ETV Bharat / state

ಚೆಕ್ ಬೌನ್ಸ್ ಕೇಸ್: ಗುರುಪ್ರಸಾದ್ ಪೊಲೀಸ್ ವಶಕ್ಕೆ - ETV Bharath Kannada news

ಚೆಕ್ ಬೌನ್ಸ್ ಪ್ರಕರಣ - ಮಠ, ಎದ್ದೇಳು ಮಂಜುನಾಥ್ ಸಿನಿಮಾ ನಿರ್ದೇಶಕ ಗುರುಪ್ರಸಾದ್​ ಪೊಲೀಸ್​ ವಶಕ್ಕೆ.

director guruprasad
ಗುರುಪ್ರಸಾದ್ ಪೊಲೀಸ್ ವಶಕ್ಕೆ
author img

By

Published : Jan 13, 2023, 3:22 PM IST

ಬೆಂಗಳೂರು: ಜಾಮೀನುರಹಿತ ವಾರೆಂಟ್ ಆದೇಶ ಹಿನ್ನೆಲೆ ಮಠ, ಎದ್ದೇಳು ಮಂಜುನಾಥ್ ಚಿತ್ರಗಳ ನಿರ್ದೇಶಕ ಗುರುಪ್ರಸಾದ್ ಅವರನ್ನು ಗಿರಿನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ‌. ಶ್ರೀನಿವಾಸ್ ಎಂಬುವರಿಗೆ 30 ಲಕ್ಷ ಚೆಕ್ ಬೌನ್ಸ್ ಸಂಬಂಧ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ಗೈರಾದ ಹಿನ್ನೆಲೆಯಲ್ಲಿ ಗುರುಪ್ರಸಾದ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿ ಬಂಧಿಸುವಂತೆ ಕೋರ್ಟ್ ಆದೇಶಿತ್ತು‌. ಈ ಸಂಬಂಧ ಗಿರಿನಗರ ಪೊಲೀಸರು ಗುರುಪ್ರಸಾದ್ ಅವರನ್ನು ವಶಕ್ಕೆ ಪಡೆದುಕೊಂಡು ಕೆಲವೇ ಹೊತ್ತಿನಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸದ್ದಿಲ್ಲದೆ 'ಎದ್ದೇಳು ಮಂಜುನಾಥ- 2' ಸಿನಿಮಾ ಕಂಪ್ಲೀಟ್ ಮಾಡಿದ 'ಮಠ' ಗುರುಪ್ರಸಾದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.