ETV Bharat / state

Covid Effect: ನಮ್ಮ ಮೆಟ್ರೋಗೆ ಆದ ನಷ್ಟವೆಷ್ಟು ಗೊತ್ತಾ!?

author img

By

Published : Jul 6, 2021, 11:05 AM IST

ಕೋವಿಡ್​​ನಿಂದಾಗಿ ಬಹುತೇಕ ಆರ್ಥಿಕ ಚಟುವಟಿಕೆಗಳು ನೆಲ ಕಚ್ಚಿವೆ. ಇದು ನಮ್ಮ ಮೆಟ್ರೋಗೂ ಸಹ ಹೊರತಾಗಿಲ್ಲ. ಐದಾರು ತಿಂಗಳಲ್ಲೇ ಸುಮಾರು 900 ಕೋಟಿ ರೂಪಾಯಿ ನಷ್ಟವಾಗಿದೆ.

ನಮ್ಮ ಮೆಟ್ರೋ
ನಮ್ಮ ಮೆಟ್ರೋ

ಬೆಂಗಳೂರು: ಕೊರೊನಾ ಹಿನ್ನೆಲೆ ಘೋಷಿಸಿದ್ದ ಲಾಕ್​ಡೌನ್​ನಿಂದಾಗಿ ಮೆಟ್ರೋ ಆದಾಯ ಕೋಟಿಗಟ್ಟಲೇ ಕುಸಿದಿದೆ. ಸುಮಾರು ಐದು ತಿಂಗಳಿಂದ ಮೆಟ್ರೋ ಸಂಚಾರ ಸ್ಥಗಿತಗೊಂಡಿದ್ದರಿಂದ ಬಿಎಂಆರ್​ಸಿಎಲ್​ ಸಂಸ್ಥೆಗೆ 904 ಕೋಟಿ ರೂ.ನಷ್ಟವಾಗಿದೆ.

2020 ರಲ್ಲಿ ಮೊದಲ ಲಾಕ್​ಡೌನ್​ ಘೋಷಣೆಯಾದಾಗ ಐದು ತಿಂಗಳು ನಮ್ಮ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸೆಪ್ಟೆಂಬರ್ 7 ರಿಂದ ಮತ್ತೆ ಸಂಚಾರ ಪ್ರಾರಂಭಿಸಿತ್ತು. ಪ್ರಯಾಣಿಕರ ಸಂಖ್ಯೆ ಬೆರಳೆಣಿಕೆಯಷ್ಟು ಇದ್ದಿದ್ದರಿಂದ ಸಂಚಾರ ಆರಂಭವಾದ್ರೂ ಆದಾಯ ಬರಲಿಲ್ಲ.

ಕಳೆದ ಆರ್ಥಿಕ ವರ್ಷದಲ್ಲಿ ನಮ್ಮ ಮೆಟ್ರೋ 73.92 ಕೋಟಿ ರೂ ಆದಾಯ ಗಳಿಸಿತ್ತು. ರೈಲುಗಳ ನಿರ್ವಹಣೆ, ಸಿಬ್ಬಂದಿಗೆ ಸಂಬಳ ಸೇರಿದಂತೆ ಸಾಕಷ್ಟು ನಷ್ಟ ಅನುಭವಿಸಿತ್ತು. ಬ್ಯಾಂಕ್‌ಗಳಿಂದ ಕಡಿಮೆ ಅವಧಿಗೆ ಸಾಲ ಕೊಡಿಸುವಂತೆ ಮೆಟ್ರೋ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಕಳೆದ ಒಂದೂವರೆ ವರ್ಷದಿಂದ ನಮ್ಮ ಮೆಟ್ರೋದಲ್ಲಿ ಟೋಕನ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು, ಕೊರೊನಾ ಮೊದಲ ಲಾಕ್‌ಡೌನ್ ಬಳಿಕ ಮೆಟ್ರೋ ಸಂಚಾರ ಪುನಾರಂಭವಾದಾಗ ಟೋಕನ್ ವ್ಯವಸ್ಥೆ ಜಾರಿ ಮಾಡಿದರೆ ಹೆಚ್ಚು ಮಂದಿ ಸರತಿಯಲಿ ನಿಲ್ಲಬೇಕಾಗುತ್ತದೆ ಎಂದು ಆತಂಕ ಮನೆ ಮಾಡಿತ್ತು. ಕೇವಲ ಸ್ಮಾರ್ಟ್‌ಕಾರ್ಡ್ ಹೊಂದಿರುವವರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಆದರೆ ಈ ಕ್ರಮದಿಂದಾಗಿ ನಮ್ಮ ಮೆಟ್ರೋ ಆದಾಯಕ್ಕೆ ಭಾರಿ ಹೊಡೆತ ಬಿತ್ತು. ಹೀಗಾಗಿ ಜೂನ್ 5 ರಿಂದ ಪುನಾರಂಭವಾಗಿರುವ ಮೆಟ್ರೋಗೆ ಮತ್ತೆ ಟೋಕನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಉದ್ಯೋಗಾಂಕ್ಷಿಗಳಿಗೆ ಗುಡ್​ ನ್ಯೂಸ್​: ಪೊಲೀಸ್ ಇಲಾಖೆಯ ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ಕರ್ನಾಟಕದಲ್ಲಿ ಸೋಮವಾರದಿಂದ ಅನ್​​ಲಾಕ್​​ 3.O ಜಾರಿಯಾಗಿದ್ದು, ಬೆಳಗ್ಗೆ 7 ರಿಂದ ಸಂಜೆ 8 ಗಂಟೆವರಿಗೆ ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹಾಗೆಯೇ ವಾರಾಂತ್ಯದಲ್ಲೂ ಮೆಟ್ರೋ ಕಾರ್ಯ ನಿರ್ವಹಿಸಲಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.