ETV Bharat / sitara

ಮಗನ ಹೆಸರೇ ಸಲಗದಲ್ಲಿ ಪೊಲೀಸ್ ಪಾತ್ರಕ್ಕೆ... ಸೀಕ್ರೆಟ್ ರಿವೀಲ್ ಮಾಡಿದ ವಿಜಯ್ - ಸಲಗ ಚಿತ್ರದ ಟೈಟಲ್

ದುನಿಯಾ ವಿಜಯ್ ನಟಿಸಿ ಹಾಗೂ ನಿರ್ದೇಶಿಸುತ್ತಿರುವ ಸಲಗ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.

actor duniya vijay
author img

By

Published : Aug 15, 2019, 11:24 AM IST

ಸಲಗ ಚಿತ್ರದ ಟೈಟಲ್ ಹಾಗೂ ಪೋಸ್ಟರ್​​​​ ಸಖತ್ ಸೌಂಡ್ ಮಾಡುತ್ತಿವೆ. ಈಗಾಗಲೇ ಚಿತ್ರದ ಇತರೆ ಪಾತ್ರಗಳು ರಿವೀಲ್ ಆಗಿವೆ. ಆದರೆ, ನಾಯಕನ ಪಾತ್ರ ಇನ್ನೂ ರಿವೀಲ್ ಮಾಡದ ಚಿತ್ರತಂಡ ತುಂಬಾ ಕ್ಯೂರಿಯಾಸಿಟಿ ಮೂಡಿಸಿದೆ.

ಸಲಗ ಚಿತ್ರದ ಮಾತಿನ ಭಾಗದ ಶೂಟಿಂಗ್ ಈಗಾಗಲೇ ಶೇ. 65ರಷ್ಟು ಕಂಪ್ಲೀಟ್ ಆಗಿದೆ. ಫೈಟ್​ ಹಾಗೂ ಸಾಂಗ್​​​ಗಳ ಶೂಟಿಂಗ್ ಮುಗಿದ ನಂತರ ಒಂದು ಫ್ಲ್ಯಾಶ್​ ಬ್ಯಾಕ್ ಸೀನ್ ಚಿತ್ರೀಕರಣ ನಡೆಯಲಿದೆ. ಈ ವರ್ಷದಲ್ಲಿ ಸಲಗ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ. ಶೀಘ್ರದಲ್ಲೇ ಚಿತ್ರದಲ್ಲಿಯ ತಮ್ಮ ಲುಕ್​ನ್ನು ರಿವೀಲ್ ಮಾಡುವುದಾಗಿ ನಟ-ನಿರ್ದೇಶಕ ವಿಜಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದುನಿಯಾ ವಿಜಯ್ ಮಾಧ್ಯಮಗೋಷ್ಠಿ

ಅಲ್ಲದೆ, ಚಿತ್ರದಲ್ಲಿ ಧನಂಜಯ ಅವರ ಪಾತ್ರಕ್ಕೆ ತಮ್ಮ ಮಗ ಸಾಮ್ರಾಟ್ ಹೆಸರಿಟ್ಟಿರುವುದರ ಹಿಂದಿನ ಕಾರಣ ರಿವೀಲ್ ಮಾಡಿದ ಕರಿಚಿರತೆ, ನನ್ನ ಮಗನನ್ನು ಐಪಿಎಸ್ ಅಧಿಕಾರಿಯನ್ನಾಗಿ ಮಾಡಬೇಕೆಂಬ ಗುರಿಯಿದೆ ಎಂದರು. ಜೊತೆಗೆ ಒಳ್ಳೆಯ ನಟನನ್ನಾಗಿಸುವ ಆಸೆ ಕೂಡ ಇದೆ. ದಕ್ಷ ಐಪಿಎಸ್ ಅಧಿಕಾರಿಗಳಾದ ರವಿ ಡಿ. ಚೆನ್ನಣ್ಣನವರ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ಅವರನ್ನು ಭೇಟಿಯಾಗಿ ಅವರಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ಮಾಡ್ತಿದ್ದೇನೆ ಎಂದರು.

ಇನ್ನು ಸಲಗ ಚಿತ್ರವನ್ನು ದಕ್ಷ ಪೊಲೀಸ್ ಅಧಿಕಾರಿಗಳಿಗೆ ಅರ್ಪಿಸುವುದಾಗಿ ಹೇಳಿದ್ರು. ಪ್ರಸ್ತುತ ಸಮಾಜದಲ್ಲಿ ಯುವಕರು ಪೆನ್ ಹಿಡಿಯುವ ಬದಲು ಬೇರೇನೋ ಹಿಡಿಯುವುದನ್ನು ತಪ್ಪಿಸುವುದು ನಮ್ಮ ಚಿತ್ರದ ಉದ್ದೇಶ ಎಂದು ವಿಜಯ್​ ಹೇಳಿದ್ರು.

Intro:ನಟ ದುನಿಯಾ ವಿಜಯ್ ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವ ಸಲಗ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಇನ್ನು ಸಲಗ ಚಿತ್ರ ಟೈಟಲ್ ನಿಂದಲೇ ಸಕತ್ ಹೈಪ್ ಕ್ರಿಯೇಟ್ ಆಗಿದ್ದು . ಚಿತ್ರದ ಪ್ರತಿಯೊಂದು ಪೋಸ್ಟರ್ಗಳು ಈಗಾಗಲೇ ಸೌಂಡ್ ಮಾಡುತ್ತಿದ್ದು. ಚಿತ್ರತಂಡ ಚಿತ್ರದ ಇತರೆ ಪಾತ್ರಗಳನ್ನು ಹೊರತುಪಡಿಸಿ ನಾಯಕನ ಪಾತ್ರವನ್ನು ಇನ್ನು ಎಲ್ಲೂ ಯಾವುದೇ ಪೋಸ್ಟರ್ ನಲ್ಲಿ ಬಿಡುಗಡೆ ಮಾಡದೆ ತುಂಬಾ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ಇನ್ನು ಈ ಕುತೂಹಲ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕರಿ ಚಿರತೆಯ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ. ಅಲ್ಲದೆ ಸಲಗ ಚಿತ್ರದಲ್ಲಿ ಟಗರು ಖ್ಯಾತಿಯ ಡಾಲಿ ಧನಂಜಯ್ ದಕ್ಷ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸ್ತಿದ್ದಾರೆ. ಎಂಬುದನ್ನು ಚಿತ್ರತಂಡ ರಿವಿಲ್ ಮಾಡಿತ್ತು.

Body:ಇನ್ನು ಚಿತ್ರದ ಶೂಟಿಂಗ್ ಯಾವ ಹಂತದಲ್ಲಿದೆ ಎಂಬುದು ತುಂಬಾ ಸೀಕ್ರೆಟ್ ಆಗಿತ್ತು. ಆದರೆ ಈ ಸೀಕ್ರೆಟ್ ಗೆ ನಟ ನಿರ್ದೇಶಕ ದುನಿಯಾ ವಿಜಯ್ ಅವರೇ ಫುಲ್ ಸ್ಟಾಪ್ ಇಟ್ಟಿದ್ದು, ಇಂದು ನಟ ವಿಜಯ್ ಸಲಗ ಚಿತ್ರ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದರು. ಸಲಗ ಚಿತ್ರದ ಟಾಕಿ ಪೋಷನ್ ಶೂಟಿಂಗ್ ಈಗಾಗಲೇ ಶೇಕಡಾ 65ರಷ್ಟು ಕಂಪ್ಲೀಟ್ ಆಗಿದ್ದು ಎರಡು ಹಾಡುಗಳನ್ನು ಮಾತ್ರ ಬಳಸಿಕೊಂಡಿದ್ದೇವೆ. ಸೈಟ್ ಹಾಗೂ ಸಾಂಗ್ಗಳು ಶೂಟಿಂಗ್ ಆದ ನಂತರ ಒಂದು ಫ್ಲಾಶ್ ಬ್ಯಾಕ್ ಸೀನ್ ಇದೆ ಅದನ್ನು ಕಂಪ್ಲೀಟ್ ಮಾಡಿಕೊಂಡು ಈ ವರ್ಷದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿರುವುದಾಗಿ ನಟ ನಿರ್ದೇಶಕ ವಿಜಯ್ ತಿಳಿಸಿದರು.

Conclusion:ಅಲ್ಲದೆ ಚಿತ್ರದಲ್ಲಿ ಧನಂಜಯ ಅವರ ಪಾತ್ರಕ್ಕೆ ಅವರ ಮಗ ಸಾಮ್ರಾಟ್ ಹೆಸರನ್ನು ಇಟ್ಟಿರುವುದಕ್ಕೆ ಕಾರಣವನ್ನು ತಿಳಿಸಿದರು. ನಟ ದುನಿಯಾ ವಿಜಯ್ ಅವರಿಗೆ ಅವರ ಮಗನನ್ನು ಐಪಿಎಸ್ ಆಫೀಸರ್ ಆಗಿ ಮಾಡಬೇಕೆಂಬ ಬಯಕೆ ಇದೆ ಅಂತೆ. ಜೊತೆಗೆ ಒಳ್ಳೆಯ ನಟರು ಮಾಡುವ ಉದ್ದೇಶ ಹೊಂದಿರುವ ದುನಿಯಾ ವಿಜಯ್. ಈಗಾಗಲೇ ದಕ್ಷ ಐಪಿಎಸ್ ಅಧಿಕಾರಿಗಳಾದ ರವಿ ಡಿ ಚೆನ್ನಣ್ಣನವರ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ಅವರನ್ನು ಭೇಟಿಯಾಗಿ ಅವರಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ಮಾಡ್ತಿದ್ದಾರಂತೆ. ಅಲ್ಲದೆ ಅವರ ಫ್ಯಾಮಿಲಿಯಲ್ಲಿ ಯಾರಾದರೂ ಒಬ್ಬರು ಐಪಿಎಸ್ ಆಫೀಸರ್ ಆಗಬೇಕೆಂಬುದು ದುನಿಯಾ ವಿಜಯ್ ಅವರ ಹೆಬ್ಬಯಕೆ. ಅಲ್ಲದೆ ಸಲಗ ಚಿತ್ರವನ್ನು ಪೋಲಿಸ್ ಡಿಪಾರ್ಟ್ಮೆಂಟ್ ಅಲ್ಲಿ ಇರುವಂತಹ ಎಲ್ಲಾ ಅಧಿಕಾರಿಗಳಿಗೆ ಸಲಗ ಚಿತ್ರವನ್ನು ಡೆಡಿಕೇಟ್ ಮಾಡುತ್ತಿರುವುದಾಗಿ ತಿಳಿಸಿದರು. ಅಲ್ಲದೆ ಪ್ರಸ್ತುತ ಸಮಾಜದಲ್ಲಿ ಯುವಕರು ಪೆನ್ ಹಿಡಿಯುವ ಬದಲು ಬೇರೆ ಏನು ಹಿಡಿಯುತ್ತಿದ್ದಾರೆ. ಆದರೆ ನಾವು ಈ ಚಿತ್ರದಲ್ಲಿ ಯುವಕರು ಅಡ್ಡದಾರಿ ಹಿಡಿಯೋದ್ ತಪ್ಪು ಎಂಬುದನ್ನು ತೋರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ . ಅಲ್ಲದೆ ಸಲಗ ಚಿತ್ರದಲ್ಲಿ ಆದಷ್ಟು ಬೇಗ ನನ್ನ ಪಾತ್ರವನ್ನು ರಿವೆಲ್ ಮಾಡುವುದಾಗಿ ನಟ-ನಿರ್ದೇಶಕ ದುನಿಯಾ ವಿಜಯ್ ತಿಳಿಸಿದರು..

ಸತೀಶ MB
ETV Bharat Logo

Copyright © 2025 Ushodaya Enterprises Pvt. Ltd., All Rights Reserved.