ಆನೇಕಲ್ : ನಾಳೆಯಿಂದ ಲಾಕ್ಡೌನ್ ಮೊದಲ ಹಂತದ ಸಡಿಲಿಕೆ ಹಿನ್ನೆಲೆ ಹೊರ ರಾಜ್ಯದಿಂದ ಜನರು ಇಂದಿನಿಂದಲೇ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಊರಿಗೆ ತೆರಳಿದ್ದ ವಲಸೆ ಕಾರ್ಮಿಕರು ಮತ್ತೆ ಕರ್ಮ ಭೂಮಿಯತ್ತ ಮರಳುತ್ತಿದ್ದಾರೆ. ಹೀಗಾಗಿ, ಆನೇಕಲ್ ಅತ್ತಿಬೆಲೆ-ತಮಿಳುನಾಡಿನ ಹೊಸೂರು ರಾಷ್ಟ್ರೀಯ ಹೆದ್ದಾರಿ ಗಡಿಯಲ್ಲಿ ಒಂದು ಕಿಲೋಮೀಟರ್ಗೂ ಹೆಚ್ಚು ವಾಹನಗಳು ಸಾಲುಗಟ್ಟಿವೆ. ಅತ್ತಿಬೆಲೆ ಟೋಲ್ನಿಂದ ಅತ್ತಿಬೆಲೆ ಪಟ್ಟಣದ ಮಾರ್ಗವೂ ವಾಹನ ಸಂಚಾರದಿಂದ ನಲುಗಿದೆ.
ಇದನ್ನೂ ಓದಿ:ನೀವ್ ಲಸಿಕೆ ಹಾಕಿಸಿಕೊಂಡ್ರಾ, 20 ಕೆಜಿ ಅಕ್ಕಿ ಕೊಡ್ತಾರಂತೆ ನೋಡಿ ಇಲ್ಲಿ..
ಕೇರಳ, ಮಹಾರಾಷ್ಟ್ರ, ತಮಿಳುನಾಡು ಮೂಲದ ವಾಹನಗಳು ರಾಜ್ಯದ ಗಡಿ ಅತ್ತಿಬೆಲೆ ಮೂಲಕ ಬೆಂಗಳೂರಿನತ್ತ ಬರುತ್ತಿದ್ದು, ಹೆಸರಿಗಷ್ಟೇ ಚೆಕ್ಪೋಸ್ಟ್ ಇದೆ ಎನಿಸುವಂತಾಗಿದೆ. ಅತ್ತಿಬೆಲೆ ಪೊಲೀಸರು ಹೆದ್ದಾರಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಸಾಕಾಗಿ ಹೋಗಿದ್ದಾರೆ.
ಇದನ್ನೂ ಓದಿ:ಭಾರತ ಬಿಟ್ಟು 32 ದೇಶಗಳಿಗೆ ಮಾವಿನ ಹಣ್ಣು ಕಳುಹಿಸಿದ ಪಾಕಿಸ್ತಾನ: ರಿಜೆಕ್ಟ್ ಮಾಡಿದ ಚೀನಾ, ಅಮೆರಿಕ