ETV Bharat / city

SSLC ವಿದ್ಯಾರ್ಥಿ ಅನುಮಾನಾಸ್ಪದ ಸಾವು: 7 ಮಂದಿ ವಿರುದ್ಧ ಎಫ್ ಐಆರ್

ಜ.2 ರಂದು ನಂಜನಗೂಡು ತಾಲೂಕಿನ ಹೆಮ್ಮರಗಾಲದ 10ನೇ ತರಗತಿ ವಿದ್ಯಾರ್ಥಿಯ ಮೃತ ದೇಹ ಹಳೇಪುರ ಕೆರೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

SSLC ವಿದ್ಯಾರ್ಥಿ ಅನುಮಾನಾಸ್ಪದ ಸಾವು
died
author img

By

Published : Jan 5, 2022, 9:27 AM IST

ಮೈಸೂರು: ನಂಜನಗೂಡು ತಾಲೂಕಿನ ಹೆಮ್ಮರಗಾಲದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮಹೇಶ್ ಮೃತ ಬಾಲಕ. ಈತನ ಮೂವರು ಸಹಪಾಠಿಗಳು ಹಾಗೂ ಹೆಮ್ಮರಗಾಲದ ಶ್ರೀನಿವಾಸ್, ರಾಜು, ನವೀನ್ ಮತ್ತು ಮುದ್ದು ಎಂಬುವರ ವಿರುದ್ಧ ಬಾಲಕನ ತಂದೆ ಸಿದ್ದರಾಜು ಕವಲಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಏನಿದು ಪ್ರಕರಣ ?:

ಜ.2 ರಂದು ನಂಜನಗೂಡು ತಾಲೂಕಿನ ಹೆಮ್ಮರಗಾಲದ 10ನೇ ತರಗತಿ ವಿದ್ಯಾರ್ಥಿ ಮಹೇಶ್ ಅಲಿಯಾಸ್ ಮನು ಹಳೇಪುರ ಕೆರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಈತನ ಸಹಪಾಠಿಗಳು ಮಹೇಶ್​ನನ್ನ ಕೆರೆ ಬಳಿ ಕರೆದುಕೊಂಡು ಹೋಗಿ ವಾಮಾಚಾರ ಮಾಡಿ ಸಾಯಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು.

ಹೆಮ್ಮರಗಾಲದ ರಾಜು, ಶ್ರೀನಿವಾಸ್ ಶೆಟ್ಟಿ, ಮುದ್ದು ಹಾಗೂ ನವೀನ ಎಂಬುವರು ಮಾಟ - ಮಂತ್ರ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದು,ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಒಳ್ಳೆಯದಾಗುತ್ತದೆ ಎಂಬ ಉದ್ದೇಶದಿಂದ ಮಹೇಶ್ ಸಹಪಾಠಿಗಳಿಗೆ ಹೇಳಿದ್ದಾರೆ. ಅದರಂತೆ ಮಹೇಶ್​ನನ್ನು ಕೆರೆ ಬಳಿ ಕರೆದುಕೊಂಡು ಹೋಗಿ ಸಾಯಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಓದಿ: ಐಎಸ್ ಸಂಪರ್ಕದಲ್ಲಿ ಯುವಕ-ಯುವತಿಯರು..ದೇಶ ವಿರೋಧಿ ಚಟುವಟಿಕೆಯ ತಾಣವಾಗುತ್ತಿದೆಯಾ ಕಾಶ್ಮೀರ, ಮಂಗಳೂರು, ಬೆಂಗಳೂರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.