ETV Bharat / entertainment

'ಅಮರಾವತಿ ಪೊಲೀಸ್ ಸ್ಟೇಷನ್'ಗೆ ಬಂದ‌ ಜಗ್ಗೇಶ್ ಪುತ್ರ ಗುರುರಾಜ್ - jaggesh son gururaj

ನಿರ್ದೇಶಕ ಪುನೀತ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ 'ಅಮರಾವತಿ ಪೊಲೀಸ್ ಸ್ಟೇಷನ್' ಚಿತ್ರದ ಮುಹೂರ್ತ ಕಾರ್ಯಕ್ರಮ ಬುಧವಾರದಂದು ನೆರವೇರಿತು. ಈ ಚಿತ್ರದ ಮೂಲಕ ಜಗ್ಗೇಶ್ ಪುತ್ರ ಗುರುರಾಜ್ ಮತ್ತೆ ನಾಯಕನಾಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.

Amravati Police Station movie
ಅಮರಾವತಿ ಪೊಲೀಸ್ ಸ್ಟೇಷನ್ ಸಿನಿಮಾ ಮುಹೂರ್ತ ಕಾರ್ಯಕ್ರಮ
author img

By

Published : Nov 24, 2022, 1:23 PM IST

ವಿಷ್ಣು ಸರ್ಕಲ್ ಸಿನಿಮಾ ನಂತರ ಚಿತ್ರರಂಗದಿಂದ‌ ದೂರ ಉಳಿದಿದ್ದ ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್ ಮತ್ತೆ ನಾಯಕನಾಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಅರಸೀಕೆರೆಯ ಪುನೀತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು 'ಅಮರಾವತಿ ಪೊಲೀಸ್ ಸ್ಟೇಷನ್'.

ಬುಧವಾರದಂದು ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿತು. ಸಿನಿಮಾದ ಮೊದಲ ದೃಶ್ಯಕ್ಕೆ ನಟ ಜಗ್ಗೇಶ್ ಅವರು ಕ್ಲಾಪ್ ಮಾಡಿ ಚಿತ್ರರಂಗಕ್ಕೆ ಶುಭ ಕೋರಿದರು. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದ್ದು, ಪೊಲೀಸ್ ಸ್ಟೇಷನ್ ಸುತ್ತಮುತ್ತ ನಡೆಯುವ ಘಟನೆಗಳು ಚಿತ್ರದ ಪ್ರಮುಖ ಆಂಶಗಳಾಗಿವೆ.

ಈ ಸಿನಿಮಾ ಬಗ್ಗೆ ನಟ ಗುರುರಾಜ್ ಮಾತನಾಡಿ, ನಿರ್ದೇಶಕ ಪುನೀತ್ ಅವರು ಕಳೆದ 3 ವರ್ಷಗಳಿಂದ ಈ ಕಥೆ ರೆಡಿ ಮಾಡಿಕೊಂಡಿದ್ದಾರೆ. ಒಂದು ಇಂಟ್ರೆಸ್ಟಿಂಗ್​​ ಸಬ್ಜೆಕ್ಟ್ ಇಟ್ಟುಕೊಂಡು, ಈ ಕಥೆ ರೆಡಿಯಾಗಿದೆ. ಕಥೆ ಕೇಳಿದ ತಕ್ಷಣ ಚಿತ್ರ ಮಾಡಬೇಕು ಎನಿಸಿತು ಎಂದು ಹೇಳಿದರು.

Amravati Police Station movie
ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರದ ನಟ-ನಟಿ

ಬಳಿಕ ನಿರ್ದೇಶಕ ಪುನೀತ್ ಮಾತನಾಡಿ, ರೈತರು, ಪ್ರೆಸ್ ಅಂಶಗಳನ್ನು ಇಟ್ಟುಕೊಂಡು ಈಗಿನ ಕಾಲದಲ್ಲಿ ಏನೇನು ನಡೆಯುತ್ತಿದೆಯೋ ಅದನ್ನೇ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದೇನೆ. ಮೈಸೂರು, ಬೆಂಗಳೂರು, ಸಕಲೇಶಪುರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆಯಿದೆ ಎಂದರು.

ಗುರುರಾಜ್ ಜಗ್ಗೇಶ್ ಅವರಿಗೆ ಜೋಡಿಯಾಗಿ ರೇಖಾಶ್ರೀ ಅಭಿನಯಿಸುತ್ತಿದ್ದು, ಅವರಿಗಿದು ನಾಲ್ಕನೇ ಚಿತ್ರ. ಇದರ ಜತೆಗೆ ಹಿರಿಯ ನಟಿ ಸುಧಾರಾಣಿ, ತಾರಾ, ನೀನಾಸಂ ಅಶ್ವಥ್, ಸಾಧುಕೋಕಿಲ ಮುಂತಾದವರು ಈ ಚಿತ್ರದ ಉಳಿದ ತಾರಾಬಳಗದಲ್ಲಿದ್ದಾರೆ.

ನಿರ್ಮಾಪಕ ಅಂಜನ ರೆಡ್ಡಿ ಮಾತನಾಡಿ, ನಾನು ಮೂಲತಃ ರೈತ. ಪುನೀತ್ ಈ ಕಥೆ ತಂದಾಗ ನಾವು ರೈತರು, ಇದೆಲ್ಲ ನಮಗೆ ಬೇಡಪ್ಪ ಅಂದೆ. ಆದರೆ ರೈತರು, ಮಾಧ್ಯಮದವರು, ರಾಜಕೀಯದವರು ಸೇರಿದಂತೆ ಪೊಲೀಸರ ಬಗ್ಗೆಯೂ ಈ ಚಿತ್ರದಲ್ಲಿದೆ. ಕಥೆ ಕೇಳಿದ ಮೇಲೆ ಚಿತ್ರ ನಿರ್ಮಾಣ ಮಾಡಬೇಕೆನಿಸಿತು. ಜನರಿಗೆ ಒಂದು ನೀತಿಪಾಠ ಹೇಳಬೇಕೆಂದು ಈ ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಮಾಡೆಲ್ ಜತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ.. ಮುಹೂರ್ತ ಫಿಕ್ಸ್​

ಸುರೇಶ್ ಬಾಬು ಅವರ ಕ್ಯಾಮರಾ ವರ್ಕ್, ಕಾರ್ತಿಕ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಪ್ರಾರಂಭ ಖ್ಯಾತಿಯ ಮನು ಕಲ್ಯಾಡಿ ಈ ಚಿತ್ರದ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.