದಾಗ ನಕಲಿ ಎಂದು ತಿಳಿದು ಬಂದಿದೆ.
ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.