ಪಂದ್ಯ ಸೋತಿದ್ದು ಬೇಸರ ತರಿಸಿದೆ:ಶಿವಮ್ ದುಬೆ - ಭಾರತ-ವೆಸ್ಟ್ಇಂಡೀಸ್ ಟಿ20 ಪಂದ್ಯ
ಭಾರತ ವೆಸ್ಟ್ಇಂಡೀಸ್ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ ಭಾರತದ ಪರ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ತಮ್ಮ ಶಿವಮ್ ದುಬೆ, ಪ್ರದರ್ಶನ ಮತ್ತು ಪಂದ್ಯದ ಕುರಿತು ಮಾತನಾಡಿದ್ದಾರೆ.
ತಿರುವನಂತಪುರಂ: ನಾನು ಟಿ 20 ಯಲ್ಲಿ ಅರ್ಧಶತಕ ಬಾರಿಸಿದ್ದು ತುಂಬಾ ಖುಷಿಯ ಸಂಗತಿ. ಆದರೆ ನಾವು ಪಂದ್ಯ ಸೋತಿದ್ದು ಬೇಸರ ತರಿಸಿದೆ ಎಂದು ಟೀಮ್ ಇಂಡಿಯಾ ಆಟಗಾರ ಶಿವಮ್ ದುಬೆ ಹೇಳಿದ್ದಾರೆ.
ತಿರುವನಂತಪುರಂನಲ್ಲಿ ನಡೆದ ಭಾರತ-ವಿಂಡೀಸ್ 2 ನೇ ಟಿ20 ಪಂದ್ಯದ ಬಳಿಕ ಮಾತನಾಡಿದ ದುಬೆ, ಭಾರತ ತಂಡಕ್ಕಾಗಿ ನಾನು 50 ರನ್ ಬಾರಿಸಿದ್ದು ನನಗೆ ವಿಶೇಷವಾಗಿದೆ. ಆದರೆ ದುರದೃಷ್ಟವಶಾತ್ ನಾವು ಪಂದ್ಯವನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2ನೇ ಟಿ20 ಪಂದ್ಯದಲ್ಲಿ ವಿಂಡೀಸ್ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಆದರೆ, ರೋಹಿತ್ ಶರ್ಮ ಮತ್ತು ಕೆ ಎಲ್ ರಾಹುಲ್ ಬೇಗನೆ ಫೆವಿಲಿಯನ್ ಸೇರಿಕೊಂಡಿದ್ದರು. ಈ ವೇಳೆ ಅಂಗಳಕ್ಕೆ ಇಳಿದ ದುಬೆ, ಕೇವಲ 30 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಒಳಗೊಂಡಂತೆ 54 ರನ್ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು.
Conclusion: