ETV Bharat / sports

ರಾಜಸ್ಥಾನಕ್ಕೆ ಸಾಮ್ಸನ್ ನಾಯಕ.. ಸ್ಮಿತ್ ಸೇರಿ 8 ಆಟಗಾರರನ್ನು ಕೈಬಿಟ್ಟ ರಾಯಲ್ಸ್​.. - steve smith latest news

ಸ್ಟೀವ್​ ಸ್ಮಿತ್​ 2008ರಿಂದ 2 ವರ್ಷ ನಿಷೇಧಗೊಂಡ ವರ್ಷಗಳನ್ನು ಹೊರತುಪಡಿಸಿ ಎಲ್ಲಾ ಆವೃತ್ತಿಗಳಲ್ಲೂ ರಾಯಲ್ಸ್​ ತಂಡದ ಪರ ಆಡಿದ್ದರು. ಅವರು 2021ರ ಆವೃತ್ತಿಯಲ್ಲಿ 14 ಪಂದ್ಯಗಳಿಂದ 311 ರನ್​​ಗಳಿಸಿದ್ದರು..

ರಾಜಸ್ಥಾನಕ್ಕೆ ಸಾಮ್ಸನ್ ನಾಯಕ
ರಾಜಸ್ಥಾನಕ್ಕೆ ಸಾಮ್ಸನ್ ನಾಯಕ
author img

By

Published : Jan 20, 2021, 7:32 PM IST

ಮುಂಬೈ : 2021ರ ಐಪಿಎಲ್ ಆವೃತ್ತಿಗೆ ಯುವ ಆಟಗಾರ ಸಂಜು ಸಾಮ್ಸನ್​ ಅವರನ್ನು ನಾಯಕನಾಗಿ ನೇಮಕ ಮಾಡಿದೆ. ಕಳೆದ ಐಪಿಎಲ್​ನಲ್ಲಿ ನಾಯಕನಾಗಿದ್ದ ಸ್ಟೀವ್ ಸ್ಮಿತ್​ರನ್ನು ಹರಾಜಿಗೂ ಮುನ್ನ ಬಿಡುಗಡೆಗೊಳಿಸಿದೆ.

ಆರಂಭಿಕ ಆವೃತ್ತಿಯ ಚಾಂಪಿಯನ್​ ರಾಜಸ್ಥಾನ್​ ರಾಯಲ್ಸ್​ ತಂಡ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಸಂಜು ಸಾಮ್ಸನ್​ ಅವರನ್ನು 2021ರ ಆವೃತ್ತಿಗೆ ನಾಯಕನನ್ನಾಗಿ ನೇಮಿಸಿದೆ.

ಬುಧವಾರ ರೀಟೈನ್​ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುವ ಮುನ್ನ ಈ ವಿಚಾರವನ್ನು ರಾಯಲ್ಸ್​ ಟ್ವೀಟ್ ಮೂಲಕ ಖಚಿತ ಪಡಿಸಿದೆ. ಇದರ ಜೊತೆಗೆ ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಾಕ್ಕರರನ್ನು ರಾಯಲ್ಸ್​ ಡೈರೆಕ್ಟರ್ ಆಫ್​ ಕ್ರಿಕೆಟ್​ ಆಗಿ ನೇಮಕ ಮಾಡಿರುವುದಾಗಿ ಆರ್​ಆರ್​ ಸಹ ಮಾಲೀಕ ಮನೋಜ್ ಬಾದಲೆ ತಿಳಿಸಿದ್ದಾರೆ.

ಸ್ಟೀವ್​ ಸ್ಮಿತ್​ 2008ರಿಂದ 2 ವರ್ಷ ನಿಷೇಧಗೊಂಡ ವರ್ಷಗಳನ್ನು ಹೊರತುಪಡಿಸಿ ಎಲ್ಲಾ ಆವೃತ್ತಿಗಳಲ್ಲೂ ರಾಯಲ್ಸ್​ ತಂಡದ ಪರ ಆಡಿದ್ದರು. ಅವರು 2021ರ ಆವೃತ್ತಿಯಲ್ಲಿ 14 ಪಂದ್ಯಗಳಿಂದ 311 ರನ್​​ಗಳಿಸಿದ್ದರು.

2021 ಐಪಿಎಲ್​ಗೆ ರಾಜಸ್ಥಾನ್​ ರಾಯಲ್ಸ್​ ಒಟ್ಟು 17 ಆಟಗಾರರನ್ನು ಉಳಿಸಿಕೊಂಡಿದ್ದು, ಸ್ಮಿತ್ ಸೇರಿದಂತೆ 8 ಆಟಗಾರರನ್ನು ಬಿಡುಗಡೆ ಮಾಡಿದೆ. ರಾಯಲ್ಸ್​ ಟಾಮ್ ಕರ್ರನ್​, ಆಕಾಶ್ ಸಿಂಗ್, ಒಶಾನ್ ಥಾಮಸ್.​

ರಾಜಸ್ಥಾನ್ ರಾಯಲ್ಸ್​ ಉಳಿಸಿಕೊಂಡ ಆಟಗಾರರು

ಸಂಜು ಸಾಮ್ಸನ್​, ಬೆನ್​ಸ್ಟೋಕ್ಸ್​, ಜೋಶ್ ಬಟ್ಲರ್​, ಜೋಫ್ರಾ ಆರ್ಚರ್​, ರಾಹುಲ್ ತೆವಾಟಿಯಾ, ಜಯದೇವ್ ಉನ್ನಾದ್ಕಟ್, ಯಶಸ್ವಿ ಜೈಸ್ವಾಲ್, ರಾಬಿನ್ ಉತ್ತಪ್ಪ, ಮಯಾಂಕ್ ಮಾರ್ಕಂಡೆ, ಕಾರ್ತಿಕ್ ತ್ಯಾಗಿ, ಆ್ಯಂಡ್ರ್ಯೂ ಟೈ, ಅನುಜ್ ರಾವತ್, ಡೇವಿಡ್ ಮಿಲ್ಲರ್​, ರಿಯಾನ್ ಪರಾಗ್, ಮಹಿಪಾಲ್ ಲ್ಯಾಮ್ರೋರ್​, ಶ್ರೇಯಸ್ ಗೋಪಾಲ್, ಮನನ್​ ವೊಹ್ರಾ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.