ETV Bharat / sports

'ನೀವು ಸ್ಫೂರ್ತಿ..' ಪಂದ್ಯ ಸೋತರೂ ಕೊಹ್ಲಿಗೆ ಟೀಂ ಜರ್ಸಿ ನೀಡಿ ಗಮನ ಸೆಳೆದ ಹಾಂಗ್‌ ಕಾಂಗ್‌

ಕ್ರಿಕೆಟ್​ ಶಿಶು ಹಾಂಗ್​ ಕಾಂಗ್​​​ ಏಷ್ಯಾ ಕಪ್​​​ನಲ್ಲಿ ನಿನ್ನೆ ಟೀಂ ಇಂಡಿಯಾ ವಿರುದ್ಧ ಸೋತಿದೆ. ಆದರೆ, ವಿರಾಟ್​​ ಕೊಹ್ಲಿ ಅವರಿಗೆ ವಿಶೇಷ ಗಿಫ್ಟ್ ನೀಡುವ ಮೂಲಕ ಎಲ್ಲರ ಮನ ಗೆದ್ದಿದೆ.

author img

By

Published : Sep 1, 2022, 9:53 AM IST

Hong Kong cricket team gifted Virat Kohli

ದುಬೈ(ಯುಎಇ): ಏಷ್ಯಾ ಕಪ್​ ಟೂರ್ನಮೆಂಟ್​​ನಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯದಲ್ಲಿ ಹಾಂಗ್​ಕಾಂಗ್​​ ವಿರುದ್ಧ 40 ರನ್​​ಗಳ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಎದುರಾಳಿ ತಂಡದ ವಿರುದ್ಧ ವಿರಾಟ್​​ ಕೊಹ್ಲಿ ಅಜೇಯ 59 ರನ್​​​​ ಗಳಿಕೆ ಮಾಡಿದ್ದು, ತಮ್ಮ ಬ್ಯಾಟಿಂಗ್​​ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿದಿದ್ದ ಹಾಂಗ್​ಕಾಂಗ್​​

ಪಂದ್ಯ ಮುಕ್ತಾಯದ ಬಳಿಕ ಹಾಂಗ್​ ಕಾಂಗ್​ ಕ್ರಿಕೆಟ್ ತಂಡ ವಿರಾಟ್​​ ಕೊಹ್ಲಿಗೆ ವಿಶೇಷ ಗಿಫ್ಟ್​ ನೀಡಿದೆ. ತಂಡದ ಜರ್ಸಿ ಮೇಲೆ ಎಲ್ಲ ಆಟಗಾರರು ಸಹಿ ಮಾಡಿದ್ದು, ಅದನ್ನು ಉಡುಗೊರೆಯಾಗಿ ನೀಡಿದ್ದಾರೆ. ರನ್​ ಮಷಿನ್​ ವಿರಾಟ್​ ಈ ಚಿತ್ರವನ್ನು ತಮ್ಮ ಇನ್​​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು, ಧನ್ಯವಾದ ಹೇಳಿದ್ದಾರೆ.

"ವಿರಾಟ್, ಇಂದಿನ ಪೀಳಿಗೆಗೆ ಸ್ಫೂರ್ತಿ ನೀಡಿದ್ದಕ್ಕೆ ಧನ್ಯವಾದಗಳು. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಮುಂದೆ ಅನೇಕ ಅಚ್ಚರಿಯ ದಿನಗಳು ನಿಮಗಾಗಿ ಕಾದಿವೆ. ಪ್ರೀತಿಯಿಂದ ಹಾಂಗ್ ಕಾಂಗ್ ತಂಡ.. ಎಂದು ಜರ್ಸಿ ಮೇಲೆ ಬರೆಯಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್​, ಧನ್ಯವಾದ ಹಾಂಗ್​ಕಾಂಗ್​​ ಕ್ರಿಕೆಟ್​, ಸೋ ಸ್ವೀಟ್ ಎಂದು ಹೇಳಿದ್ದಾರೆ.

ಇದನ್ನೂ ಓದಿ: 6 ತಿಂಗಳ ಬಳಿಕ ಅರ್ಧಶತಕ ಸಿಡಿಸಿದ ವಿರಾಟ್​​... ಟಿ20 ಕ್ರಿಕೆಟ್​​ನಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್​

ದುಬೈನಲ್ಲಿ ಸತತ 14 ಟಿ20 ಗೆದ್ದ ಮೊದಲ ತಂಡ: ಹಾಂಗ್​ ಕಾಂಗ್​ ವಿರುದ್ಧ 40 ರನ್​​​ಗಳ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ವಿಶೇಷ ರೆಕಾರ್ಡ್ ಬರೆದಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಕೊನೆಯ 14 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಮೊದಲ ತಂಡವಾಗಿದೆ. 2019ರಲ್ಲಿ ನಮೀಬಿಯಾ ವಿರುದ್ಧ ದುಬೈನಲ್ಲಿ ಅಭಿಯಾನ ಆರಂಭಿಸಿದ್ದ ಇಂಡಿಯಾ ಇದೀಗ ಏಷ್ಯಾ ಕಪ್​​ನ ಹಾಂಗ್ ​ಕಾಂಗ್​ ವಿರುದ್ಧದ ಪಂದ್ಯದಲ್ಲೂ ಗೆದ್ದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.