ETV Bharat / state

ಕಸ ಬೇಡ, ಟಿಡಿಆರ್ ಬೇಡವೇ ಬೇಡ... ರಾಮನಗರ ರೈತರಿಂದ ಪ್ರತಿಭಟನೆ - kannada news

ತಮ್ಮ ಭೂಮಿಯನ್ನು ಟಿಡಿಆರ್​ಗೆ ಮಾರಾಟ ಮಾಡಿ ಬಿಲ್ಡರ್​ಗೆ ಲಾಭ ಮಾಡಿಕೊಡಲಾಗಿದೆ ರಾಮನಗರ ಜಿಲ್ಲೆಯ ರೈತರು ಆರೋಪಿಸಿದ್ದಾರೆ. ಅಲ್ಲದೆ, ಇದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿ ಬಿಬಿಎಂಪಿ ಆಯುಕ್ತರಿಗೆ ಮನವಿ ಸಹ ಸಲ್ಲಿಸಿದ್ದಾರೆ.

ಸಿಎಂ ತವರೂರು ರೈತರಿಂದ ಪ್ರತಿಭಟನೆ
author img

By

Published : May 21, 2019, 11:22 PM IST

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಕ್ಷೇತ್ರದ ರೈತರು ಬಿಬಿಎಂಪಿಯಲ್ಲಿ ಎದುರು ಪ್ರತಿಭಟನೆ ನಡೆಸಿದರು.

ರಾಮನಗರದ ಬಿಡದಿ ಹೋಬಳಿಯ ಕೊಡಿಯಾಲ ಕರೇನಹಳ್ಳಿ ಗ್ರಾಮದಲ್ಲಿ ಬಿಬಿಎಂಪಿ ಕಸ ತುಂಬಲು 42 ಎಕರೆ ಜಾಗ ಖರೀದಿಸಿ ಟಿಡಿಆರ್ (ಅಭಿವೃದ್ಧಿ ಹಕ್ಕು ವರ್ಗಾವಣೆ) ನೀಡಿದೆ ಎಂದು ಆರೋಪಿಸಿ ರೈತರು ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದರು.

ಸ್ಥಳೀಯ ರೈತರ ಗಮನಕ್ಕೆ ತರದೇ 42 ಎಕರೆ ಜಾಗ ಟಿಡಿಆರ್ ಗೆ ಮಾರಾಟ ಮಾಡಿ ಬಿಲ್ಡರ್​ಗೆ ಲಾಭ ಮಾಡಿಕೊಡಲಾಗಿದೆ. ಹಿಂದೊಮ್ಮೆ ಪ್ರತಿಭಟನೆ ಮಾಡಿ, ಟಿಡಿಆರ್ ನೀಡುವುದನ್ನು ನಿಲ್ಲಿಸಿದ್ದೆವು‌. ಆದ್ರೆ ಇದೀಗ ಮತ್ತೆ ಹಿಂಬಾಗಿಲ ಮೂಲಕ ಟೆಂಡರ್ ಪಡೆಯಲು ಖಾಸಗಿ ವ್ಯಕ್ತಿಗಳು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಸಿಎಂ ತವರೂರು ರೈತರಿಂದ ಪ್ರತಿಭಟನೆ

ರಾಮನಗರದಲ್ಲಿ ಕಸ ಹಾಕುವುದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತದೆ. ಈಗಾಗಲೇ ವೃಷಭಾವತಿ ಕೊಳಚೆ ನೀರಿನಿಂದ ಜನ ಹೈರಾಣಾಗಿದ್ದಾರೆ. ಭೂಭರ್ತಿಯನ್ನೂ ಮಾಡುವುದರಿಂದ ಸುತ್ತಮುತ್ತಲಿನ ಸಾರ್ವಜನಿಕರು, ದೇವಸ್ಥಾನ, ಶಾಲೆಗಳು, ಹಾಸ್ಟೆಲ್ ಮತ್ತು ಜನರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಈ ಕೂಡಲೇ ಕಸ ಹಾಕುವ ನಿರ್ಧಾರವನ್ನು ಪಾಲಿಕೆ ಕೈಬಿಡಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಸದ್ಯ ಕಸ ರಾಮನಗರಕ್ಕೆ ವರ್ಗಾವಣೆ ಮಾಡುವ ಯಾವುದೇ ಪ್ರಸ್ತಾವನೆ ಬಿಬಿಎಂಪಿ ಮುಂದೆ ಇಲ್ಲ. ಅಲ್ಲದೆ ಟಿಡಿಆರ್ ನೀಡಿರುವ ವಿಚಾರ ಐದು ವರ್ಷಕ್ಕೂ ಹಳೆಯದ್ದಾಗಿದ್ದರಿಂದ, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ತಿಳಿದಿಕೊಂಡು ರೈತರ ಸಮಸ್ಯೆ ಬಗೆಹರಿಸಲಾಗುವುದು ಎಂದು ಮನವಿ ಮಾಡಿದರು.

Intro:ಕಸ ಬೇಡ , ಟಿಡಿಆರ್ ಬೇಡವೇ ಬೇಡ ‌ಎಂದು ಪ್ರತಿಭಟಿಸಿದ ಸಿಎಂ ಊರಿನ ರೈತರು

ಬೆಂಗಳೂರು- ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕ್ಷೇತ್ರದ ರೈತರು ಇಂದು ಬಿಬಿಎಂಪಿಯಲ್ಲಿ ಪ್ರತಿಭಟನೆ ನಡೆಸಿದರು.
ರಾಮನಗರದ ಬಿಡದಿ ಹೋಬಳಿಯ ಕೊಡಿಯಾಲ ಕರೇನಹಳ್ಳಿ ಗ್ರಾಮದಲ್ಲಿ ಬಿಬಿಎಂಪಿ ಕಸ ಭೂಭರ್ತಿಗಾಗಿ ನಲ್ವತ್ತೆರಡು ಎಕರೆ ಜಾಗ ಖರೀದಿಸಿ ಟಿಡಿಆರ್ (ಅಭಿವೃದ್ಧಿ ಹಕ್ಕು ವರ್ಗಾವಣೆ) ನೀಡಿರುವುದನ್ನು ವಿರೋಧಿಸಿ ಸ್ಥಳೀಯ ರೈತರು ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದರು.
ಸ್ಥಳೀಯ ರೈತರ ಗಮನಕ್ಕೆ ತರದೇ ನಲ್ವತ್ತೆರಡು ಎಕರೆ ಜಾಗ ಟಿಡಿಆರ್ ಗೆ ಮಾರಾಟ ಮಾಡಿ ಬಿಲ್ಡರ್ ಗೆ ಲಾಭ ಮಾಡಿ ಕೊಡಲಾಗಿದೆ. ಹಿಂದೊಮ್ಮೆ ಪ್ರತಿಭಟನೆ ಮಾಡಿ, ಟಿಡಿಆರ್ ನೀಡುವುದನ್ನು ನಿಲ್ಲಿಸಿದ್ದೆವು‌. ಆದ್ರೆ ಇದೀಗ ಮತ್ತೆ ಹಿಂಬಾಗಿಲ ಮೂಲಕ ಟೊಡೊಆರ್ ಪಡೆಯಲು ಖಾಸಗಿ ವ್ಯಕ್ತಿಗಳು ಹುನ್ನಾರ ನಡೆಸುತ್ತಿದ್ದಾರೆ. ಆದರೆ ರಾಮನಗರದಲ್ಲಿ ಕಸ ಹಾಕುವುದರಿಂದ ಸುತ್ತಮುತ್ತರ ಪರಿಸರ ಹಾಳಾಗುತ್ತದೆ. ಈಗಾಗಲೇ ವೃಷಭಾವತಿಯ ಕೊಳಚೆ ನೀರಿನಿಂದ ಜನ ಹೈರಾಣಾಗಿದ್ದಾರೆ. ಭೂಭರ್ತಿಯನ್ನೂ ಮಾಡುವುದರಿಂದ ಸುತ್ತಮುತ್ತಲಿನ ಸಾರ್ವಜನಿಕರು, ದೇವಸ್ಥಾನ, ಶಾಲೆಗಳು , ಹಾಸ್ಟೆಲ್ ಜನರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಈ ಕೂಡಲೇ ಕಸ ಹಾಕುವ ನಿರ್ಧಾರವನ್ನು ಪಾಲಿಕೆ ಕೈಬಿಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಸಿದ ಆಯುಕ್ತರಾದ ಮಂಜುನಾಥ್ ಪ್ರಸಾದ್ ಸಧ್ಯ ಕಸ ರಾಮನಗರಕ್ಕೆ ವರ್ಗಾವಣೆ ಮಾಡುವ ಯಾವುದೇ ಪ್ರಸ್ತಾವನೆ ಬಿಬಿಎಂಪಿ ಮುಂದೆ ಇಲ್ಲ. ಅಲ್ಲದೆ ಟಿಡಿಆರ್ ನೀಡಿರುವ ವಿಚಾರ ಐದು ವರ್ಷಕ್ಕೂ ಹಳೆಯದ್ದಾಗಿದ್ದರಿಂದ, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ತಿಳಿದಿಕೊಂಡು ರೈತರ ಸಮಸ್ಯೆ ಬಗೆಹರಿಸಲಾಗುವುದು ಎಂದು ಮನವಿ ಮಾಡಿದರು.
ಸೌಮ್ಯಶ್ರೀ
KN_BNG_21_02_Ramanagara_bbmp_script_sowmya_7202707Body:..Conclusion:..ಒಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.