ವಾಷಿಂಗ್ಟನ್: ಅಮೆರಿಕ ನಿರ್ಮಿತ 24 ಎಂ ಹೆಚ್-60 ರೋಮಿಯೋ ಸೀಹಾಕ್ ಹೆಲಿಕಾಪ್ಟರ್ಗಳನ್ನು ಭಾರತಕ್ಕೆ ನೀಡಲು ಅಮೆರಿಕ ಮುಂದಾಗಿದೆ ಎಂದು ವೈಟ್ಹೌಸ್ ಮೂಲಗಳು ಖಚಿತಪಡಿಸಿವೆ.
ಯುದ್ಧದ ಸಂದರ್ಭದಲ್ಲಿ ಸೇನೆಗೆ ಮತ್ತಷ್ಟು ಬಲ ತುಂಬಲಿರುವ ಈ ಅತ್ಯಾಧುನಿಕ ಹೆಲಿಕಾಪ್ಟರ್ಗಳು ಭಾರತದ ದಶಕಗಳ ಬೇಡಿಕೆಯಾಗಿತ್ತು. ಸದ್ಯ ಟ್ರಂಪ್ ಸರ್ಕಾರ ಭಾರತಕ್ಕೆ ಹೆಲಿಕಾಪ್ಟರ್ ನೀಡಲು ಮುಂದಾಗಿದ್ದು ಇದಕ್ಕಾಗಿ ಭಾರತ 2.4 ಬಿಲಿಯನ್ ಅಮೆರಿಕನ್ ಡಾಲರ್ ನೀಡಲಿದೆ.
ಪ್ರಸ್ತುತ ಅಮೆರಿಕ ನೀಡಲು ಮುಂದಾಗಿರುವ ಹೆಲಿಕಾಪ್ಟರ್ಗಳು ಆಧುನಿಕ ಹಾಗೂ ಉತ್ತಮ ದರ್ಜೆಯದ್ದಾಗಿದೆ. ಶತ್ರು ಪಡೆಯಯನ್ನು ಯುದ್ಧದಲ್ಲಿ ಹಿಮ್ಮೆಟ್ಟಿಸಲು ಸಾಕಷ್ಟು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.