ದುಬೈ: ಐಸಿಸಿಯು ಪುರುಷರ ನೂತನ ಏಕದಿನ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದರೆ ಉಪನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನವನ್ನು ಪಡೆದಿದ್ದಾರೆ.
ಇನ್ನು ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಜಯ ಸಾಧಿಸಿದ ಪರಿಣಾಮ ವೇಗದ ಬೌಲರ್ ದುಷ್ಮಂತ್ ಚಮೀರ್ ಹಾಗೂ ನಾಯಕ ಕುಸಾಲ್ ಪೆರೆರಾ ಶ್ರೇಯಾಂಕದ ಪಟ್ಟಿಯಲ್ಲಿ ಕೊಂಚ ಮುಂದೆ ಜಿಗಿದಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಸರಣಿಗೂ ಮುನ್ನ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ 72ನೇ ಸ್ಥಾನದಲ್ಲಿದ್ದ ದುಷ್ಮಂತ್ ಚಮೀರ್ ಈಗ 33ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಇದೇ ಸರಣಿಯಲ್ಲಿ ಸೆಂಚುರಿ ಬಾರಿಸಿದ್ದ ಕುಶಾಲ್ ಪೆರೆರಾ ಬ್ಯಾಟ್ಸ್‌ಮನ್ ಶ್ರೇಯಾಂಕದ ಪಟ್ಟಿಯಲ್ಲಿ 42ನೇ ಸ್ಥಾನಕ್ಕೆ ಹಾರಿದ್ದಾರೆ.
ಭಾರತ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಏಕದಿನ ಬ್ಯಾಟ್ಸ್‌ಮನ್ ಶ್ರೇಯಾಂಕದಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದಿದ್ದಾರೆ. ವೇಗಿ ಜಸ್ಪ್ರಿತ್ ಬುಮ್ರಾ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ತಮ್ಮ ಐದನೇ ಸ್ಥಾನವನ್ನು ಹಾಗೇ ಉಳಿಸಿಕೊಂಡಿದ್ದಾರೆ.

ಇನ್ನು ಬ್ಯಾಟಿಂಗ್ನಲ್ಲಿ ಶ್ರೀಲಂಕಾದ ಮತ್ತೊಬ್ಬ ಆಟಗಾರ ಧನಂಜಯ ಡಿ-ಸಿಲ್ವಾ ಹಾಗೂ ಬೌಲರ್‌ಗಳಲ್ಲಿ ಲೆಗ್ ಸ್ಪಿನ್ನರ್ ವಾಸಿಂದು ಹಸರಂಗ ಸಹ ಶ್ರೇಯಾಂಕ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಏರಿಸಿಕೊಂಡಿದ್ದಾರೆ.