ಲಂಡನ್: 2019ರ ಐಸಿಸಿ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯಗಳು ನಡೆಯುತ್ತಿದ್ದು, ಕೆಲ ದಿನಗಳಲ್ಲೇ ಸೆಮಿಫೈನಲ್ ಪ್ರಾರಂಭವಾಗಲಿದೆ.
ಈ ವಾರ ನಡೆದ ಪಂದ್ಯಗಳ ಆಧಾರದ ಮೇಲೆ ಬೆಸ್ಟ್ ವಿಶ್ವಕಪ್ ತಂಡವನ್ನ ಸಿದ್ಧಪಡಿಸಲಾಗಿದ್ದು, ಈ ತಂಡದಲ್ಲಿ ಭಾರತ ಮೂವರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ.
ಬ್ಯಾಟ್ಸ್ಮನ್ಗಳು:
ರೋಹಿತ್ ಶರ್ಮಾ (ಭಾರತ): ಈ ವಾರ ನಡೆದ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 2 ಶತಕ ಸಿಡಿಸಿರುವ ರೋಹಿತ್, ಟೂರ್ನಿಯಲ್ಲಿ ಒಟ್ಟು 4 ಶತಕ ಗಳಿಸಿದ್ದಾರೆ. ಒಟ್ಟಾರೆ 544 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಕಲೆಹಾಕಿರುವ ದಾಖಲೆ ಹೊಂದಿದ್ದಾರೆ.
ಜಾಸನ್ ರಾಯ್(ಇಂಗ್ಲೆಂಡ್): ಮಂಡಿರಜ್ಜು(ಹ್ಯಾಮ್ಸ್ಟ್ರಿಂಗ್) ನೋವಿನಿಂದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ರಾಯ್ ಕಂಬ್ಯಾಕ್ ಮಾಡಿದ್ದಾರೆ. ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಕ್ರಮವಾಗಿ 60 ಮತ್ತು 66 ರನ್ಗಳಿಸುವ ಮೂಲಕ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.
ಅವಿಶ್ಕ ಫರ್ನಾಂಡೋ(ಶ್ರೀಲಂಕಾ): ಲಂಕಾ ತಂಡದ 21 ವರ್ಷದ ಆಟಗಾರ ಫೆರ್ನಾಂಡೋ, ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸುವ ಮೂಲಕ ತಂಡದ ಗೆಲುವಿಗೆ ಆಸರೆಯಾಗಿದ್ದರು.
ನಿಕೋಲಸ್ ಪೂರನ್(ವೆಸ್ಟ್ ಇಂಡೀಸ್): 23 ವರ್ಷದ ಪೂರನ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ರು.
ವಿಕೆಟ್ ಕೀಪರ್
ಜಾನಿ ಬೈರ್‌ಸ್ಟೋವ್( ಇಂಗ್ಲೆಂಡ್) : ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಬೈರ್‌ಸ್ಟೋವ್, ಆಂಗ್ಲರ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಆಲ್ ರೌಂಡರ್
ಇಮದ್ ವಾಸಿಮ್(ಪಾಕಿಸ್ತಾನ): ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ನೀಡಿದ್ದ ಇಮದ್ ವಾಸಿಮ್ 2 ವಿಕೆಟ್ ಪಡೆಯುವುದರ ಜೊತೆಗೆ 49ರನ್ಗಳಿಸಿ ಪಾಕ್ ತಂಡಕ್ಕೆ ಜಯ ದಕ್ಕಿಸಿಕೊಟ್ಟಿದ್ದರು.
ಬೌಲರ್ಗಳು
ಮಿಚೆಲ್ ಸ್ಟಾರ್ಕ್(ಆಸ್ಟ್ರೇಲಿಯಾ): 2 ಬಾರಿ 5 ವಿಕೆಟ್ ಕಬಳಿಸಿ ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಸ್ಟಾರ್ಕ್, ಒಟ್ಟು 24 ವಿಕೆಟ್ ಪಡೆಯುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ.
ಟ್ರೆಂಟ್ ಬೌಲ್ಟ್(ನ್ಯೂಜಿಲ್ಯಾಂಡ್): ಈ ವಾರ ನಡೆದ ಎರಡು ಪಂದ್ಯಗಳಿಂದ 6 ವಿಕೆಟ್ ಪಡೆದಿರುವ ಬೋಲ್ಟ್ ಕಿವೀಸ್ ಪಡೆಯ ಬೌಲಿಂಗ್ ಶಕ್ತಿ ಎನಿಸಿಕೊಂಡಿದ್ದಾರೆ.
ಮುಸ್ತಫಿಜುರ್ ರಹಮಾನ್(ಬಾಂಗ್ಲಾದೇಶ): ಭಾರತದ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮುಸ್ತಫಿಜುರ್ ರಹಮಾನ್ , ಪ್ರಮುಖ 5 ವಿಕೆಟ್ ಪಡೆಯುವ ಮೂಲಕ ಭಾತರದ ರನ್ ವೇಗಕ್ಕೆ ಕಡಿವಾಣ ಹಾಕಿದ್ದರು.