ವಿಭಿನ್ನ ಸಿನಿಮಾಗಳ ಮೂಲಕ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ನಟ ಸುಧೀರ್ ಬಾಬು. ತಮ್ಮ ಉತ್ತಮ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಹೆಚ್ಚಾಗಿ ಲವರ್ ಬಾಯ್, ಕ್ಯೂಟ್ ಇಮೇಜ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುಧೀರ್ ಬಾಬು ಈ ಬಾರಿ ಪಕ್ಕಾ ಮಾಸ್ ಅವತಾರದಲ್ಲಿ ಸಿನಿಪ್ರೇಮಿಗಳೆದುರು ಬರುತ್ತಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಧೀರ್ ಬಾಬು ಮುಖ್ಯಭೂಮಿಕೆಯ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ''ಹರೋಮ್ ಹರ''. ಫಸ್ಟ್ ಲುಕ್ ಮೂಲಕ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ್ದ ಚಿತ್ರತಂಡ, ಪಂಚ ಭಾಷೆಗಳಲ್ಲಿ ಟೀಸರ್ ಅನ್ನೂ ಸಹ ಅನಾವರಣಗೊಳಿಸಿದೆ.
ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ''ಹರೋಮ್ ಹರ' ಟೀಸರ್ ಬಿಡುಗಡೆ ಆಗಿದೆ. ಪಂಚ ಭಾಷೆಗಳ ಸೂಪರ್ ಸ್ಟಾರ್ಸ್ ಆಯಾ ಭಾಷೆಗಳಲ್ಲಿ ಟೀಸರ್ ರಿಲೀಸ್ ಮಾಡಿದ್ದಾರೆ. ತೆಲುಗಿನಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮಲಯಾಳಂನಲ್ಲಿ ಜನಪ್ರಿಯ ನಟ ಮಮ್ಮುಟ್ಟಿ, ತಮಿಳಿನಲ್ಲಿ ಸ್ಟಾರ್ ಹೀರೋ ವಿಜಯ್ ಸೇತುಪತಿ ಹಾಗೂ ಹಿಂದಿ ಭಾಷೆಯಲ್ಲಿ ಫಿಟ್ನೆಸ್ ಐಕಾನ್ ಟೈಗರ್ ಶ್ರಾಫ್ ಅವರು ಸುಧೀರ್ ಬಾಬು ಸಿನಿಮಾದ ಟೀಸರ್ ರಿವೀಲ್ ಮಾಡಿದ್ದಾರೆ. ಈ ಚಿತ್ರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಸಾಥ್ ನೀಡಿದ್ದು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ''ಹರೋಮ್ ಹರ'' ಟೀಸರ್ ಶೇರ್ ಮಾಡಿದ್ದಾರೆ.
-
The teaser looks amazing @isudheerbabu,
— Kichcha Sudeepa (@KicchaSudeep) November 27, 2023 " class="align-text-top noRightClick twitterSection" data="
Wishing you & the entire team of #HaromHara my best wishes, May this turn out to be a milestone in your career 🤗https://t.co/EDbHJuR9yT @ImMalvikaSharma @gnanasagardwara @SumanthnaiduG @chaitanmusic @SSCoffl @jungleemusicSTH pic.twitter.com/2dYLK67kY3
">The teaser looks amazing @isudheerbabu,
— Kichcha Sudeepa (@KicchaSudeep) November 27, 2023
Wishing you & the entire team of #HaromHara my best wishes, May this turn out to be a milestone in your career 🤗https://t.co/EDbHJuR9yT @ImMalvikaSharma @gnanasagardwara @SumanthnaiduG @chaitanmusic @SSCoffl @jungleemusicSTH pic.twitter.com/2dYLK67kY3The teaser looks amazing @isudheerbabu,
— Kichcha Sudeepa (@KicchaSudeep) November 27, 2023
Wishing you & the entire team of #HaromHara my best wishes, May this turn out to be a milestone in your career 🤗https://t.co/EDbHJuR9yT @ImMalvikaSharma @gnanasagardwara @SumanthnaiduG @chaitanmusic @SSCoffl @jungleemusicSTH pic.twitter.com/2dYLK67kY3
ಇದನ್ನೂ ಓದಿ: ರಾಜಮೌಳಿ ಪಾದ ಸ್ಪರ್ಶಿಸಿದ ರಣ್‌ಬೀರ್ ಕಪೂರ್; ಬಾಲಿವುಡ್ ನಟನ ಕೊಂಡಾಡಿದ ಮಹೇಶ್ ಬಾಬು
ಚಿತ್ರದಲ್ಲಿ ಸುಧೀರ್ ಬಾಬು ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಮಾಳವಿಕ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಪ್ರಮುಖ ಪಾತ್ರದಲ್ಲಿ ಸುನಿಲ್ ಮತ್ತು ವಿಲನ್ ಪಾತ್ರದಲ್ಲಿ ಕನ್ನಡದ ನಟ ಅರ್ಜುನ್ ಗೌಡ ತೊಡೆ ತಟ್ಟಿದ್ದಾರೆ. ಜೆ.ಪಿ. ಅಕ್ಷರಗೌಡ, ಲಕ್ಕಿ ಲಕ್ಷ್ಮಣ್, ರವಿಕಾಳೆ ತಾರಾಬಳಗದಲ್ಲಿದ್ದಾರೆ. ಹರೋಮ್ ಹರ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕೊನೆ ಹಂತದ ಶೂಟಿಂಗ್ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. 1989ರಲ್ಲಿ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ನಡೆದ ಘಟನೆಯ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ.
- " class="align-text-top noRightClick twitterSection" data="">
ಇದನ್ನೂ ಓದಿ: 'ಕಾಂತಾರ' ಒಂದು ದಂತಕಥೆ ಅಧ್ಯಾಯ- 1 ಟೀಸರ್, ಫಸ್ಟ್ ಲುಕ್ ರಿಲೀಸ್: 9 ಮಿಲಿಯನ್ಗೂ ಹೆಚ್ಚು ವೀಕ್ಷಣೆ
ಜ್ಞಾನಸಾಗರ ದ್ವಾರಕಾ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸುಮಂತ್ ಜಿ ನಾಯ್ಡು ಅವರು ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಚೈತಮ್ ಭಾರದ್ವಾಜ್ ಅವರ ಸಂಗೀತವಿದೆ. ಅರವಿಂದ್ ವಿಶ್ವನಾಥನ್ ಅವರ ಛಾಯಾಗ್ರಹಣವಿದೆ. ಶ್ರೀ ಸುಬ್ರಹ್ಮಣ್ಯೇಶ್ವರ ಸಿಮಿಮಾಸ್ ಬ್ಯಾನರ್ ಅಡಿ ಹರೋಮ್ ಹರಾ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಸದ್ಯ ಟೀಸರ್ನಿಂದ ಸದ್ದು ಮಾಡುತ್ತಿರುವ ಈ ಚಿತ್ರವನ್ನು ಆದಷ್ಟು ಬೇಗ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ.