ದಾವಣಗೆರೆ: ಒಂದು ಸಮುದಾಯಕ್ಕೆ ಸುಣ್ಣ, ಇನ್ನೊಂದು ಸಮುದಾಯಕ್ಕೆ ಬೆಣ್ಣೆ ಎಂಬ ನೀತಿಯನ್ನು ಸರ್ಕಾರ ಕೈಬಿಡಬೇಕು. ಒಳಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದ ನಡೆಗೆ ಆದಿಜಾಂಬವ ಶಾಖಾ ಮಠದ ಷಡಕ್ಷರಿ ಮುನಿಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾದಿಗ ಜನಾಂಗಕ್ಕೆ ಒಳಮೀಸಲಾತಿ ನೀಡಬೇಕು ಎಂದು ಹೋರಾಟ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಫ್ರೀಡಂ ಪಾರ್ಕ್ನಲ್ಲಿ ಈಗಾಗಲೇ ಹೋರಾಟ ಆರಂಭವಾಗಿದೆ. ಬರುವ ಡಿ.19 ರಂದು ಹೋರಾಟ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಿದ್ದೇವೆ.
ಸರ್ಕಾರವನ್ನು ಮತದಾರರು, ನಾಗರಿಕರು ತಾಯಿ ಸ್ಥಾನದಲ್ಲಿ ನೋಡುತ್ತಾರೆ. ತಾಯಿ ಇಡೀ ರಾಜ್ಯದ ಮಕ್ಕಳನ್ನು ಸಮಾನತೆ ದೃಷ್ಟಿಯಲ್ಲಿ ನೋಡಬೇಕು. ಅದರಲ್ಲೂ ಕೆಲ ವರ್ಗದಲ್ಲಿರುವ ಶೋಷಣೆಯಲ್ಲಿರುವ ಹಾಗೂ ಮೀಸಲಾತಿ ಪಡೆಯಲು ಆಗದೇ ಇರುವವರಿಗೆ ಸರ್ಕಾರ ಮೀಸಲಾತಿ ನೀಡಬೇಕು. ಅದನ್ನು ಕೊಡಿ ಎಂದು ಕೇಳುತ್ತಿದ್ದೇವೆ ಹೊರತು, ಈ ಮೀಸಲಾತಿಯ ಹೋರಾಟ ಯಾವುದೇ ದಲಿತ ಜಾತಿಗಳ ವಿರುದ್ಧ ಅಲ್ವೇ ಅಲ್ಲ ಎಂದು ಹೇಳಿದರು.
ಇದನ್ನೂ ಓದಿ: ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಲು ಪ್ರಯತ್ನ: ಸಿಎಂ ಭರವಸೆ
ನಾವು ಮೀಸಲಾತಿಗಾಗಿ ಗಡವು ಕೊಡುವುದಿಲ್ಲ. ಬದಲಾಗಿ ಮುಂದಿನ ದಿನಗಳಲ್ಲಿ ಬೆಳಗಾವಿ ಸುರ್ವಣಸೌಧದಲ್ಲಿ ನಾಗಮೋಹನ್ ದಾಸ್ ವರದಿ ಚರ್ಚೆಯಾಗುತ್ತದೆಂಬ ವಿಶ್ವಾಸ ಇದೆ. ಅ ವರದಿ ಚರ್ಚೆಯಾಗದೆ ಇದ್ದಲ್ಲಿ ಬೃಹತ್ ಜನಾಂದೋಲ ಹಮ್ಮಿಕೊಳ್ಳಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.