ETV Bharat / state

ಸಿಎಂ ಸಂವಿಧಾನದಂತೆ ಆಡಳಿತ ನಡೆಸುತ್ತಿದ್ದಾರಾ ಅಥವಾ ಪಕ್ಷ ಹೇಳಿದಂತೆ ನಡೆಸುತ್ತಿದ್ದಾರಾ : ಡಿಕೆಶಿ - DK Shivakumar comment on CM Bommai ​

ಹಿಜಾಬ್ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತ ಪ್ರಶ್ನೆಗೆ, ಮುಖ್ಯಮಂತ್ರಿಗಳು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ರಾಜ್ಯದ ಆಡಳಿತ ನಡೆಸುತ್ತಿದ್ದಾರೆ. ಅವರ ಪಕ್ಷದವರು ಏನು ಹೇಳಿದ್ದಾರೆ. ದೇಶದ ಸಂವಿಧಾನದಂತೆ ಅವರು ಆಡಳಿತ ನಡೆಸುತ್ತಿದ್ದಾರಾ? ಅಥವಾ ಅವರ ಪಕ್ಷದವರು ಹೇಳಿದಂತೆ ಆಡಳಿತ ಮಾಡುತ್ತಿದ್ದಾರಾ ಎಂದು ಅವರೇ ಹೇಳಬೇಕು. ಮುಖ್ಯಮಂತ್ರಿಗಳು ಅವರಿಗೆ ಉತ್ತರ ನೀಡಬೇಕು..

DK Shivakumar comment on CM Bommai
ಸಿಎಂ ಬೊಮ್ಮಾಯಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ
author img

By

Published : Feb 5, 2022, 6:51 PM IST

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಹಾಗೂ ಕಂಟ್ರೋಲ್ ರೂಂ ಸದಸ್ಯರ ಸಭೆ ನಡೆಸಿದರು.

ಸಿಎಂ ಬೊಮ್ಮಾಯಿ ವಿರುದ್ಧ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿರುವುದು..

ಸದಸ್ಯತ್ವ ನೋಂದಣಿ ಕುರಿತ ಎಐಸಿಸಿ ಉಸ್ತುವಾರಿಗಳಾದ ಪ್ರದೇಶ್ ರಿಟರ್ನಿಂಗ್ ಆಫೀಸರ್ ಸುದರ್ಶನ್ ನಾಚಿಯಪ್ಪನ್,ಜಾನ್ಸನ್ ಅಬ್ರಹಾಂ, ಮೋತಿಲಾಲ್ ದೇವಗನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸದಸ್ಯತ್ವ ನೋಂದಣಿ ಕರ್ನಾಟಕದ ಸಂಚಾಲಕ ಆರ್.ವಿ. ವೆಂಕಟೇಶ್, ಡಿಜಿಟಲ್ ಸದಸ್ಯತ್ವ ನೋಂದಣಿ ಕರ್ನಾಟಕದ ಮುಖ್ಯ ಸಮನ್ವಯಕಾರ ರಘುನಂದನ್ ರಾಮಣ್ಣ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ಇಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗದವರ ಸಭೆ ನಡೆಸಲಾಯಿತು. ಅವರ ಕ್ಷೇತ್ರಗಳಲ್ಲಿ ಹೇಗೆ ಶಕ್ತಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ಎಐಸಿಸಿಯಿಂದ ಒಂದು ತಂಡ ಆಗಮಿಸಿತ್ತು. ಅವರ ಜೊತೆ ಸಭೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

meeting
ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಹಾಗೂ ಕಂಟ್ರೋಲ್ ರೂಂ ಸದಸ್ಯರ ಸಭೆ

ಹಿಜಾಬ್ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತ ಪ್ರಶ್ನೆಗೆ, ಮುಖ್ಯಮಂತ್ರಿಗಳು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ರಾಜ್ಯದ ಆಡಳಿತ ನಡೆಸುತ್ತಿದ್ದಾರೆ. ಅವರ ಪಕ್ಷದವರು ಏನು ಹೇಳಿದ್ದಾರೆ.

ದೇಶದ ಸಂವಿಧಾನದಂತೆ ಅವರು ಆಡಳಿತ ನಡೆಸುತ್ತಿದ್ದಾರಾ? ಅಥವಾ ಅವರ ಪಕ್ಷದವರು ಹೇಳಿದಂತೆ ಆಡಳಿತ ಮಾಡುತ್ತಿದ್ದಾರಾ ಎಂದು ಅವರೇ ಹೇಳಬೇಕು. ಮುಖ್ಯಮಂತ್ರಿಗಳು ಅವರಿಗೆ ಉತ್ತರ ನೀಡಬೇಕು. ರಸ್ತೆಯಲ್ಲಿ ಹೋಗುವವರು ಮಾತನಾಡಿದ್ದಕ್ಕೆಲ್ಲ ನಾನು ಉತ್ತರ ನೀಡಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರುವುದಾಗಿ ಸಿಎಂ ಇಬ್ರಾಹಿಂ ನೀಡಿರುವ ಹೇಳಿಕೆಗೆ ಉತ್ತರಿಸಿ, ನಾನು ಪಕ್ಷದ ಸಂಘಟನೆ ವಿಚಾರದಲ್ಲಿ ಮಗ್ನನಾಗಿದ್ದು, ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಇದನ್ನೂ ಓದಿ: ಬೇಟಿ ಬಚಾವೋ ಬೇಟಿ ಪಢಾವೋ ಬದಲಿಗೆ ಈಗ ಬೇಟಿ ಹಠಾವೋ ಮಾಡಲಾಗುತ್ತಿದೆ : ಹೆಚ್​​ಡಿಕೆ ವ್ಯಂಗ್ಯ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.