ETV Bharat / state

ಪ್ರಯಾಣ ದರ ಏರಿಕೆಗೆ ಜಿಲ್ಲಾಡಳಿತ ಬ್ರೇಕ್.. ಬಸ್ ಓಡಾಟ ನಿಲ್ಲಿಸುವ ಚಿಂತನೆಯಲ್ಲಿ ಮಾಲೀಕರು - ದಕ್ಷಿಣ ಕನ್ನಡ ಜಿಲ್ಲೆಯ ಸಾರಿಗೆ

ಖಾಸಗಿ ಬಸ್​ಗಳ ಪ್ರಯಾಣ ದರ ಹೆಚ್ಚಿಸುವಂತೆ ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಆಗ್ರಹಿಸಿದ್ದಾರೆ. ಸಾರಿಗೆ ವ್ಯವಸ್ಥೆ ಕೋವಿಡ್ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಜಿಲ್ಲಾಡಳಿತ ದರ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.

ಬಸ್ ಓಡಾಟ ನಿಲ್ಲಿಸುವ ಚಿಂತನೆಯಲ್ಲಿ ಮಾಲೀಕರು
ಬಸ್ ಓಡಾಟ ನಿಲ್ಲಿಸುವ ಚಿಂತನೆಯಲ್ಲಿ ಮಾಲೀಕರು
author img

By

Published : Jul 8, 2021, 12:22 PM IST

ಮಂಗಳೂರು: ಅನ್​ಲಾಕ್​ 3.O ಜಾರಿ ಬಳಿಕ ಸ್ಥಗಿತಗೊಂಡಿದ್ದ ಎಲ್ಲಾ ಚಟುವಟಿಕೆಗಳು ಪುನಾರಂಭಗೊಂಡಿವೆ. ಲಾಕ್​ಡೌನ್ ವೇಳೆ ಸ್ಥಗಿತಗೊಂಡಿದ್ದ ಬಸ್​ ಸೇವೆಗಳು ಪುನರ್ ಸಂಚಾರ ಆರಂಭಿಸಿವೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ನಷ್ಟದ ಭೀತಿಯಿಂದಾಗಿ ಖಾಸಗಿ ಬಸ್ ಮಾಲೀಕರು ಬಸ್ ಓಡಿಸೋಕೆ ಹಿಂದು ಮುಂದು ನೋಡುತ್ತಿದ್ದಾರೆ.

ಪ್ರಯಾಣ ದರ ಏರಿಕೆಗೆ ಜಿಲ್ಲಾಡಳಿತ ಬ್ರೇಕ್.. ಬಸ್ ಓಡಾಟ ನಿಲ್ಲಿಸುವ ಚಿಂತನೆಯಲ್ಲಿ ಮಾಲೀಕರು

ದಕ್ಷಿಣ ಕನ್ನಡ ಜಿಲ್ಲೆಯ ಸಾರಿಗೆ ವ್ಯವಹಾರದಲ್ಲಿ ಅತ್ಯಂತ ಪ್ರಾಬಲ್ಯ ಹೊಂದಿರುವುದು ಖಾಸಗಿ ಬಸ್​ಗಳು. ಮಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧೆಡೆ ಸಂಪರ್ಕ ಕಲ್ಪಿಸುವ ಖಾಸಗಿ ಬಸ್​ಗಳು ಜುಲೈ 1 ರಿಂದ ಪುನಾರಂಭಗೊಂಡಿವೆ. ಬಸ್ ಆರಂಭಕ್ಕೂ ಮುನ್ನ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಅರ್ಧದಷ್ಟು ಪ್ರಯಾಣಿಕರ ಅವಕಾಶಕ್ಕೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಜತೆಗೆ ಶೇಕಡಾ 20 ರಷ್ಟು ಪ್ರಯಾಣ ದರ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಆದೇಶ ಹಿಂಪಡೆದು, ಹಿಂದಿನ ದರವನ್ನೇ ಮುಂದುವರಿಸುವಂತೆ ಆದೇಶಿಸಿತ್ತು.

ಬಸ್​​ಗಳ ಓಡಾಟ ಆರಂಭವಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ‌ ಪ್ರಯಾಣಿಕರ ಓಡಾಟವಿಲ್ಲ. ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಮಾತ್ರ ಪ್ರಯಾಣಿಕರು ಇರುತ್ತಾರೆ. ಉಳಿದ ಸಮಯದಲ್ಲಿ ಬಸ್​ ಖಾಲಿಯಾಗಿಯೇ ಪ್ರಯಾಣಿಸುತ್ತದೆ. ಇನ್ನೂ ಖಾಸಗಿ ಬಸ್​​ಗಳಲ್ಲಿ ಈಗ ಪಡೆಯುತ್ತಿರುವ ಪ್ರಯಾಣ ದರ ಡೀಸೆಲ್​​ಗೆ ಲೀಟರ್​ಗೆ 58 ರೂ. ಇದ್ದ ಸಂದರ್ಭದಲ್ಲಿ ನಿಗದಿಪಡಿಸಲಾದ ದರ. ಇದೀಗ ಡೀಸೆಲ್ ದರ ಲೀಟರ್ ಗೆ 95 ರ ಆಸುಪಾಸಿನಲ್ಲಿದೆ. ಇದರಿಂದ ಖಾಸಗಿ ಬಸ್ ಮಾಲೀಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ದರ ಏರಿಕೆಯಾಗದಿದ್ದರೆ ಬಸ್ ಓಡಾಟ ನಡೆಸುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನುತ್ತಾರೆ ಮಂಗಳೂರು ನಗರ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ.

ಹೊಸ ಪ್ರಯಾಣ ದರ ತಡೆಹಿಡಿಯಲಾಗಿರುವುದರಿಂದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಬಸ್ ಪ್ರಯಾಣ ದರ ನಿಗದಿಪಡಿಸಬೇಕಾಗುತ್ತದೆ. ಈ ಸಭೆಯಲ್ಲಿ ಬಸ್ ಪ್ರಯಾಣ ದರವನ್ನು ಸಾರ್ವಜನಿಕರ ಅಭಿಪ್ರಾಯ ಪಡೆದು ನಿರ್ಧರಿಸಲಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿರುವುದರಿಂದ ಜನರ ಮೇಲೆ ಬಸ್ ಪ್ರಯಾಣ ದರ ಏರಿಕೆ ಮಾಡಬಾರದೆಂದು ಸಿಪಿಎಂ ಪ್ರತಿಭಟನೆ ನಡೆಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.