ETV Bharat / state

ಪೊನ್ನಿಯಿನ್ ಸೆಲ್ವನ್ 2: ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ ವಿಕ್ರಮ್ ಮತ್ತು ಚಿತ್ರತಂಡ.. - etv bharat kannada

ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಪ್ರಚಾರಕ್ಕಾಗಿ ನಟ ವಿಕ್ರಂ, ತ್ರಿಷಾ, ಜಯಂ ರವಿ ಮತ್ತು ತಂಡ ಸಿಲಿಕಾನ್​ ಸಿಟಿಗೆ ಆಗಮಿಸಿದ್ದಾರೆ.

actor-vikram-arrived-to-bengaluru-for-ponniyin-selvan-2-movie-promotion
ಪೊನ್ನಿಯಿನ್ ಸೆಲ್ವನ್ 2: ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ ವಿಕ್ರಮ್ ಮತ್ತು ಚಿತ್ರತಂಡ..
author img

By

Published : Apr 22, 2023, 9:18 PM IST

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ ವರ್ಷ ಸೂಪರ್ ಹಿಟ್ ಆದ ಚಿತ್ರಗಳಲ್ಲಿ ಪೊನ್ನಿಯಿನ್ ಸೆಲ್ವನ್​ ಚಿತ್ರ ಕೂಡ ಒಂದು. ಚಿಯಾ ವಿಕ್ರಮ್​, ಜಯಂ ರವಿ, ಕಾರ್ತಿ, ಐಶ್ವರ್ಯಾ ರೈ ಬಚ್ಚನ್, ತ್ರಿಷಾ, ಶೋಭಿತಾ, ಪ್ರಕಾಶ್ ರಾಜ್ ಅಭಿನಯದ ಮಣಿರತ್ನಂ ನಿರ್ದೇಶನದ ಈ ಚಿತ್ರ ದೇಶದ್ಯಾಂತ ಬಿಡುಡಗೆ ಆಗಿ 500 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಇದೀಗ ಈ ಚಿತ್ರದ ಮುಂದುವರೆದ ಭಾಗವಾಗಿ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ರೆಡಿಯಾಗಿ ಬಿಡುಗಡೆಗೆ ಸಜ್ಜಾಗಿದೆ.

ನಿರ್ದೇಶಕ ಮಣಿರತ್ನಂ ಪೊನ್ನಿಯಿನ್ ಸೆಲ್ವನ್​ 2 ಚಿತ್ರವನ್ನ ಸೈಲೆಂಟ್ ಆಗಿ ಚಿತ್ರೀಕರಣ ಮಾಡಿ ಮುಗಿಸಿ ಬಿಡುಗಡೆಗೆ ಸಜ್ಜಾಗಿದ್ದಾರೆ. ಈಗಾಗಲೇ ಟ್ರೈಲರ್ ಹಾಗೂ ಹಾಡುಗಳನ್ನ ಬಿಡುಗಡೆ ಮಾಡಿದ್ದು, ಸಿನಿ ಪ್ರೀಯರಲ್ಲಿ ಕುತೂಹಲ ಮೂಡಿಸಿದೆ. ಈ ಹಿನ್ನಲೆಯಲ್ಲಿ ನಟ ವಿಕ್ರಮ್​, ಜಯಂ ರವಿ, ಕಾರ್ತಿ, ತ್ರಿಷಾ, ಶೋಭಿತಾ ಈ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ದೆಹಲಿ, ಮುಂಬೈ, ಹೈದಾರಬಾದ್ ನಲ್ಲಿ ಭರ್ಜರಿ ಪ್ರಚಾರ ಮಾಡಿ ಈಗ ಬೆಂಗಳೂರಿಗೆ ಆಗಮಿಸಿದ್ದಾರೆ. ಪೊನ್ನಿಯಿನ್ ಸೆಲ್ವನ್ 2 ಚಿತ್ರತಂಡದ ನಾಯಕರಾದ ವಿಕ್ರಮ್​, ಜಯಂ ರವಿ, ಕಾರ್ತಿ, ತ್ರಿಷಾ, ಶೋಭಿತಾ ಸಿಲಿಕಾನ್ ಸಿಟಿಗೆ ಆಗಮಿಸಿದ್ದಾರೆ. ಈ ವಿಕೇಂಡ್ ಮೂಡ್ ನಲ್ಲಿರೋ ಬೆಂಗಳೂರಿನಲ್ಲಿ ಈ ಪೊನ್ನಿಯಿನ್ ಸೆಲ್ವನ್ 2 ಚಿತ್ರದ ಮಾಧ್ಯಗೋಷ್ಠಿ ನಡೆಸಲಿದೆ.

ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಇಲ್ಲಿಯವರೆಗಿನ ಅತ್ಯಂತ ದುಬಾರಿ ತಮಿಳು ಚಿತ್ರಗಳಲ್ಲಿ ಒಂದಾಗಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್‌ನಿಂದ ಹಣವನ್ನು ಹೂಡಲಾಗಿದೆ. ಮೊದಲ ಭಾಗ ಕೆಲಕ್ಷನ್​ ವಿಚಾರದಲ್ಲಿ ಸದ್ದು ಮಾಡಿದ್ದು, ಸಕ್ವೆಲ್​ ಮೇಲೂ ಭಾರಿ ನಿರೀಕ್ಷೆ ಇದೆ.​​ಎ.ಆರ್.ರೆಹಮಾನ್ ಮತ್ತೊಮ್ಮೆ ಪೊನ್ನಿಯಿನ್ ಸೆಲ್ವನ್ 2ಗಾಗಿ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ. ಚಿತ್ರದ ಎರಡು ಹಾಡುಗಳನ್ನು ಈಗಾಗಲೇ ಬಿಡುಗಡೆಯಾಗಿವೆ. ಮಣಿರತ್ನಂ ಮತ್ತು ಎಲಂಗೋ ಕುಮಾರವೇಲ್ ಚಿತ್ರಕಥೆಯನ್ನು ಬರೆದಿದ್ದಾರೆ ಮತ್ತು ಎ.ಶ್ರೀಕರ್ ಪ್ರಸಾದ್ ಸಂಕಲನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದೇ ಏಪ್ರಿಲ್​ 28ರಂದು ಪೊನ್ನಿಯಿನ್ ಸೆಲ್ವನ್ 2 ಚಿತ್ರ ವಿಶ್ವದ್ಯಾಂತ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಕಿಂಗ್​​ ಖಾನ್​​ 'ಜವಾನ್​' ಸಿನಿಮಾದಲ್ಲಿ ಅಲ್ಲು ಅರ್ಜುನ್​; ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.