ETV Bharat / state

ಮಧ್ಯಾಹ್ನ ಮಗ-ಸೊಸೆ ಅಪಘಾತದಲ್ಲಿ ಸಾವು.. ರಾತ್ರಿ ಹೃದಯಾಘಾತದಿಂದ ಅಪ್ಪ ವಿಧಿವಶ.. - ಒಂದೇ ಕುಟುಂಬದ ಮೂವರು ಸಾವು ಲೆಟೆಸ್ಟ್ ನ್ಯೂಸ್​

ನಿನ್ನೆ ಮಧ್ಯಾಹ್ನ ನಡೆದ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ್ದರು. ಈ ವಿಷಯ ತಿಳಿದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇಂತಹ ಮನಕಲಕುವ ಘಟನೆ ನಗರದಲ್ಲಿ ನಡೆದಿದೆ.

Doddaballapur
Doddaballapur
author img

By

Published : Dec 2, 2019, 12:53 PM IST

ದೊಡ್ಡಬಳ್ಳಾಪುರ: ತಾಲೂಕಿನ ದಾಬಸ್ಪೇಟೆ-ದೊಡ್ಡಬಳ್ಳಾಪುರ ರಸ್ತೆಯ ಮೆಣಸಿಗೇಟ್ ಬಳಿ ನಡೆದ ಭೀಕರ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ್ದು, ಈ ವಿಷಯ ತಿಳಿದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ರಸ್ತೆ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿರುವುದು..

ನಿನ್ನೆ ಮಧ್ಯಾಹ್ನ ನಡೆದ ಅಪಘಾತದಲ್ಲಿ ಸತೀಶ್(60), ಪತ್ನಿ ಶಾಂತಮ್ಮ (50) ಎಂಬ ದಂಪತಿ ಸಾವನ್ನಪ್ಪಿದ್ದರು. ಈ ಎರಡು ಸಾವುಗಳನ್ನು ಅರಗಿಸಿಕೊಳ್ಳುವ ಮುನ್ನವೇ ಮೃತ ಸತೀಶ್ ತಂದೆ ಚಿಕ್ಕಬಚ್ಚೇಗೌಡ(95) ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಭೀಕರ ರಸ್ತೆ ಅಪಘಾತ: ಚಿರ ನಿದ್ರೆಗೆ ಜಾರಿದ ನಾಲ್ವರು ಬೈಕ್​​​​ ಸವಾರರು

ಕಳೆದ ಮೂರು ತಿಂಗಳಿಂದ ಚಿಕ್ಕಬಚ್ಚೇಗೌಡರು ಅನಾರೋಗ್ಯದಿಂದ ಬಳಲುತ್ತಿದ್ದು ಮಗ-ಸೊಸೆ ಸಾವಿನ ಸುದ್ದಿ ತಿಳಿದು ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಒಂದೇ ದಿನ ಒಂದೇ ಕುಟುಂಬದ ಈ ಮೂವರ ಸಾವು ಸಂಬಂಧಿಕರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಗಡ್ಡಂಬಚ್ಚಹಳ್ಳಿ ಗ್ರಾಮದಲ್ಲಿ ನಡೆಯಲಿದೆ.

Intro:ಮಧ್ಯಾಹನ್ನ ಮಗ ಸೊಸೆ ಅಪಘಾತದಲ್ಲಿ ಸಾವು ರಾತ್ರಿ ಹೃದಯಾಘಾತದಿಂದ ಅಪ್ಪ ಸಾವು

ಸಾವಿನಲ್ಲೂ ಒಂದಾದ ಅಪ್ಪ-ಮಗ ಸೊಸೆ
Body:ದೊಡ್ಡಬಳ್ಳಾಪುರ : ತಾಲೂಕಿನ
ದಾಬಸ್ಪೇಟೆ-ದೊಡ್ಡಬಳ್ಳಾಪುರ ರಸ್ತೆಯ ಮೆಣಸಿಗೇಟ್ ಬಳಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಬೈಕ್ ಸವಾರರು ಸಾವನ್ನಪ್ಪಿದ್ದರು. ನಿನ್ನೆ ಮಾಧ್ಯಹ್ನ ನಡಿದ ಅಪಘಾತದಲ್ಲಿ ದಂಪತಿಗಳಾದ ಸತೀಶ್(60) ಪತ್ನಿ ಶಾಂತಮ್ಮ (50) ಸಾವನ್ನಪ್ಪಿದ್ದರು. ಈ ಎರಡು ಸಾವುಗಳನ್ನ ಅರಗಿಸಿಕೊಳ್ಳುವ ಮುನ್ನವೇ ಮೃತ ಸತೀಶ್ ತಂದೆ ಚಿಕ್ಕಬಚ್ಚೇಗೌಡ(95) ರಾತ್ರಿ 8ಗಂಟೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಳೆದ ಮೂರು ತಿಂಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಚಿಕ್ಕಬಚ್ಚೇಗೌಡರು ಮಗ ಸೊಸೆಯ ಸಾವಿನ ಸುದ್ದಿ ತಿಳಿದು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಒಂದೇ ದಿನ ಕುಟುಂಬ ಮೂವರ ಸಾವು ಸಂಬಂಧಿಕರನ್ನ ಶೋಕ ಸಾಗರದಲ್ಲಿ ಮುಳುಗಿಸಿದೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಗಡ್ಡಂಬಚ್ಚಹಳ್ಳಿಯಲ್ಲಿ ಗ್ರಾಮದಲ್ಲಿಯೇ ನಡೆಯಲಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.