ನವದೆಹಲಿ: ಭಾರತ ತಂಡದ ಮಾಜಿ ಆಲ್ರೌಂಡರ್ ಸುರೇಶ್ ರೈನಾ ಅವರ ತಂದೆ ತ್ರಿಲೋಕಚಂದ್ ರೈನಾ ಭಾನುವಾರ ನಿಧನರಾಗಿದ್ದಾರೆ. ಅವರು ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆಂದು ತಿಳಿಬಂದಿದೆ.
ಕ್ಯಾನ್ಸ್ರ್ನಿಂದ ಬಳಲುತ್ತಿದ್ದ ಸುರೇಶ್ ರೈನಾ ತಂದೆ ಫೆಬ್ರವರಿ 6ರಂದು ತಮ್ಮ ಘಾಜಿಯಾಬಾದ್ನ ಮನೆಯಲ್ಲಿ ನಿಧನರಾಗಿದ್ದಾರೆ. ತ್ರಿಲೋಕಚಂದ್ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಬಾಂಬ್ ತಯಾರಿಸುವ ಪಾಂಡಿತ್ಯ ಹೊಂದಿದ್ದರು ಎನ್ನಲಾಗಿದೆ.
-
Very sad to hear Suresh Raina’s father @ImRaina RIP uncle ji 🙏🙏
— Harbhajan Turbanator (@harbhajan_singh) February 6, 2022 " class="align-text-top noRightClick twitterSection" data="
">Very sad to hear Suresh Raina’s father @ImRaina RIP uncle ji 🙏🙏
— Harbhajan Turbanator (@harbhajan_singh) February 6, 2022Very sad to hear Suresh Raina’s father @ImRaina RIP uncle ji 🙏🙏
— Harbhajan Turbanator (@harbhajan_singh) February 6, 2022
ರೈನಾ ತಂದೆಯ ಪೂರ್ವಜರು ಮೂಲತಃ ಜಮ್ಮು ಕಾಶ್ಮೀರದ ಮೂಲದವರು. 1990ರ ಕಾಶ್ಮೀರಿ ಪಂಡಿತರ ಹತ್ಯೆಯ ನಂತರ ತಮ್ಮ ಗ್ರಾಮ ರೈನಾವಾರಿಯನ್ನು ತ್ಯಜಿಸಿ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ಮುರದಬಗರ್ ಪಟ್ಟಣಕ್ಕೆ ವಲಸೆ ಬಂದಿದ್ದರು ಎನ್ನಲಾಗಿದೆ.
ಸುರೇಶ್ ರೈನಾ ತಂದೆಯ ನಿಧನಕ್ಕೆ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Ind vs WI ODI: ಕೈಗೆ ಕಪ್ಪು ಬ್ಯಾಂಡ್ ಕಟ್ಟಿಕೊಂಡು ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಲಿರುವ ರೋಹಿತ್ ಪಡೆ