ಬೆಂಗಳೂರು: ಕೊರೊನಾ ವೈರಸ್ ಭೀತಿ ಯಾರನ್ನೂ ಬಿಟ್ಟಿಲ್ಲ ಹೌದು, ಈ ಬಗ್ಗೆ ಗರ್ಭೀಣಿಯರಲ್ಲಿ ಆತಂಕ ಹೆಚ್ಚಾಗಿದ್ದು, ಇಂತಹ ಸಂದರ್ಭದಲ್ಲಿ ಅವರ ತಲೆಯಲ್ಲಿ ಯಾವೆಲ್ಲಾ ಪ್ರಶ್ನೆಗಳು ಮೂಡುತ್ತವೆ ಹಾಗೂ ಅದರ ಪರಿಹಾರ ಹೇಗೆ ಎಂಬುದರ ಬಗ್ಗೆ ಪ್ರಸೂತಿ, ಸ್ತ್ರೀ ರೋಗ ತಜ್ಞರಾದ ಡಾ. ಚೈತ್ರಾ ಎಸ್ ನಿರಂತರ್ ಹೇಳಿದ್ದಾರೆ.
ಕೊರೊನಾ ವೈರಸ್ ಬಂದ ಕೂಡಲೇ ಬೇರೆಯವರಿಗೆ ಯಾವ ರೀತಿ ತೊಂದರೆಯಾಗುತ್ತದೆಯೋ ಅದೇ ರೀತಿ ಗರ್ಭಿಣಿಯರಿಗೂ ಆಗಲಿದೆ. ಆದರೆ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ತೊಂದರೆ, ಅಸ್ತಮಾ, ಇನ್ನು ಬೇರೆ ತೊಂದರೆಗಳು ಇದ್ದರೇ ಇವರಿಗೆ ಹೆಚ್ಚು ರಿಸ್ಕ್ ಇರಲಿದೆ ಎಂದು ತಿಳಿಸಿದ್ದಾರೆ.
ಲಾಕ್ಡೌನ್ ಹಾಗೂ ಕೊರೊನಾ ಭೀತಿಯಲ್ಲಿರುವ ಗರ್ಭಿಣಿಯರಲ್ಲಿ ಮೊದಲು ಮೂಡುವ ಪ್ರಶ್ನೆ, ನಾವು ಪ್ರತಿ ತಿಂಗಳು ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕಾ ಎಂದು. ಹೌದು ಈ ಬಗ್ಗೆ ಯಾರೂ ಹೆದರಬೇಕಾಗಿಲ್ಲ ಯಾಕಂದ್ರೆ ಪ್ರತಿಯೊಂದು ಆಸ್ಪತ್ರೆಯಲ್ಲೂ ಕೂಡ ವಿಡಿಯೋ ಕನ್ಸಲ್ಟೇಷನ್ ವ್ಯವಸ್ಥೆಯಿದ್ದು, ಈ ಮೂಲಕ ನೀವು ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಗರ್ಭ ವ್ಯವಸ್ಥೆಯಲ್ಲಿ ಸರಿಯಾದ ಸಮಯಕ್ಕೆ ಶುಗರ್, ಥೈರಾಯ್ಡ್ ಇತರ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ನಿಮ್ಮ ವೈದ್ಯರ ಜೊತೆ ಚಾಚು ತಪ್ಪದೇ ಚರ್ಚಿಸಬೇಕು. ತಾಯಿಯಿಂದ ಮಗುವಿಗೆ ಈ ರೋಗ ಹರಡುತ್ತಾ ಎಂಬ ಯೋಚನೆ ಬರುತ್ತಿದ್ದರೇ ಈ ಬಗ್ಗೆ ಮಾರ್ಚ್ ವರೆಗೂ ಆ ರೀತಿ ಆಗೋದಿಲ್ಲ ಎಂಬ ಉತ್ತರ ಬಂದಿತ್ತು. ಆದರೇ ನಂತರದ ದಿನಗಳಲ್ಲಿ ಚೀನಾದಲ್ಲಿ ಈ ರೀತಿಯಾ ಸಮಸ್ಯೆಯೂ ಕಂಡು ಬಂದಿರುವ ಕಾರಣ ಈ ಕುರಿತು ರಿಸರ್ಚ್ ಮಾಡಲಾಗುತ್ತಿದೆ ಎಂದರು.
ಗರ್ಭೀಣಿಯರು ಆದಷ್ಟೂ ಮನೆಯಿಂದ ಹೊರಗೆ ಹೋಗದಿರು, ಹೆಚ್ಚು ಜನ ಸೇರಿರುವ ಕಡೆ ಹೋಗಬೇಡಿ, ಆಗಾಗ್ಗೆ ಸೋಪ್ ಬಳಸಿ ಕೈಯನ್ನು ತೊಳೆಯುತ್ತಿರಿ ಎಂದು ಸ್ತ್ರೀ ರೋಗ ತಜ್ಞರಾದ ಡಾ. ಚೈತ್ರಾ ಎಸ್ ನಿರಂತರ್ ಅವರು ಗರ್ಭಿಣಿಯರಿಗೆ ಕೊರೊನಾ ವೈರಸ್ ನಿಂದಾ ದೂರ ಇರಲೂ ತಮ್ಮದೇ ಆದಂತಹ ಸಲಹೆ ಸೂಚನೆಗಳನ್ನು ನೀಡಿದ್ದಾರೆ.