ETV Bharat / state

ಇದೇನೂ ಮನೆಯೋ, ಗಡಿಯಾರಗಳ ಸಂಗ್ರಹಾಲಯವೋ; ಬಂಟ್ವಾಳದ ಶಶಿ ಭಟ್ಟರ ಮನೆಯಲ್ಲಿದೆ 120ಕ್ಕೂ ಹೆಚ್ಚು ಗಡಿಯಾರ - ಬಂಟ್ವಾಳ ತಾಲೂಕಿನ ಕುಡ್ತಮುಗೇರು ಸಮೀಪದ ಶಶಿ ಭಟ್ ಪಡಾರ್

ಗಡಿಯಾರ ಇಲ್ಲದ ಮನೆ ಇರೋದು ಅಪರೂಪವೇ ಸರಿ. ಆದರೆ ಇಲ್ಲೊಬ್ಬರ ಮನೆಯಲ್ಲಿ ಮಾತ್ರ‌ ಎಲ್ಲಿ ನೋಡಿದರಲ್ಲು ಗಡಿಯಾರಗಳದ್ದೇ ಸದ್ದು. 120 ಕ್ಕಿಂತಲೂ ಹೆಚ್ಚು‌ ಗಡಿಯಾರಗಳಿರುವ ಮನೆಯ ಸಂಪೂರ್ಣ ಸ್ಟೋರಿ ಇಲ್ಲಿದೆ ನೋಡಿ.

clocks
ಗಡಿಯಾರ
author img

By

Published : Apr 3, 2023, 4:51 PM IST

ಇದೇನೂ ಮನೆಯೋ, ಗಡಿಯಾರಗಳ ಸಂಗ್ರಹಾಲಯವೋ

ಬಂಟ್ವಾಳ(ದಕ್ಷಿಣ ಕನ್ನಡ): ಮನುಷ್ಯನ ಜೀವನದಲ್ಲಿ ಸಮಯಕ್ಕೆ ಎಷ್ಟು ಮಹತ್ವವಿದೆಯೋ, ಸಮಯವನ್ನು ಸೂಚಿಸುವ ಗಡಿಯಾರಕ್ಕೂ ಅಷ್ಟೇ ಪ್ರಾಮುಖ್ಯತೆಯಿದೆ. ಇಂದಿನ ಯುಗದಲ್ಲಿ ಕನಿಷ್ಠ ಒಂದಾದರೂ ಗಡಿಯಾರ ಇಲ್ಲದ ಮನೆ ಇರೋದು ಅಪರೂಪವೇ ಅಲ್ಲವೇ. ಆದರೆ, ಈ ಮನೆಯಲ್ಲಿ ಮಾತ್ರ‌ ಎಲ್ಲಿ ನೋಡಿದರೂ ಅಲ್ಲಿ ಗಡಿಯಾರಗಳು ಕಾಣ ಸಿಗುತ್ತವೆ. 120 ಕ್ಕಿಂತಲೂ ಹೆಚ್ಚು‌ ಗಡಿಯಾರಗಳಿರುವ ಈ ಮನೆ ಗಡಿಯಾರಗಳ ಮ್ಯೂಸಿಯಂ ಆಗಿ ಪರಿವರ್ತನೆ ಆಗಿದೆ ಎಂದರೆ ತಪ್ಪಗಲಾರದು.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡ್ತಮುಗೇರು ಸಮೀಪದ ಶಶಿ ಭಟ್ ಪಡಾರ್ ಎಂಬವರಿಗೆ ಸೇರಿದ ಮನೆಯಲ್ಲಿ ಇಷ್ಟೊಂದು ಗಡಿಯಾರಗಳ ಸಂಗ್ರಹವಿದೆ. ಮನೆ ಅನ್ನೋದಕ್ಕಿಂತ ಇದನ್ನು ಗಡಿಯಾರಗಳ ಮ್ಯೂಸಿಯಂ ಎಂದು ಕರೆದರೆ ತಪ್ಪಿಲ್ಲ ಬಿಡಿ. 120 ಕ್ಕೂ ಮಿಕ್ಕಿದ 150 ವರ್ಷಕ್ಕೂ ಹಳೆಯ ಆ್ಯಂಟಿಕ್ ಗಡಿಯಾರಗಳ ಕಲೆಕ್ಷನ್ಸ್ ಇವರ ಬಳಿಯಿದೆ ಎಂದರೆ ನೀವು ನಂಬಲೇ ಬೇಕು. ಕಳೆದ 15 ವರ್ಷಗಳ ಹಿಂದೆ ಹಳೆಯ ಮಾಡಲ್​ನ ಗಡಿಯಾರಗಳನ್ನು ಮನೆಯಲ್ಲಿ ಜೋಡಿಸಿಡುವ ಕಾಯಕ ಆರಂಭಿಸಿದ ಶಶಿ ಭಟ್ ಬಳಿ ಇದೀಗ ಅತೀ ಅಪರೂಪದ 120 ಕ್ಕೂ ಮಿಕ್ಕಿದ ಗಡಿಯಾರುಗಳ ಸಂಗ್ರಹ ಮಾಡಿ ಗಮನ ಸೆಳೆದಿದ್ದಾರೆ.

7 ಅಡಿ ಉದ್ದದ ಗ್ರ್ಯಾಂಡ್ ಫಾದರ್ ಕ್ಲಾಕ್ ನಿಂದ ಹಿಡಿದು 6 ಅಡಿ ಉದ್ದದ ಮದರ್ ಕ್ಲಾಕ್ ಜೊತೆಗೆ ಅತೀ ಸಣ್ಣ ಕೂ ಕೂ ಕ್ಲಾಕ್ ತನಕದ ಪ್ರಪಂಚದೆಲ್ಲೆಡೆಯ ವೆರೈಟಿ ಗಡಿಯಾರಗಳು ಇವರ ಬಳಿಯಿದೆ. ವಾರಕ್ಕೊಮ್ಮೆ ಕೀ ಕೊಡುವ ಗಡಿಯಾರದಿಂದ ಹಿಡಿದು ವರ್ಷಕ್ಕೊಮ್ಮೆ ಕೀ ಕೊಟ್ಟು ಚಲಿಸುವ ಗಡಿಯಾರಗಳು ಇಲ್ಲಿವೆ. ಗಡಿಯಾರಗಳಲ್ಲದೇ ಅಪರೂಪದ ಪೆಟ್ರೋಮ್ಯಾಕ್ಸ್ ದೀಪ, ತಾಮ್ರ, ಹಿತ್ತಾಳೆಯ ಚಿಮಿಣಿ ದೀಪಗಳು, ಅಪರೂಪದ ಅಂಬ್ರಲ್ಲಾ ಗಣಪತಿ ವಿಗ್ರಹ, ಪೂಜೆಗೆ ಬಳಸುವ ವಿವಿಧ ಪ್ರಕಾರದ ಹಳೆಯ ಪೂಜಾ ಸಾಮಗ್ರಿಗಳು, ಗ್ರಾಮಾಫೋನ್, ಟೆಲಿಫೋನ್, ಪಿಯಾನೋ, ಪ್ರಾಚೀನ ಕಾಲದ ಅಡಿಗೆಗೆ ಬಳಸುವ ವಸ್ತುಗಳು ಸೇರಿದಂತೆ ಅಪಾರ ಪ್ರಮಾಣದ ಸಂಗ್ರಹಗಳು ಇವರ ಬಳಿ ಇವೆ.

ಈಗಾಗಲೇ ಹಲವು ವೀಕ್ಷಕರನ್ನು ತನ್ನತ್ತ ಸೆಳೆದಿರುವ ಶಶಿ ಭಟ್ಟರ ಮನೆ ಅಧ್ಯಯನಕಾರರಿಗೆ ವಿಷಯ ಸಂಗ್ರಹದ ಹಬ್ ಕೂಡಾ ಆಗಿದೆ. ತನ್ನ ಸಂಗ್ರಹವನ್ನು ಇನ್ನಷ್ಟು ಜನರಿಗೆ ತಲುಪಿಸಬೇಕೆಂದುಕೊಂಡಿರುವ ಶಶಿ ಭಟ್ ಅವರು ಮನೆಯಲ್ಲಿಯೇ ಸಣ್ಣ ಮಟ್ಟದ ಮ್ಯೂಸಿಯಂ ಮಾಡಲು ಸಿದ್ಧತೆ ನಡೆಸಿದ್ದಾರೆ‌. ಆ ಬಳಿಕ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಆ ಮ್ಯೂಸಿಯಂ ಗೆ ಉಚಿತ ಪ್ರವೇಶ ಕಲ್ಪಿಸಿ ತನ್ನ ಬಳಿಯಿರುವ ಮಾಹಿತಿಯನ್ನು ಎಲ್ಲರಲ್ಲೂ ಹಂಚಿಕೊಳ್ಳಲು ಬಯಸಿದ್ದಾರೆ‌. ಕೇವಲ ಇಷ್ಟಲ್ಲದೇ, ಹಳೆಯ ವಾಹನಗಳ ಕಲೆಕ್ಷನ್ ಕೂಡಾ ಶಶಿ ಭಟ್ ಮನೆಯಲ್ಲಿದ್ದು, ಇಡೀ ಮನೆಯೇ ಒಂದು ಸಂಗ್ರಹಾಲಯವಾಗಿ ಈ ಭಾಗದಲ್ಲಿ ಗುರುತಿಸಲ್ಪಟ್ಟಿದೆ.

ಇದನ್ನೂ ಓದಿ: ತಾರಾ ಪರ್ವತದಲ್ಲಿ ಅಪ್ರಕಟಿತ ಶಾಸನ, ಭಗ್ನ ರೂಪದ ಶಿಲಾ ಮೂರ್ತಿ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.