ETV Bharat / state

ಮೀಟರ್ ಬಡ್ಡಿ ಕಿರುಕುಳ: ಚಾಮರಾಜನಗರದಲ್ಲಿ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ! - meter baddi

ಗುಂಡ್ಲುಪೇಟೆ ನಿವಾಸಿ ಕಾರ್ತಿಕ್ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.

young man commits suicide in Chamarajanagara
ಚಾಮರಾಜನಗರದಲ್ಲಿ ಯುವಕ ಆತ್ಮಹತ್ಯೆ
author img

By

Published : Jul 9, 2022, 7:22 PM IST

ಚಾಮರಾಜನಗರ: ಮೀಟರ್ ಬಡ್ಡಿ ಕಿರುಕುಳಕ್ಕೆ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಪಟ್ಟಣದ ನಿವಾಸಿ ಕಾರ್ತಿಕ್(31) ಮೀಟರ್ ಬಡ್ಡಿಗೆ ಸಿಲುಕಿ ನೇಣಿಗೆ ಶರಣಾದ ಯುವಕ.

ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ ಯುವಕ ಮೀಟರ್ ಬಡ್ಡಿದಾರರಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದ. ಹಣಕ್ಕಿಂತಲೂ ದುಪ್ಪಟ್ಟು ಬಡ್ಡಿ ಏರಿದ ಕಾರಣಕ್ಕೆ ಹಣ ಕೊಡುವಂತೆ ಶುಕ್ರವಾರ ರಾತ್ರಿ ಯುವಕನ ಮನೆಯ ಮುಂದೆ ಸಾಲ ನೀಡಿದವರು ಬಂದು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಕಾರ್ತಿಕ್ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ ಎನ್ನುವ ಮಾಹಿತಿಯಿದೆ.

ಡೆತ್ ನೋಟ್ ಆಧಾರದಲ್ಲಿ ಹಾಗೂ ಮೃತನ ಅಣ್ಣ ನೀಡಿದ ದೂರಿನ ಮೇರೆಗೆ ಪ್ರದೀಪ್, ರವಿ, ಸುಭಾಷ್, ನಂದಿ ಎಂಬ ನಾಲ್ವರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಓರ್ವನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಶವ ಸಂಸ್ಕಾರಕ್ಕೆ ಅಡ್ಡಿಯಾದ ಮಳೆ: ಟಾರ್ಪಲ್ ಬಳಸಿ ದಹನಕ್ರಿಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.