ETV Bharat / sports

Lionel Messi: ಒರ್ಲ್ಯಾಂಡೊ ಸಿಟಿಯ ಸೀಸರ್ ಆಟಗಾರನೊಂದಿಗೆ ವಿವಾದ ಮಾಡಿಕೊಂಡ ಮೆಸ್ಸಿ..

author img

By

Published : Aug 5, 2023, 1:36 PM IST

ಆಗಸ್ಟ್ 3 ರಂದು ನಡೆದ ಇಂಟರ್ ಮಿಯಾಮಿ vs ಒರ್ಲ್ಯಾಂಡೊ ಸಿಟಿ ಲೀಗ್ ಕಪ್ 2023 ಪಂದ್ಯದ ವೇಳೆ ಒರ್ಲ್ಯಾಂಡೊ ಸಿಟಿಯ ಸೀಸರ್ ಆಟಗಾರ ಅರೌಜೊ ಜೊತೆ ಲಿಯೋನೆಲ್ ಮೆಸ್ಸಿ ಗಲಾಟೆ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ.

Lionel Messi
ಲಿಯೋನೆಲ್ ಮೆಸ್ಸಿ

ನವದೆಹಲಿ: ಲಿಯೋನೆಲ್ ಮೆಸ್ಸಿ ಕಾಲ್ಚೆಂಡಿನ ಮೈದಾನದಲ್ಲಿ ಮಿಂಚಿನ ಆಟಗಾರ. ಅವರ ಹೆಸರಿನಲ್ಲಿ ಅನೇಕ ಸಾಧನೆಗಳಿವೆ. ಅವರು ವೃತ್ತಿ ಜೀವನದಲ್ಲಿ ಆಟದ ಮೈದಾನದಲ್ಲಾಗಲಿ ಅಥವಾ ಮೈದಾನದ ಹೊರಗಾಗಲಿ ಎಂದಿಗೂ ತನ್ನ ಎದುರಾಳಿಗಳೊಂದಿಗೆ ಯಾವುದೇ ವಿವಾದವನ್ನು ಮಾಡಿಕೊಂಡವರಲ್ಲ. ಪಂದ್ಯದ ಸಮಯದಲ್ಲಿಯೂ ಅವರು ವಿವಾದಗಳಿಗಿಂತ ಆಟದ ಮೇಲೆ ಹೆಚ್ಚು ಕೇಂದ್ರೀಕರಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದಲೇ ಲಿಯೋನೆಲ್ ಮೆಸ್ಸಿಗೆ ಸಂಬಂಧಿಸಿದ ಯಾವುದೇ ವಿವಾದದ ಸುದ್ದಿಯಾಗುವುದಿಲ್ಲ.

ಆದರೆ, ಇತ್ತಿಚೆಗೆ ಹೊಸ ಕ್ಲಬ್​ ಸೇರಿದ ಅರ್ಜೆಂಟೀನಾ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ವಿವಾದವನ್ನು ಮಾಡಿಕೊಂಡಿದ್ದಾರೆ. ಅವರು ವಾದ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಲಿಯೋನೆಲ್ ಮೆಸ್ಸಿ ತನ್ನ ಹೊಸ ಕ್ಲಬ್ ಇಂಟರ್ ಮಿಯಾಮಿಯಲ್ಲಿ ತಮ್ಮ ಸ್ಟಾರ್​ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಈ ನಡುವೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಬುಧವಾರ ನಡೆದ ಲೀಗ್ಸ್​ ಕಪ್​ ರೌಂಡ್​ 32 ರಲ್ಲಿ ಒರ್ಲ್ಯಾಂಡೊ ಸಿಟಿ ವಿರುದ್ಧ ಇಂಟರ್ ಮಿಯಾಮಿ 3-1 ಗೋಲುಗಳಿಂದ ಜಯ ಸಾಧಿಸಿದೆ. ಈ ಪದ್ಯದಲ್ಲಿ ಮೆಸ್ಸಿ ಎರಡು ಗೋಲ್​ಗಳನ್ನು ಕಲೆ ಹಾಕಿದ್ದಾರೆ. ಈ ಪಂದ್ಯದಲ್ಲಿ ಕಠಿಣ ಎದುರಾಳಿಗಳನ್ನು ಮೆಸ್ಸಿ ಎದುರಿಸಿದರು. ಆದರೆ, ತಮ್ಮ ಕಾಲಿನ ಚಾಕಚಕ್ಯತೆಯಿಂದ ಎದುರಾಳಿ ಆಟಗಾರರನ್ನು ಸೋಲಿಸಿ ಎರಡು ಗೋಲ್​ ಪಡೆದು ಗೆಲುವಿಗೆ ಕಾರಣರಾದರು.

ಆದರೆ, ಪಂದ್ಯದ ನಡುವೆ ಹತಾಶರಾಗಿದ್ದ ಮೆಸ್ಸಿ ಒರ್ಲ್ಯಾಂಡೊ ಫುಟ್ಬಾಲ್ ಆಟಗಾರನೊಂದಿಗೆ ಜಗಳ ಮಾಡಿದ್ದಾರೆ ಎಂದು ಕೆಲ ಸಾಮಾಜಿಕ ಜಾಲತಾಣದ ದೃಶ್ಯಗಳು ಹರಿದಾಡುತ್ತಿವೆ. ಒರ್ಲ್ಯಾಂಡೊ ಸಿಟಿಯ ಸೀಸರ್ ಆಟಗಾರ ಅರೌಜೊ ಅವರೊಂದಿಗೆ ಜಗಳವಾಡಿದರು ಎಂದು ಹೇಳಲಾಗುತ್ತಿದೆ. ಟ್ವಿಟರ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಮೆಸ್ಸಿ ಅರೌಜೊ ಅವರೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು.

ಮೊದಲಾರ್ಧದ ನಂತರ ಆಟ ಡ್ರೆಸ್ಸಿಂಗ್​​ ರೂಮ್​ಗೆ ತೆರಳುತ್ತಿರುವಾಗ ವಾಗ್ವಾದ ನಡೆದಿದೆ ಎನ್ನಲಾಗಿದೆ. ಆದರೆ, ಇದು ಮೆಸ್ಸಿ ಸಾಮಾನ್ಯ ಮಾತು ಕಥೆಯೋ ಅಥವಾ ಗಂಭೀರವಾಗಿ ಗಲಾಟೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ವಿಡಿಯೋದಲ್ಲಿ ಕಾಣುವ ಹಾವಭಾವದಲ್ಲಿ ಜೋರಾಗಿ ಮಾತನಾಡಿದ್ದು ಕಂಡು ಬರುತ್ತಿರುವುದರಿಂದ ಮೆಸ್ಸಿ ಗಲಾಟೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಆಟಕ್ಕೆ ಸಂಬಂಧಿಸಿದ ಮೂಲಗಳು ಹೇಳುವ ಪ್ರಕಾರ, ಅರ್ಧ ಸಮಯದಲ್ಲಿ ಆಟ ನಡೆಯುತ್ತಿರುವಾಗ, ಮೈದಾನದಲ್ಲಿ ನಡೆದ ಘಟನೆಯೊಂದರ ಮೇಲೆ ಮೆಸ್ಸಿ ಅರೌಜೊ ಅವರೊಂದಿಗೆ ಬೇಸರಗೊಂಡಿದ್ದರು, ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು ಎನ್ನಲಾಗಿದೆ. ಆದರೆ, ಈ ವಿವಾದದ ಬಗ್ಗೆ ಅಧಿಕೃತವಾಗಿ ಆಟಗಾರರು ಏನನ್ನೂ ಹೇಳದಿದ್ದರೂ, ಮೆಸ್ಸಿ ಮತ್ತು ಒರ್ಲಾಂಡೋ ಸಿಟಿ ಆಟಗಾರ ಸೀಸರ್ ಅರೌಜೊ ನಡುವಿನ ವಿವಾದದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿದೆ.

ಇದನ್ನೂ ಓದಿ: Deodhar Trophy: ಮಯಾಂಕ್​ ತಂಡಕ್ಕೆ ದೇವಧರ್ ಟ್ರೋಫಿ: ದೇಸಿ ಟೂರ್ನಿಯಲ್ಲಿ ಮಿಂಚಿದ ಪ್ರತಿಭೆಗಳಿವರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.