ಚಾಮರಾಜನಗರ: ಕಳೆದ ಮೇ 22ರಂದು ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ದರ್ಗಾದ ಬಳಿ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಕೊಲೆಗೆ ವಿವಾಹೇತರ ಸಂಬಂಧವೇ ಕಾರಣ ಅನ್ನೋದು ಬಹಿರಂಗವಾಗಿದೆ.
ಪ್ರಕರಣ ಸಂಬಂಧ ರಾಮನಗರ ಮೂಲದ ಸೈಯದ್ ಸಿಕಂದರ್, ಮುಜಾವೀರ್, ಸೌಕತ್ ಪಾಷಾ, ಹಬೀಬ್ ಹಾಗೂ ಸೈಯದ್ ಸಲೀಂ ಎಂಬುವರನ್ನು ಬಂಧಿಸಲಾಗಿದೆ. ಸೈಯದ್ ಮುಜಾಯಿದ್ ಅಲಿಯಾಸ್ ಬರ್ನಿಂಗ್ ಬಾಬಾ ಎಂಬಾತನೆ ಕೊಲೆಯಾಗಿದ್ದ ವ್ಯಕ್ತಿ.
ಏನಿದು ಲವ್ವಿ-ಡವ್ವಿ ಮರ್ಡರ್: ಬರ್ನಿಂಗ್ ಬಾಬಾ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ಆರೋಪಿ ಸೈಯದ್ ಪತ್ನಿಯೊಂದಿಗೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದ. ಮನೆಯೊಳಗೆ ಈ ಸಂಬಂಧ ಸಾಕಷ್ಟು ದಂಪತಿ ನಡುವೆ ಗಲಾಟೆ ನಡೆದಿತ್ತು. ಎಷ್ಟೇ ಬುದ್ಧಿವಾದ ಹೇಳಿದರೂ ಇವರಿಬ್ಬರ ಆಟ ನಿಂತಿರಲಿಲ್ಲವಂತೆ.
ಕೊನೆಗೆ ಸೈಯದ್ ತನ್ನ ಸ್ನೇಹಿತರೊಟ್ಟಿಗೆ ಮರ್ಡರ್ ಪ್ಲಾನ್ ಮಾಡಿದ್ದ. ದರ್ಗಾದಲ್ಲಿ ಪೂಜೆ ಮಾಡಿಸಲು ಪ್ರಿಯಕರ ಬರ್ನಿಂಗ್ ಬಾಬಾನ ಆಟೋ ಬಾಡಿಗೆ ಪಡೆದು ಬಂದಿದ್ದಾರೆ. ಕತ್ತಲಾಗುತ್ತಿದ್ದಂತೆ ಕೊಲೆ ಮಾಡಿ, ಗುರುತು ಸಿಗದಂತೆ ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಐವರು ಆರೋಪಿಗಳು ಪರಾರಿಯಾಗಿದ್ದರು.
ಮೀನು ಹಿಡಿಯಲು ಬಂದಾತ ಶವ ಇದ್ದಿದ್ದನ್ನು ಕಂಡು ಪೊಲೀಸರಿಗೆ ಕಳೆದ 22 ರಂದು ಮಾಹಿತಿ ನೀಡಿದ್ದ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವಿಶೇಷ ತಂಡ ಈ ಪ್ರಕರಣ ಭೇದಿಸಿ ಕೊಲೆ ಪ್ರಕರಣ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ತಾಯಿಗೆ ಬರ್ತ್ಡೇ ವಿಶ್ ತಿಳಿಸಲು ಮೊಬೈಲ್ ಕೊಡಲಿಲ್ಲವೆಂದು ನೊಂದ ವಿದ್ಯಾರ್ಥಿ ಆತ್ಮಹತ್ಯೆ!