ದರಿಯಾಗಂಜ್: ಕೋವಿಡ್-19 ಭೀಕರತೆ ವೇಳೆ ಕಾಳ ಸಂತೆಯಲ್ಲಿ ಜೀವ ರಕ್ಷಕ ಆಂಟಿವೈರಲ್ ಡ್ರಗ್ ರೆಮ್ಡೆಸಿವಿರ್ ಮಾರಾಟ ಪ್ರಕರಣದಲ್ಲಿ ದೆಹಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಏಳು ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಪ್ರತಿ ವೈಲ್ ರೆಮ್ಡೆಸಿವಿರ್ ಅನ್ನು 70,000 ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ಪೈಕಿ ಇಬ್ಬರು ಆರೋಪಿಗಳು ಚಾಂದನಿ ಚೌಕ್‌ನ ದರಿಯಗಂಜ್‌ನಲ್ಲಿ ವೈದ್ಯಕೀಯ ಮಳಿಗೆಗಳನ್ನು ನಡೆಸುತ್ತಿದ್ದ ಲಿಖಿತ್ ಗುಪ್ತಾ ಮತ್ತು ಅನುಜ್ ಜೈನ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆಕಾಶ್ ವರ್ಮಾ, ವೃತ್ತಿಯಲ್ಲಿ ಆಭರಣ ವ್ಯಾಪಾರಿ ಆಗಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಅವರು ಈಗಾಗಲೇ ರೆಮ್ಡೆಸಿವಿರ್‌ನ ಸಂಗ್ರಹಣೆ ಮತ್ತು ಕಪ್ಪು ಮಾರಾಟದಲ್ಲಿ ಭಾಗಿಯಾಗಿರುವ ಜನರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ದೆಹಲಿ ಪೊಲೀಸರು 15 ಜಿಲ್ಲೆಗಳಲ್ಲಿ ತಂಡಗಳನ್ನು ನಿಯೋಜಿಸಿದ್ದಾರೆ. ರೆಮ್ಡೆಸಿವಿರ್‌ನ ಅಕ್ರಮ ಮಾರಾಟ ತಡೆಯಲು ಅಪರಾಧ ಶಾಖೆ ಸಕ್ರಿಯವಾಗಿದೆ.