ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಪಿಸ್ತೂಲ್‌ನಿಂದ ಏರ್ಫೈರ್ ಮಾಡಿದ್ದ ರೌಡಿಶೀಟರ್ ಸಹಿತ 6 ಜನ ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಸಿರಾಜುದ್ದೀನ್ ಅಲಿಯಾಸ್ ಬುಲ್ಡು, ಇಲಿಯಾಸ್ ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ.
''ರೌಡಿಶೀಟರ್ ಸಿರಾಜುದ್ದೀನ್ ಹಾಗೂ ಫ್ಲೈವುಡ್ ಅಂಗಡಿ ಮಾಲೀಕ ಇಲಿಯಾಸ್ ನಡುವೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಚಿಕ್ಕ ಗಲಾಟೆಯಾಗಿತ್ತು. ಸೆ.20ರಂದು ರಾತ್ರಿ ಪಿಸ್ತೂಲ್ ಹಿಡಿದು ಬಂದಿದ್ದ ಸಿರಾಜುದ್ದೀನ್, ಇಲಿಯಾಸ್‌ನ ಎದೆಗೆ ಪಿಸ್ತೂಲ್ ಇಟ್ಟು ಬೆದರಿಸಿದ್ದ. ಅಷ್ಟರಲ್ಲಿ ಅಕ್ಕಪಕ್ಕದ ಅಂಗಡಿಯಲ್ಲಿದ್ದವರು ಜಮಾಯಿಸಿದ್ದರು. ಈ ವೇಳೆ ಯಾರು ಅಡ್ಡ ಬರಬಾರದೆಂದು ಬೆದರಿಸಿದ್ದ ಸಿರಾಜುದ್ದೀನ್ ಒಂದು ಸುತ್ತು ಏರ್ಫೈರ್ ಮಾಡಿದ್ದ'' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
''ಬಳಿಕ ಸ್ಥಳದಿಂದ ಬೈಕ್‌ನಲ್ಲಿ ಎಸ್ಕೇಪ್ ಆಗಲು ಮುಂದಾದಾಗ ಇಲಿಯಾಸ್ ಕಡೆಯವರು ಬೈಕ್ ಹಿಂಬದಿ ಕುಳಿತಿದ್ದ ಮೊಹಮ್ಮದ್ ಖುರ್ರಂ ಪಾಷಾ ಎಂಬಾತನನ್ನ ಹಿಡಿದುಕೊಂಡು ಥಳಿಸಿದ್ದರು. ಬಳಿಕ ಘಟನೆ ಸಂಬಂಧ ಸ್ಥಳೀಯರು ಸುದ್ದಗುಂಟೆಪಾಳ್ಯ ಠಾಣೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿರಾಜುದ್ದೀನ್ ಹಾಗೂ ಇಲಿಯಾಸ್ ಇಬ್ಬರ ವಿರುದ್ದವೂ ದೂರು ದಾಖಲಿಸಿಕೊಂಡು 6 ಜನರನ್ನ ಬಂಧಿಸಲಾಗಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಪಿಎಸ್ಐ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನ, ಕೊಲೆ ಆರೋಪಿ ಕಾಲಿಗೆ ಗುಂಡೇಟು - Police firing on accused