ಮುಂಬೈ: ತಮ್ಮ ಬಗ್ಗೆ ಪಾಕಿಸ್ತಾನದ ಲೆಜೆಂಡ್ ಬ್ಯಾಟ್ಸ್ಮನ್ ಜಾವೇದ್ ಮಿಯಾಂದಾದ್ ಮಾಡಿದ್ದ ಕಾಮೆಂಟ್ ತಮ್ಮ ತಂದೆಯ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಬಹಿರಂಗ ಪಡಿಸಿದ್ದಾರೆ.
2003 - 04ರಲ್ಲಿಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದ ವೇಳೆ ಪಾಕ್ನ ಕೋಚ್ ಆಗಿದ್ದ ಜಾವೇದ್ ಮಿಯಾಂದಾದ್ ಇರ್ಫಾನ್ ಪಠಾಣ್ರಂತಹ ಬೌಲರ್ಗಳು ಪಾಕಿಸ್ತಾನದ ಬೀದಿ ಬೀದಿಗಳನ್ನು ಕಾಣಸಿಗುತ್ತಾರೆ ಎಂದು ಹೇಳಿದ್ದರು. ಆದರೆ, ಈ ಕಾಮೆಂಟ್ ಇರ್ಫಾನ್ರ ತಂದೆಯನ್ನು ಕೆರಳಿಸಿತ್ತು. ಅವರು ಸರಣಿ ಮುಗಿದ ಬಳಿಕ ಮಿಯಾಂದಾದ್ರನ್ನು ಭೇಟಿ ಮಾಡಲು ಬಯಸಿದ್ದರು.
"ಪಠಾಣ್ ಅವರಂತಹ ಬೌಲರ್ಗಳು ಪಾಕಿಸ್ತಾನದ ಪ್ರತಿಯೊಂದು ಬೀದಿಗಳಲ್ಲಿ ಸಿಗುತ್ತಾರೆ ಎಂದು ಹೇಳಿದ್ದನ್ನು ನನ್ನ ನೆನಪಿನಲ್ಲಿದೆ. ಈ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ನನ್ನ ತಂದೆಗೆ ಈ ಹೇಳಿಕೆ ಇಷ್ಟವಾಗಿರಲಿಲ್ಲ. ಅವರು ಸರಣಿಯ ಕೊನೆಯ ಪಂದ್ಯದ ವೇಳೆ ಪಾಕಿಸ್ತಾನಕ್ಕೆ ಬಂದಿದ್ದರು. ಅವರು ನನ್ನ ಹತ್ತಿರ ಬಂದು, ಪಾಕಿಸ್ತಾನ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಮಿಯಾಂದಾದ್ ಭೇಟಿ ಮಾಡುವುದಾಗಿ ಹೇಳಿದರು. ಅದಕ್ಕೆ ನಾನು ‘ನೀವು ಅಲ್ಲಿಗೆ ಹೋಗುವುದು ಬೇಡ ' . "ಎಂದು ತಿಳಿಸಿದೆ.
" ಶೀಘ್ರದಲ್ಲಿ ಮಿಯಾಂದಾದ್ ನನ್ನತಂದೆಯನ್ನು ನೋಡಿ ನಿಂತು, ನಾನು ನಿಮ್ಮ ಮಗನ ಬಗ್ಗೆ ಏನು ಹೇಳಿಲ್ಲ ಎಂದರು. ನನ್ನ ತಂದೆ ನಗುತ್ತಾ ನಾನು ನಿಮ್ಮನ್ನು ಏನು ಕೇಳಲು ಇಲ್ಲಿಗೆ ಬಂದಿಲ್ಲ, ನೀವೊಬ್ಬ ಅದ್ಭುತ ಆಟಗಾರ ಅದಕ್ಕಾಗಿ ನಿಮ್ಮನ್ನು ಒಮ್ಮೆ ಭೇಟಿಯಾಗಲು ಬಂದೆ " ಎಂದು ತಿಳಿಸಿದ್ದರು ಎಂದು ಪಠಾಣ್ ಟಾಕ್ ಶೋ ಒಂದರಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.
ಸೌರವ್ ಗಂಗೂಲಿ ನಾಯಕತ್ವದ ಭಾರತ ತಂಡ ಆ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು 3-1ರಲ್ಲಿ, ಏಕದಿನ ಸರಣಿಯನ್ನು 3-2 ರಲ್ಲಿ ಗೆದ್ದು ಬೀಗಿತ್ತು. ಇದೇ ಸಂದರ್ಭದಲ್ಲಿ ಪಾಕಿಸ್ತಾನಿಯರು ಹೇಗೆ ನಡೆಸಿಕೊಂಡರು ಎಂಬ ಪ್ರಶ್ನೆಗೆ ಉತ್ತರಿಸಿರುವ ಪಠಾಣ್ ನೆರೆರಾಷ್ಟ್ರದ ಆತಿಥ್ಯದಿಂದ ಸಂತೋಷವಾಗಿತ್ತು. ಅಲ್ಲಿನ ಆಹಾರ, ಡ್ರೆಸ್ಸಿಂಗ್ ರೂಮ್ ಹಾಗೂ ಸಚಿನ್ ಸರಣಿ ಗೆದ್ದ ನಂತರ ನನ್ನನ್ನು ಹಾಡು ಹೇಳಲು ಹೇಳಿದ ಸನ್ನಿವೇಶ, ತಂಡದ ಯೂನಿಟಿ ಎಲ್ಲವೂ ಅದ್ಭುತವಾಗಿತ್ತು ಎಂದು ಪಠಾಣ್ ನೆನಪಿಸಿಕೊಂಡಿದ್ದಾರೆ.