ಮಂಗಳೂರು: ಸಂವಿಧಾನಕ್ಕೆ ವಿರುದ್ಧವಾಗಿರುವ ಎಲ್ಲಾ ಸಂಘಟನೆಗಳ ವಿರುದ್ಧ ಸಮಾನ ಕ್ರಮ ಕೈಗೊಳ್ಳಲಿ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು ಟಿ ಖಾದರ್ ಹೇಳಿದರು.
ಪಿಎಫ್ಐ ಮತ್ತು ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರದ ಆದೇಶ ಹಿನ್ನೆಲೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಯಾರೆಲ್ಲ ಕೋಮು ದ್ವೇಷ, ದ್ವೇಷ ಸಮಾಜ, ಪರಸ್ಪರ ಅವಿಶ್ವಾಸ ಮೂಡಿಸುವುದು, ಪರಸ್ಪರ ಹಲ್ಲೆ ಕೊಲೆ ಮಾಡುವ ಯಾವುದೇ ಸಂಘ ಸಂಸ್ಥೆಗಳ ಮೇಲೆ ಸಮಾನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾರತಮ್ಯ ಮಾಡದೇ ಎಲ್ಲಾ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಕೋಮು ದ್ವೇಷದಿಂದ ಹತ್ಯೆಗಳಾದ ಒಂದು ಪ್ರಕರಣವನ್ನು ಮಾತ್ರ ಎನ್ಐಎಗೆ ನೀಡಲಾಗಿದೆ. ಒಂದು ಪ್ರಕರಣದಲ್ಲಿ ಮಾತ್ರ ಪರಿಹಾರ ನೀಡಲಾಗಿದೆ. ಈ ವಿಚಾರದಲ್ಲಿ ಕೂಡ ತಾರತಮ್ಯ, ದ್ವೇಷ ಇಲ್ಲದೇ, ಯಾರಿಗೂ ಅನ್ಯಾಯ ಮಾಡದೆ ಯಾರು ಇಂತಹ ಕೃತ್ಯಗಳನ್ನು ಮಾಡುತ್ತಾರೆಯೋ ಅವರ ವಿರುದ್ಧ ಯಅವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದರು.
ಇದನ್ನೂ ಓದಿ: ಮೋದಿ ನಾಯಕತ್ವ ಇರುವಾಗ ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ: ಸಿಎಂ ಬೊಮ್ಮಾಯಿ