ಬಿಗ್ ಬಾಸ್ನಲ್ಲಿ ಚೈತ್ರಾ ಕುಂದಾಪುರ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಟಾಸ್ಕ್ಗಳಲ್ಲಿ ಅವರ ಉಸ್ತುವಾರಿ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಳಪೆ ಪಟ್ಟ ಕೊಡುವಾಗಲೂ ಈ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೀಗ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲೂ ಚೈತ್ರಾ ತಮ್ಮ ಅಭಿಪ್ರಾಯ ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ.
''ಮಾತುಗಳ ಬಾಣ!'' ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಪ್ರೋಮೋ ಅನಾವರಣಗೊಂಡಿದೆ. ಚೈತ್ರಾ ಕುಂದಾಪುರ ಕಣ್ಣೀರಲ್ಲಿ ಮುಳುಗಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಸಜ್ಜಾಗಿದ್ದಾರೆ. ಕೆಲ ವಿಷಯಗಳಿಂದ ವಾರಾಂತ್ಯದ ಸಂಚಿಕೆಯಲ್ಲಿ ಚೈತ್ರಾರಿಗೆ ಕಿಚ್ಚನ ಕ್ಲಾಸ್ ಸಿಕ್ಕಿರೋದು ನಿಮಗೆ ತಿಳಿದಿರುವ ವಿಚಾರವೇ. ಹಿಂದೊಮ್ಮೆ ನನ್ನ ಕೈಲಿ ಆಗುತ್ತಿಲ್ಲ, ಕಳುಹಿಸಿಕೊಡಿ ಎನ್ನುವಷ್ಟರ ಹಂತಕ್ಕೆ ಚೈತ್ರಾ ತಲುಪಿದ್ದರು. ಇದೀಗ ಮತ್ತೆ ಕಿಚ್ಚನ ಕ್ಲಾಸ್ಗೆ ಒಳಗಾಗಿದ್ದಾರೆ.
ಯಾರಿಗೆ ನಾಮಿನೇಷನ್ಗೆ ಅವಕಾಶ ಸಿಗಲಿಲ್ವೋ ಅವರಿಗೆ ನಾನೀಗ ಒಂದು ಅವಕಾಶ ಕೊಡುತ್ತೇನೆ ಎಂದು ಸುದೀಪ್ ತಿಳಿಸಿದ್ದಾರೆ. ಹೆಚ್ಚಿನವರು ಚೈತ್ರಾ ಕುಂದಾಪುರ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಸರಿಯಾಗಿ, ನೀಯತ್ತಾಗಿ ಉಸ್ತುವಾರಿ ಮಾಡಬೇಕಾಗಿತ್ತು ಎಂದು ಹನುಮಂತು ತಿಳಿಸಿದ್ದಾರೆ. ನಂತರ ಚೈತ್ರಾ ಪ್ರತಿಕ್ರಿಯಿಸಿ, ಮೂರು ಬಾರಿ ಕಳಪೆ ಕೊಡ್ತಾರೆ. ಮೂರೂ ಬಾರಿಯೂ ಉಸ್ತುವಾರಿಯದ್ದೇ ಕಾರಣ ಕೊಡ್ತಾರೆ. ಒಳಗಡೆ ಎಷ್ಟು ಕುಗ್ಗಿಸುತ್ತೇ ಅನ್ನೋದು ನಮಗೆ ಮಾತ್ರ ಗೊತ್ತು ಎಂದು ಚೈತ್ರಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ತರುಣ್ ಸೋನಾಲ್ To ಕೃತಿ ಕರಬಂದ, ನಾಗಚೈತನ್ಯ: 2024ರಲ್ಲಿ ಹಸೆಮಣೆಯೇರಿದ ಸೆಲೆಬ್ರಿಟಿ ಜೋಡಿಗಳು
ಸುದೀಪ್ ಪ್ರತಿಕ್ರಿಯಿಸಿ, ಯಾರು ಕುಗ್ಸಿದ್ರು ಅನ್ನೋದಿಕ್ಕೆ ಒಂದ್ ಹೆಸರು ತಗೊಳಿ ಎಂದು ತಿಳಿಸಿದ್ದಾರೆ. ಕಣ್ಣೀರಿಡುತ್ತಲೇ ಮಾತನಾಡಿದ ಚೈತ್ರಾ, ಒಂದಿಷ್ಟು ಜನ ಒಪೀನಿಯನ್ ಕ್ರಿಯೇಟ್ ಮಾಡ್ತಿದ್ದಾರೆ. ಅದು ನನ್ನನ್ನು ಕುಗ್ಗಿಸ್ತಿರೋದು ಎಂದು ಚೈತ್ರಾ ಬಹಳ ಭಾವುಕರಾಗಿಯೇ ಉತ್ತರಿಸಿದ್ದಾರೆ. ನಂತರ ಸುದೀಪ್ ಮಾತನಾಡಿ, ಕುಗ್ಸಿದ್ರು, ಕುಗ್ಸಿದ್ರು ಅಂತಾ ಹೇಳ್ತಿರಲ್ವಾ, ನೀವು ತಗೊಳೋ ಹೆಸ್ರು ಅವ್ರ್ನ ಕುಗ್ಗಿಸೋದಿಲ್ವಾ? ಎಂದು ಪ್ರಶ್ನಿಸಿದ್ದಾರೆ. ಬಾಣ ಕೊಡೋಕ್ ರೆಡಿ ಇದ್ದೀರಾ, ಬಾಣ ತಗೊಳೋಕೆ ರೆಡಿ ಇಲ್ಲ ಅಂದ್ಮೇಲೆ ಈ ಆಟಕ್ಕೆ ಫಿಟ್ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲಿಗೆ ಇಂದಿನ ಸಂಚಿಕೆಯಲ್ಲಿ ಚೈತ್ರಾ ಅವರಿಗೆ ಕಿಚ್ಚನ ಕ್ಲಾಸ್ ಸಿಗೋದು ಪಕ್ಕಾ ಆಗಿದೆ.
ಇದನ್ನೂ ಓದಿ: ರಿಷಬ್ ಶೆಟ್ರ ಬಹುಸಮಯದ ಕನಸು ನನಸು: ಕೆರಾಡಿ ಗ್ರಾಮಸ್ಥರು ಸಾಥ್ - ಡಿವೈನ್ ಸ್ಟಾರ್ ಮನದಾಳ ಇಲ್ಲಿದೆ
ಈ ವಾರದ ಟಾಸ್ಕ್ಗಳಲ್ಲಿ ಚೈತ್ರಾ ಕುಂದಾಪುರ ಉಸ್ತುವಾರಿ ನೋಡಿಕೊಂಡಿದ್ದರು. ಯಾರೂ ಮಾತನಾಡುವಂತಿಲ್ಲ ಎಂದು ಹೇಳಿ ಹೆಚ್ಚಿನ ಫೌಲ್ಗಳನ್ನು ನೀಡಿದ್ದರು. ಈ ವಿಷಯವಾಗೇ ಬಹಳಷ್ಟು ಚರ್ಚೆ ನಡೆದು ಅಸಮಧಾನ ವ್ಯಕ್ತವಾಗಿತ್ತು. ಚೈತ್ರಾ ಅವರ ಕಿರುಚಾಟ ಕೂಡಾ ಜೋರಾಗೇ ಇತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.