ETV Bharat / state

ಕೊರೊನಾ ಭೀತಿ: ವೈಯಕ್ತಿಕ ಭೇಟಿ ರದ್ದು ಮಾಡಿದ ಲೋಕಾಯುಕ್ತ ಕಚೇರಿ

ಕೊರೊನಾ ಭೀತಿ ಹಿನ್ನೆಲೆ ಲೋಕಾಯುಕ್ತ ಕಚೇರಿಗೆ ಸಾರ್ವಜನಿಕರ ವೈಯಕ್ತಿಕ ಭೇಟಿಯನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಲೋಕಾಯುಕ್ತ ವಿಶ್ವನಾಥ್​​​ ಶೆಟ್ಟಿ ಸದ್ಯ ದೂರು ನೀಡಲು ಬರಬೇಡಿ. ಏನೇ ಇದ್ದರು ಸಹಾಯವಾಣಿ ಮೂಲಕ ತಿಳಿಸಿ ಎಂದಿದ್ದಾರೆ.

author img

By

Published : Mar 19, 2020, 4:23 PM IST

Lokayukta departmen
ಸದ್ಯಕ್ಕೆ ಯಾರಿಗೂ ಇಲ್ಲ ಲೋಕಾಯುಕ್ತರ ಭೇಟಿ

ಬೆಂಗಳೂರು: ಸಿಲಿಕಾನ್​​ ಸಿಟಿಯಲ್ಲಿ ಎಲ್ಲೆಡೆ ಕೊರೊನಾ ವೈರಸ್​ ಹಬ್ಬುತ್ತಿರುವ ಹಿನ್ನೆಲೆ ಲೋಕಾಯುಕ್ತ ವಿಶ್ವನಾಥ್​​​ ಶೆಟ್ಟಿ ಸದ್ಯ ದೂರು ನೀಡಲು ಬರಬೇಡಿ. ಏನೇ ಇದ್ದರು ಸಹಾಯವಾಣಿ ಮೂಲಕ ತಿಳಿಸಿ ಎಂದಿದ್ದಾರೆ.

ಈಗಾಗಲೇ ಲೋಕಾಯುಕ್ತ ಕಚೇರಿಯಲ್ಲಿ ಕೊರೊನಾ ಪತ್ತೆ ಹಚ್ಚುವ ಥರ್ಮಲ್ ಸ್ಕ್ರೀನಿಂಗ್ ಅಳವಡಿಸಲು ನಿರ್ಧಾರ ಮಾಡಿದ್ದಾರೆ. ಒಂದು ವೇಳೆ ಸೋಂಕು ಇರುವ ಸಿಬ್ಬಂದಿ ಪತ್ತೆಯಾದರೆ ಅವರು ರಜೆ ಪಡೆದುಕೊಂಡು ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದಾರೆ. ಮತ್ತೊಂದೆಡೆ ಲೋಕಾಯುಕ್ತದಲ್ಲಿ ನಡೆಯುವ ವಿಚಾರಣೆಗಳನ್ನು ಮುಂದೂಡಿಕೆ ಮಾಡಲು ನಿರ್ಧಾರ ಮಾಡಿ, ಕಚೇರಿಗೆ ವೈಯಕ್ತಿಕವಾಗಿ ಭೇಟಿ ನೀಡುವುದನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ.

Lokayukta departmen
ಸದ್ಯಕ್ಕೆ ಯಾರಿಗೂ ಇಲ್ಲ ಲೋಕಾಯುಕ್ತರ ಭೇಟಿ

ಅಗತ್ಯ ದಾಖಲೆಗಳನ್ನ ಲೋಕಾಯುಕ್ತ ಇನ್ ವಾರ್ಡ್​ನಲ್ಲಿ ಕೊಡಲು ತಿಳಿಸಲಾಗಿದೆ. ಸದ್ಯ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ನಡೆಸುವ ವೈಯಕ್ತಿಕ ವಿಚಾರಣೆ ಸಹ ಮುಂದೂಡಿಕೆ ಮಾಡಿದ್ದು, ತೀರಾ ಅಗತ್ಯವಿರುವ ಕೇಸ್​​ಗಳ ವಿಚಾರಣೆ ಮಾತ್ರ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.