ETV Bharat / sitara

ಪ್ರಭಾಸ್​ಗೆ ಜೋಡಿಯಾದ ಮಲಯಾಳಿ ಬೆಡಗಿ ಮಾಳವಿಕಾ ಮೋಹನನ್ - ಪ್ರಭಾಸ್​ಗೆ ನಾಯಕಿಯಾದ ಮಾಳವಿಕ ಮೋಹನನ್​

ಪ್ರಭಾಸ್​ ಅಭಿನಯದ ಮುಂದಿನ ಚಿತ್ರಕ್ಕೆ ಮಾಳವಿಕಾ ಮೋಹನನ್​ ನಾಯಕಿಯಾಗಿ ಅಭಿನಯಿಸುತ್ತಿರುವುದು ಬಹುತೇಕ ಅಧಿಕೃತವಾಗಿದೆ. ತಮಿಳು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಸ್ವತಃ ಮಾಳವಿಕಾ ಅವರೇ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

Prabhas and Malavika Mohanan
ಪ್ರಭಾಸ್​ ಹಾಗೂ ಮಾಳವಿಕಾ ಮೋಹನನ್​
author img

By

Published : Mar 8, 2022, 3:08 PM IST

Updated : Mar 8, 2022, 3:59 PM IST

ಹೈದರಾಬಾದ್: ಪ್ರಭಾಸ್ ಅಭಿನಯದ ಮುಂದಿನ ಸಿನಿಮಾದಲ್ಲಿ ಮಾಳವಿಕಾ ಮೋಹನನ್ ನಾಯಕಿಯಾಗಿ ಅಭಿನಯಿಸುತ್ತಿರುವುದು ಬಹುತೇಕ ಅಧಿಕೃತವಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಸುಳಿವು ನೀಡಿರುವ ನಟ ಪ್ರಭಾಸ್​ ಇಂದೊಂದು ಕಮರ್ಷಿಯಲ್ ಎಂಟರ್‌ಟೈನರ್ ಆಗಿದ್ದು, ಮೂವರು ನಾಯಕಿಯರು ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂದು ತಿಳಿಸಿದ್ದಾರೆ.

ತಮಿಳು ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಲಯಾಳಂ ನಟಿ ಮಾಳವಿಕಾ, ಪ್ರಭಾಸ್​ನ ಮುಂದಿನ ಚಿತ್ರದಲ್ಲಿ ನಟಿಸುತ್ತಿರುವುದರ ಬಗ್ಗೆ ಬಹುತೇಕ ದೃಢಪಡಿಸಿದ್ದಾರೆ. ನನ್ನ ತೆಲುಗು ಪ್ರಾಜೆಕ್ಟ್​ಗಾಗಿ ಕೆಲವು ದಿನಗಳಿಂದ ಮಾತುಕತೆ ನಡೆಯುತ್ತಿವೆ. ಇದೊಂದು ದೊಡ್ಡ ಬಜೆಟ್​ನ ಸಿನಿಮಾವಾಗಿದ್ದು, ಉಳಿದಂತೆ ಯಾವುದೇ ಮಾಹಿತಿಯನ್ನು ನಾನು ಹಂಚಿಕೊಳ್ಳುವಂತಿಲ್ಲ. ಹೊಸ ಪ್ರಾಜೆಕ್ಟ್​ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಿದರು.

ಪ್ರಭಾಸ್​ ಹಾಗೂ ನಿರ್ದೇಶಕ ಮಾರುತಿ ಅವರ ನಾಲ್ಕನೇ ಪ್ರಾಜೆಕ್ಟ್​ ಇದು. 'ರಾಜಾ ಡಿಲಕ್ಸ್' ಎಂದು ಹೆಸರಿಡಲಾಗಿದ್ದು, ಆದಷ್ಟು ಶೀಘ್ರದಲ್ಲಿ ಸಿನಿಮಾ ಸೆಟ್ಟೇರಲಿದೆ. ನಿರ್ಮಾಪಕರು ಈ ಕುರಿತು ಶೀಘ್ರದಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ಆರ್​ಆರ್​ಆರ್​ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಡಿವಿವಿ ದಾನಯ್ಯ ಅವರೇ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂದು ವರದಿಯಾಗಿದೆ. ಕಾಮಿಡಿ ಕಥಾವಸ್ತುವಿರುವ ಕಮರ್ಷಿಯಲ್​ ಎಂಟರ್​ಟೈನರ್​ ಇದಾಗಿದ್ದು, ಮಾರ್ಚ್​ 18 ಹೋಳಿ ಹಬ್ಬಕ್ಕೆ ಅಧಿಕೃತ ಘೋಷಣೆ ಮಾಡುವ ಮೂಲಕ ನಟ ಪ್ರಭಾಸ್​​ಗೆ ಟ್ರೀಟ್​ ನೀಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

Last Updated : Mar 8, 2022, 3:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.