ETV Bharat / state

ತಿಪಟೂರು ಷಡಕ್ಷರಿ ಮಠದ ಸ್ವಾಮೀಜಿ ಹನಿಟ್ರ್ಯಾಪ್​ಗೆ ಯತ್ನ: ಮೂವರ ಬಂಧನ - Honeytrap Attempt Case

ಸ್ವಾಮೀಜಿಯೊಬ್ಬರಿಗೆ ಕರೆ ಮಾಡಿ, ಹನಿಟ್ರ್ಯಾಪ್​ಗೆ ಸಿಲುಕಿಸಲು ಯತ್ನಿಸಿದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ‌.

honeytrap attempt
ಸಿಸಿಬಿ ಪೊಲೀಸ್​ ಠಾಣೆ (ETV Bharat)
author img

By ETV Bharat Karnataka Team

Published : Oct 3, 2024, 1:22 PM IST

ಬೆಂಗಳೂರು: ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಅವರನ್ನು ಹನಿಟ್ರ್ಯಾಪ್​ಗೆ ಸಿಲುಕಿಸಲು ಯತ್ನಿಸಿ, 6 ಕೋಟಿ ನೀಡುವಂತೆ ಒತ್ತಾಯಿಸಿದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌.

ವಿದ್ಯಾ ಬಿರಾದರ್ ಪಾಟೀಲ್, ಗಗನ್ ಹಾಗೂ ಸೂರ್ಯನಾರಾಯಣ್ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಮತ್ತೋರ್ವ ಮಹಿಳೆ ಭಾಗಿಯಾಗಿದ್ದು, ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಆಗಸ್ಟ್ 31ರಂದು ಸ್ಬಾಮೀಜಿಗೆ ಕರೆ ಮಾಡಿದ ಆರೋಪಿತೆ ವಿದ್ಯಾ, ತಾನು ರಾಜ್ಯ ಮಾಹಿತಿ‌ ಹಕ್ಕು ಆಯೋಗದ ಅಧ್ಯಕ್ಷೆ ಹಾಗೂ ಲೋಕಾಯುಕ್ತ ನ್ಯಾ‌.ಬಿ.ಎಸ್. ಪಾಟೀಲ್ ಅವರ ಸಹೋದರಿಯಾಗಿದ್ದು, ಸೂರ್ಯ ನಾರಾಯಣ್ ಹಾಗೂ ಪಲ್ಲವಿ ಎಂಬವರು ನಿಮಗೆ ಸಂಬಂಧಿಸಿ, ಮಹಿಳೆಯೊಂದಿಗಿನ ಆಶ್ಲೀಲ ವಿಡಿಯೋ ಕಳುಹಿಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಹೀಗಾಗಿ, ಕೂಡಲೇ ಭೇಟಿಯಾಗುವಂತೆ ಹೇಳಿದ್ದರು ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದರು.

ಬಳಿಕ ಸ್ವಾಮೀಜಿ ತಮ್ಮ ವಕೀಲರ ಮೂಲಕ ಕರೆ ಮಾಡಿಸಿದಾಗ ಗಾಂಧಿನಗರ ರಾಮಕೃಷ್ಣ ಹೋಟೆಲ್ ಬಳಿ ಬರುವಂತೆ ಆರೋಪಿಗಳು ಸೂಚಿಸಿದ್ದರು. ಇದರಂತೆ ಭೇಟಿಯಾದಾಗ ಸ್ವಾಮೀಜಿಯವರಿಗೆ ಸಂಬಂಧಿಸಿದ ಆಶ್ಲೀಲ ವಿಡಿಯೊಗಳಿವೆ. ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಮಾಡಬಾರದು ಎಂದರೆ 6 ಕೋಟಿ ರೂ. ಹಣ ನೀಡಬೇಕು. ಕೂಡಲೇ 50 ಲಕ್ಷ ರೂ. ಹಣ ನೀಡಿ ಒತ್ತಾಯಿಸಿದ್ದರು ಎಂದು ರುದ್ರಮುನಿ ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಬಗ್ಗೆ ರುದ್ರಮುನಿ ಸ್ವಾಮೀಜಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಹಾವೇರಿ: ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿ - wife has killed her husband

ETV Bharat Logo

Copyright © 2024 Ushodaya Enterprises Pvt. Ltd., All Rights Reserved.