ETV Bharat / lifestyle

ಕಾಡುತ್ತಿದೆಯಾ ಸ್ತನ ಸಂಬಂಧಿ ಕಾಯಿಲೆ..? ಇಲ್ಲಿದೆ ಮನೆ ಮದ್ದು..! - ಒಣ ಮತ್ತು ಒಡೆದ ಸ್ತನತೊಟ್ಟು

ಹಾಲುಣಿಸುವ ತಾಯಂದಿರಲ್ಲಿ ಸ್ತನ ಸಂಬಂಧಿ ಸಮಸ್ಯೆ ಕಂಡು ಬರುವುದರಿಂದ, ವೈದ್ಯರು ಹಾಲುಣಿಸುವ ಸಮಯದಲ್ಲಿ ಮಗುವಿಗೆ ಹಾನಿಯಾಗದಂತೆ ಸಾಮಾನ್ಯ ಪರಿಸ್ಥಿತಿಗಳಲ್ಲಿ ಸಾಮಾನ್ಯ ಮನೆ ಮದ್ದುಗಳನ್ನು ಆಯ್ಕೆ ಮಾಡಲು ಶಿಫಾರಸು ಮಾಡುತ್ತಾರೆ

causes-of-cracked-nipples-and-how-to-deal-with-it
ಕಾಡುತ್ತಿದ್ಯಾ ಸ್ತನ ಸಂಬಂಧಿ ಕಾಯಿಲೆ.
author img

By

Published : Aug 14, 2021, 6:49 PM IST

ಸಾಮಾನ್ಯವಾಗಿ ಮಹಿಳೆಯರು ಸ್ತನಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಾರೆ. ಇದಕ್ಕೆ ಕಾರಣ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ. ಆದರೆ, ಇತ್ತೀಚಿಗೆ ಮಗುವಿಗೆ ಜನ್ಮ ನೀಡಿರುವ ಮತ್ತು ಹಾಲುಣಿಸುವ ಮಹಿಳೆಯರಲ್ಲಿ ಸ್ತನಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚು ಕಂಡು ಬರುತ್ತವೆ. ಅದರಲ್ಲಿ ಮುಖ್ಯವಾಗಿ ಬಿರುಕು ಸ್ತನ, ಗಟ್ಟಿ ಸ್ತನ, ನೋವು ಹಾಗೂ ಆ ಜಾಗದಲ್ಲಿ ಅಲರ್ಜಿ ಉಂಟಾಗುವ ಸಮಸ್ಯೆ ಎದುರಿಸುತ್ತಾರೆ.

ಆದರೆ, ವೈದ್ಯಲೋಕದಲ್ಲಿ ಇದೆಲ್ಲದಕ್ಕೂ ಸೂಕ್ತ ಚಿಕಿತ್ಸೆಗಳಿವೆ. ಉತ್ತರಾಖಂಡ್​​​ನ ಡೆಹ್ರಾಡೂನ್ ಹಿರಿಯ ಮಕ್ಕಳ ತಜ್ಞೆ ಡಾ.ಲತಿಕಾ ಜೋಶಿ ವಿವರಿಸಿದಂತೆ, ಹಾಲುಣಿಸುವ ತಾಯಂದಿರಿಗೆ ಈ ಸ್ಥಿತಿಯು ಖಂಡಿತವಾಗಿಯೂ ಹೆಚ್ಚು ನೋವುಂಟು ಮಾಡುತ್ತದೆ. ಆದರೆ, ಈ ಸ್ಥಿತಿಗೆ ಬೇರೆ ಕೆಲವು ಕಾರಣಗಳೂ ಇರಬಹುದು ಎನ್ನುತ್ತಾರೆ.

ಸ್ತನ ಜಾಗದಲ್ಲಿ ಚರ್ಮ ಸಮಸ್ಯೆಗೆ ಕಾರಣಗಳು

  • ಸ್ತನಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು
  • ಮಗುವಿಗೆ ತಪ್ಪಾಗಿ ಮತ್ತು ತಪ್ಪಾದ ಭಂಗಿಯಲ್ಲಿ ಸ್ತನ್ಯಪಾನ ಮಾಡುವುದು ಅಥವಾ ಸ್ತನ್ಯಪಾನ ಮಾಡುವಾಗ ಮಗು ತಾಯಿಯ ಮೊಲೆತೊಟ್ಟುಗಳನ್ನು ಕಚ್ಚುವುದು
  • ರಾಸಾಯನಿಕಯುಕ್ತ ಸೋಪ್​​ಗಳ ಅತಿಯಾದ ಬಳಕೆ
  • ಈಗಾಗಲೇ ಚರ್ಮ ಸಂಬಂಧಿ ರೋಗ ಹೊಂದಿದ್ದರೆ
  • ಹೆಚ್ಚಿನ ಒತ್ತಡ
  • ಜೀರ್ಣಕಾರಿ ಸಮಸ್ಯೆಗಳು ಮತ್ತು ದೇಹದಲ್ಲಿ ಪೋಷಕಾಂಶಗಳ ಕೊರತೆ
  • ಗರ್ಭನಿರೋಧಕಗಳ ದೀರ್ಘಕಾಲೀನ ಬಳಕೆ

ಒಣ ಮತ್ತು ಒಡೆದ ಸ್ತನತೊಟ್ಟು ಸಮಸ್ಯೆಗೆ ಮನೆ ಮದ್ದು

ಸಾಮಾನ್ಯವಾಗಿ ಹಾಲುಣಿಸುವ ತಾಯಂದಿರಲ್ಲಿ ಈ ಸಮಸ್ಯೆ ಕಂಡುಬರುವುದರಿಂದ, ವೈದ್ಯರು ಹಾಲುಣಿಸುವ ಸಮಯದಲ್ಲಿ ಮಗುವಿಗೆ ಹಾನಿಯಾಗದಂತೆ ಸಾಮಾನ್ಯ ಪರಿಸ್ಥಿತಿಗಳಲ್ಲಿ ಸಾಮಾನ್ಯ ಮನೆಮದ್ದುಗಳನ್ನು ಆಯ್ಕೆ ಮಾಡಲು ಶಿಫಾರಸು ಮಾಡುತ್ತಾರೆ ಎಂದು ಡಾ. ಲತಿಕಾ ಜೋಶಿ ಹೇಳುತ್ತಾರೆ. ಸಾಧಾರಣವಾಗಿ ಮನೆ ಮದ್ದುಗಳಿಗೆ ಆದ್ಯತೆ ನೀಡಲಾಗುತ್ತದೆ, ಏಕೆಂದರೆ ಅವುಗಳು ಸಾಮಾನ್ಯವಾಗಿ ಚರ್ಮದ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ.

ತುಪ್ಪ

ಚರ್ಮ ಸಂಬಂಧಿ ಸಮಸ್ಯೆಗಳಿಗೆ ಶುದ್ಧ ತುಪ್ಪ ಬಳಸಲು ಆಯುರ್ವೇದವು ಶಿಫಾರಸು ಮಾಡುತ್ತದೆ, ಏಕೆಂದರೆ ಇದು ತ್ವಚೆಯ ತೇವಾಂಶ ಉಳಿಸಿಕೊಳ್ಳುವಲ್ಲಿ ತಕ್ಷಣವೇ ಕೆಲಸ ಮಾಡುತ್ತದೆ. ಹೆಚ್ಚುವರಿಯಾಗಿ ಇದು ಚರ್ಮ ಶುಚಿಗೊಳಿಸುವ ಗುಣಗಳನ್ನು ಹೊಂದಿದ್ದು, ಅದು ಮೃದು ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಮರ್ಥವಾಗಿದೆ.

ಎದೆ ಹಾಲಿನಿಂದ ಮಸಾಜ್​​​

ಮಗು ಸರಿಯಾಗಿ ಹಾಲುಣ್ಣದೇ ಇದ್ದ ಸಂದರ್ಭದಲ್ಲಿ ತೊಟ್ಟು ಒಣಗುವುದು ಮತ್ತು ಸೋರುವಿಕೆಯ ಸಮಸ್ಯೆ ಎದುರಾಗುತ್ತದೆ. ಇದಕ್ಕಾಗಿ ತಾಯಿ ತನ್ನ ಎದೆಹಾಲಿನಿಂದಲೇ ಸ್ತನದ ಭಾಗಕ್ಕೆ ಮಸಾಜ್ ಮಾಡಿಕೊಳ್ಳುವುದು ಉತ್ತಮ. ಎದೆಹಾಲಿನಲ್ಲಿ ನೈಸರ್ಗಿವಾಗಿ ತೇವಾಂಶ ಕಾಪಾಡಿಕೊಳ್ಳಲು ಬೇಕಾದ ಅನೇಕ ಅಂಶಗಳಿಂದ ಇದರಿಂದ ಸ್ತನದ ಕೆಲ ಸಮಸ್ಯೆ ದೂರ ಮಾಡಬಹುದು.

ತೆಂಗಿನಕಾಯಿ ಎಣ್ಣೆ

ತುಪ್ಪದಂತೆಯೇ ತೆಂಗಿನ ಎಣ್ಣೆ ಕೂಡ ಸ್ತನಗಳ ಚಿಕಿತ್ಸೆಯಲ್ಲಿ ಬಹಳ ಉಪಕಾರಿಯಾಗಿದೆ. ಆರ್ಯುವೇದ ಹಾಗೂ ಪ್ರಾಚೀನ ಚಿಕಿತ್ಸಾ ವಿಧಾನಗಳಲ್ಲಿ ಗಾಯಗಳ ಗುಣಪಡಿಸಲು ತೆಂಗಿನ ಎಣ್ಣೆ ಬಳಕೆ ಸಹ ಕಾರ್ಯರೂಪದಲ್ಲಿದೆ. ಹಲವಾರು ಅಧ್ಯಯನಗಳು ಇದು ಬಯೋಆಕ್ಟಿವ್ ಕಾಂಪೌಂಡ್ಸ್ ಮತ್ತು ಮೈಕ್ರೋಬಿಯಲ್ ಗುಣಗಳನ್ನು ಹೊಂದಿದೆ ಎಂದು ತೋರಿಸಿದೆ ಇದು ಚರ್ಮದ ಗುಣಪಡಿಸುವಿಕೆ ವೇಗಗೊಳಿಸುವುದಲ್ಲದೇ ವಿವಿಧ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ.

ಜೇನುತುಪ್ಪ

ಒಣತ್ವಚೆ ಹಾಗೂ ಒಡಕು ಚರ್ಮದ ಸಮಸ್ಯೆಯನ್ನ ಜೇನುತುಪ್ಪ ಬಳಕೆಯಿಂದ ಕಡಿಮೆ ಮಾಡಬಹುದಾಗಿದೆ. ಜೇನುತುಪ್ಪದಲ್ಲಿ ವೈರಸ್ ತಡೆ ಶಕ್ತಿ ಇರುವುದರಿಂದ ಸೋಂಕಿನಂಥ ಲಕ್ಷಣಗಳನ್ನ ಗುಣಮಾಡುತ್ತದೆ ಎಂಬುದು ಅಧ್ಯಯನಗಳಿಂದ ಖಾತರಿಯಾಗಿದೆ. ಆದರೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ, ವಿಶೇಷವಾಗಿ ಸ್ತನ ಸಮಸ್ಯೆಗಳಿಗೆ ವೈದ್ಯಕೀಯ ದರ್ಜೆಯ ಜೇನುತುಪ್ಪವನ್ನು ಮಾತ್ರ ಬಳಸಬೇಕಿದೆ.

ಬಿಸಿ ನೀರು

ಹದ ಬೆಚ್ಚಗಿನ ನೀರನ್ನು ಪಡೆದು ಸ್ತನ ಅಥವಾ ಸ್ತನದ ಒಣಗಿದ ಜಾಗದಲ್ಲಿ ನಿಧಾನವಾಗಿ ಸುರಿಯುವುದರಿಂದ ಈ ಸಮಸ್ಯೆ ದೂರಮಾಡಬಹುದು. ಆದ್ರೆ ಈ ಎಲ್ಲಾ ಚಿಕಿತ್ಸೆಗಳು ಆರಂಭಿಕ ಹಂತದಲ್ಲಿ ಮಾತ್ರ ಬಳಕೆಗೆ ಸೂಕ್ತ ಒಂದು ವೇಳೆ ಸಮಸ್ಯೆ ಇನ್ನಷ್ಟು ಹೆಚ್ಚಾದರೆ ವೈದ್ಯಕೀಯ ಸಲಹೆ ಅಗತ್ಯವಾಗಿರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.