ETV Bharat / state

ಹುಬ್ಬಳ್ಳಿ: ಮನಕಲಕುವಂತಿದೆ ಮೃತ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕುಟುಂಬಸ್ಥರ ಕಥೆ - HUBBALLI GAS EXPLOSION

ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಮೃತಪಟ್ಟ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕುಟುಂಬಸ್ಥರು ತಮ್ಮ ಸಂಕಷ್ಟದ ಬಗ್ಗೆ ಈಟಿವಿ ಭಾರತ್​ ಜೊತೆ ಅಳಲು ತೋಡಿಕೊಂಡಿದ್ದಾರೆ. ನಮ್ಮ ಪ್ರತಿನಿಧಿ ಹೆಚ್.ಬಿ. ಗಡ್ಡದ ಅವರ ವರದಿ ಇಲ್ಲಿದೆ.

ದುರಂತ ಸಂಭವಿಸಿದ ಕಟ್ಟಡ ಮತ್ತು ಮೃತ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು
ದುರಂತ ಸಂಭವಿಸಿದ್ದ ಕಟ್ಟಡ ಮತ್ತು ಮೃತ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು (ETV Bharat)
author img

By ETV Bharat Karnataka Team

Published : Jan 1, 2025, 7:34 PM IST

ಹುಬ್ಬಳ್ಳಿ: ನಗರದಲ್ಲಿ ಉಣಕಲ್​ನ ಅಚ್ಚವ್ವನ ಕಾಲೋನಿಯ ಕಟ್ಟಡವೊಂದರಲ್ಲಿ ಡಿ.22ರಂದು ರಾತ್ರಿ ವೇಳೆ ನಡೆದ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 9 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಪೈಕಿ ಎಂಟು ಮಂದಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಮೃತರ ಕುಟುಂಬಸ್ಥರು ಈ ಆಘಾತದಿಂದ ಇನ್ನು ಹೊರ ಬಂದಿಲ್ಲ.

ಹೌದು, ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 9 ಮಾಲಾಧಾರಿಗಳ ಪೈಕಿ 12 ವರ್ಷದ ಬಾಲಕ ವಿನಾಯಕ ಗುಣಮುಖನಾಗಿದ್ದಾನೆ. ಇನ್ನುಳಿದ ನಿಜಲಿಂಗಪ್ಪ ಬೇಪುರಿ (58) ಹಾಗೂ ಸಂಜಯ ಸವದತ್ತಿ(19) ಮೊದಲಿಗೆ ಮೃತಪಟ್ಟಿದ್ದರೇ, ಡಿ.27ರಂದು ಉಣಕಲ್ ನಿವಾಸಿ ರಾಜು ಮೂಗೇರ(16) ಹಾಗೂ ಸಾಯಿನಗರ ಲಿಂಗರಾಜ ಬಿರನೂರ(19) ಮೃತಪಟ್ಟಿದ್ದರು. ಡಿ.29ರಂದು ಶಂಕರ್ ಚವ್ಹಾಣ(30), ಮಂಜುನಾಥ ವಾಗ್ಮೋಡೆ(18), ತೇಜಸ್ವರ್ ಸಾತರೆ (26) ಮೃತಪಟ್ಟಿದ್ದರು. ಮಂಗಳವಾರ ಬೆಳಗ್ಗೆ ಪ್ರಕಾಶ ಬಾರಕೇರ(42) ಮೃತಪಟ್ಟಿದ್ದು, ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ. ಮೃತರಲ್ಲಿ ಪ್ರಕಾಶ ಬಾರಕೇರ ಹಾಗೂ‌ ನಿಜಲಿಂಗಪ್ಪ ಹೊರತುಪಡಿಸಿ ಉಳಿದವರೆಲ್ಲರೂ ಅವಿವಾಹಿತರು ಹಾಗೂ ಪೋಷಕರಿಗೆ ಒಬ್ಬರೇ ಪುತ್ರರಾಗಿದ್ದರು.

ಮೃತ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕುಟುಂಬಸ್ಥರ ಪ್ರತಿಕ್ರಿಯೆ (ETV Bharat)

ಪ್ರಾಣ ಲೆಕ್ಕಿಸದೇ ಮಗನ ಜೀವ ಉಳಿಸಿದ ಪ್ರಕಾಶ ಬಾರಕೇರ: ಮೃತ ಸಾಯಿನಗರದ ನಿವಾಸಿ ಪ್ರಕಾಶ ಬಾರಕೇರ ಅವರು ಇಸ್ಕಾನ್ ದೇವಾಲಯದಲ್ಲಿ ಬಿಸಿಯೂಟ ತಯಾರಿಸುವ ಕೆಲಸ ಮಾಡುತ್ತಿದ್ದರು. ಇಡೀ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಪ್ರಕಾಶ ಕಳೆದ ಆರು ವರ್ಷದಿಂದ ಮಾಲೆ ಧರಿಸುತ್ತಿದ್ದರು. ಇವರು 12 ವರ್ಷದ ಮಗ ವಿನಾಯಕನಿಗೆ ಎರಡು ವರ್ಷಗಳಿಂದ ಮಾಲೆ ಹಾಕಿಸುತ್ತಿದ್ದರು. ಡಿ.22ರಂದು ರಾತ್ರಿ ವೇಳೆ ನಡೆದ ಸಿಲಿಂಡರ್ ಸ್ಪೋಟದ ವೇಳೆ 9 ಜನರ ಪೈಕಿ ಬೆಂಕಿ ಹೊತ್ತಿಕೊಂಡಿದ್ದ ಆರು ಜನ ಮಾಲಾಧಾರಿಗಳು ಕಟ್ಟಡದ ಮೇಲಿಂದ ಕೆಳಗೆ ಜಿಗಿದಿದ್ದರು. ಆದರೆ ಪ್ರಕಾಶ ಮಾತ್ರ ತಮ್ಮ ಪ್ರಾಣವನ್ನು ಲೆಕ್ಕಿಸದೇ ಬೆಂಕಿಯಿಂದ ಮಗ ವಿನಾಯಕನ ಜೀವ ಉಳಿಸಿದ್ದರು. ಪ್ರಕಾಶ ಅವರು ಮತ್ತೊಬ್ಬ ಮಾಲಾಧಾರಿ ಜೊತೆ ಸೇರಿ ಮಗನನ್ನು ತಬ್ಬಿಕೊಂಡಿದ್ದರು, ಇದರಿಂದ ಹೆಚ್ಚಿನ ಸುಟ್ಟಗಾಯಗಳಾಗದೇ ಬಾಲಕ ವಿನಾಯಕನ ಜೀವ ಉಳಿದಿದೆ. ಮಗನ ಉಳಿಸಿದ ಪ್ರಕಾಶ ನಿನ್ನೆ(ಮಂಗಳವಾರ) ಕೊನೆಯುಸಿರೆಳೆದಿದ್ದು, ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಸ್ಥಳೀಯ ನಿವಾಸಿ ಅಶೋಕ ಚಿಲ್ಲನವರ್ (ETV Bharat)

ಕಮರಿದ ಸೈನಿಕನಾಗುವ ಕನಸು: "ಸೈನಿಕನಾಗಬೇಕು ಎಂದು ಕನಸು ಕಂಡಿದ್ದ ಸಂಜಯ ಸವದತ್ತಿ ಸಿದ್ದಗಂಗಾ ಮಠದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿ, ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ. ವ್ಯಾಸಂಗ ಮಾಡುತ್ತಿದ್ದ. ಅಪ್ಪಟ ಅಯ್ಯಪ್ಪಸ್ವಾಮಿ ಭಕ್ತನಾಗಿದ್ದ ಸಂಜಯ ಇದೇ ಮೊದಲ ಬಾರಿಗೆ ಮಾಲೆ ಧರಿಸಿದ್ದ. ಕೋವಿಡ್ ವೇಳೆ ತರಕಾರಿ ಮಾರಿ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಇದ್ದೊಬ್ಬ ಮಗನ ಸಾವಿನಿಂದ ಮನೆ ಕತ್ತಲಾಗಿದೆ" ಎಂದು ಸಂಜಯ ಸವದತ್ತಿ ಅವರ ಪೋಷಕರಾದ ಪ್ರಕಾಶ ಹಾಗೂ ಶಶಿಕಲಾ ಅಳಲು ತೋಡಿಕೊಂಡರು.

ದುರಂತ ಸಂಭವಿಸಿದ್ದ ಕಟ್ಟಡ
ದುರಂತ ಸಂಭವಿಸಿದ್ದ ಕಟ್ಟಡ (ETV Bharat)

ಇನ್ನೇರಡು ವರ್ಷ ಬಿಟ್ಟು ಮಾಲೆ ಧರಿಸುವಂತೆ ಹೇಳಿದ್ದೆ: ಮೃತ ಲಿಂಗರಾಜ್ ಬಿರನೂರು ಅವರು ತಾಯಿ ಕವಿತಾ ಬಿರನೂರು ಮಾತನಾಡಿ, "ಪಿಯುಸಿ ಪ್ರಥಮ ವರ್ಷ ಮುಗಿಸಿದ್ದ ಲಿಂಗರಾಜ್ ಮನೆಯ ಜವಾಬ್ದಾರಿ ಹೊತ್ತು ಬಿವಿಬಿ ಕಾಲೇಜಿನಲ್ಲಿ ಗಾರ್ಡನ್​ ನಿರ್ವಹಣೆ​ ಕೆಲಸ ಮಾಡುತ್ತಿದ್ದ. ಚಿಕ್ಕವನಿದ್ದೀಯಾ ಈಗ ಬೇಡ ಇನ್ನೆರಡು ವರ್ಷ ಬಿಟ್ಟು ಮಾಲೆ ಹಾಕುವಂತೆ ಹೇಳಿದ್ದೆ. ಅದರೂ ಮಾಲೆ ಹಾಕಿಕೊಳ್ಳುತ್ತೇನೆ ಎಂದಾಗ ದೇವರ ಕಾರ್ಯ ಮಾಡಿದ್ರೆ ಒಳ್ಳೆಯದಾಗುತ್ತದೆ ಎಂದು ಸುಮ್ಮನಿದ್ದೆವು. ನಮಗೆ ಮನೆ ಇಲ್ಲ, ಹೊಲ ಇಲ್ಲ. ಈಗ ದುಡಿಯುತ್ತಿದ್ದ ಮಗನೂ ಇಲ್ಲ" ಎಂದು ಕಣ್ಣೀರಿಟ್ಟರು.

ಸೂಕ್ತ ಪರಿಹಾರ ಕೊಡಿ: ಮೃತ ಲಿಂಗರಾಜ್​ ಬಿರನೂರು ಅವರ ಅಜ್ಜಿ ಪಾರ್ವತಮ್ಮ ಮಾತನಾಡಿ, "ಮನೆಗೆ ಆಸರೆಯಾಗಿದ್ದ ಮೊಮ್ಮಗನ ಸಾವಿನಿಂದ ಮನೆಗೆ ಯಾರು ದಿಕ್ಕಿಲ್ಲದಂತಾಗಿದೆ. ಹೀಗಾಗಿ ಲಿಂಗರಾಜ್ ತಾಯಿ ಕವಿತಾ ಅವರ ಕೆಲಸವನ್ನು ಖಾಯಂ ಮಾಡಿಸಿಕೊಡಬೇಕು. ನನ್ನ ಮೊಮ್ಮಗನನ್ನು ಯಾರಿಂದಲೂ ಮರಳಿ ತಂದು ಕೊಡಲು ಸಾಧ್ಯವಿಲ್ಲ. ಅವನ ತಾಯಿಗೆ ಸರ್ಕಾರ ಸೂಕ್ತ ಪರಿಹಾರ ಕೊಟ್ಟರೆ ಸಾಕು" ಎಂದು ಮನವಿ ಮಾಡಿದರು.

"ಮಂಜುನಾಥ ವಾಗ್ಮೋಡೆ ಪೋಷಕರಿಗೆ ಒಬ್ಬನೇ ಮಗನಾಗಿದ್ದು, ಎರಡನೇ ವರ್ಷದ ಡಿಪ್ಲೋಮಾ ವ್ಯಾಸಂಗ ಮಾಡಿತ್ತಿದ್ದ. ‌ ಮಂಜುನಾಥನ ತಂದೆ ಆಟೋ ಚಾಲಕರಾಗಿದ್ದರು. ಪೋಷಕರಿಬ್ಬರು ಬೇರೆ ಕಡೆ ವಾಸವಾಗಿದ್ದರು. ಮಂಜುನಾಥ ಮಾತ್ರ ಅಚ್ಚವ್ವನ ಕಾಲೋನಿಯಲ್ಲಿ ವಾಸವಾಗಿ ಎಲ್ಲರೊಂದಿಗೆ ಆತ್ಮೀಯನಾಗಿದ್ದ. ಅಳಿಯನನ್ನು ಕಳೆದುಕೊಂಡಿದ್ದಕ್ಕೆ ತುಂಬಾ ದುಃಖವಾಗಿದೆ" ಎಂದು ಮಂಜುನಾಥ ಅವರ ಮಾವ ಸಂಜಯ ವಾಗ್ಮೋಡೆ ಕಂಬನಿ ಮಿಡಿದರು.

ಕೆಎಂಸಿಆ‌ರ್​ಐನಲ್ಲಿಯೇ ವಾರ್ಡ್ ಬಾಯ್ ಆಗಿದ್ದ ಶಂಕರ್ ಚವ್ಹಾಣ ಅದೇ ಆಸ್ಪತ್ರೆಯ ಬೆಡ್​ ಮೇಲೆ ಪ್ರಾಣ ಬಿಟ್ಟಿದ್ದು, ದುರದೃಷ್ಟಕರ.‌ ಶಂಕರ್ ಚವ್ಹಾಣ ಸಣ್ಣವರಿದ್ದಾಗಲೇ ಪೋಷಕರು ಮೃತಪಟ್ಟಿದ್ದರು. ಅವರ ದೊಡ್ಡಮ್ಮ ಜನ್ನಬಾಯಿ ಜಾದವ್ ಅವರು ಆಶ್ರಯದಲ್ಲಿ ಶಂಕರ್ ಚವ್ಹಾಣ ಬೆಳೆದಿದ್ದರು.

ಉಣಕಲ್ ನಿವಾಸಿ ರಾಜು ಮೂಗೇರ ಕೂಡ ಪೋಷಕರಿಗೆ ಒಬ್ಬನೇ ಮಗನಾಗಿದ್ದ. ಇದ್ದೊಬ್ಬ ಮಗನನ್ನು ಕಳೆದುಕೊಂಡು ನಾ ಹೇಗೆ ಇರಲಿ ಎಂದು ಮೃತ ರಾಜು ಮೂಗೇರ ಅವರ ತಾಯಿ ಮಲ್ಲಮ್ಮ ಮೂಗೇರ ದುಃಖ ತೋಡಿಕೊಂಡರು.

ಏಕತಾ ಕಾಲೋನಿ ನಿವಾಸಿಯಾಗಿದ್ದ ನಿಜಲಿಂಗಪ್ಪ (ಅಜ್ಜಾಸ್ವಾಮಿ) ಅವರನ್ನು ಕಳೆದುಕೊಂಡ ಪತ್ನಿ ಮತ್ತು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಕುಟುಂಬದ ಆಸರೆಯ ಜೊತೆಗೆ ಅಡುಗೆ ಕೆಲಸ ಮಾಡಿಕೊಂಡಿದ್ದ ಸಾಯಿನಗರದ ನಿವಾಸಿಯಾಗಿರುವ ತೇಜಸ್ವರ್ ಸಾತರೆ ಕುಟುಂಬದ ಕಥೆಯೂ ಕೂಡ ಇದೆ ಆಗಿದೆ.

ಸ್ಥಳೀಯ ನಿವಾಸಿ ಅಶೋಕ ಚಿಲ್ಲನವರ್ 'ಈಟಿವಿ ಭಾರತ್' ಜೊತೆ ಮಾತನಾಡಿ,​ "ಮೃತರ ಕುಟುಂಬಸ್ಥರು ಬಡವರಾಗಿದ್ದಾರೆ. ಮನೆಗೆ ಆಸರೆಯಾಗಿದ್ದ ಮಕ್ಕಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಹೀಗಾಗಿ ಸರ್ಕಾರ ಪ್ರತಿ‌ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಣೆ ಮಾಡಬೇಕು" ಎಂದು ಮನವಿ ಮಾಡಿದರು.

ಏನಿದು ಘಟನೆ?: ಡಿಸೆಂಬರ್​ 22ರಂದು ಉಣಕಲ್​ ಅಚ್ಚವ್ವನ ಕಾಲೋನಿಯ ಕಟ್ಟಡವೊಂದರಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡಿತ್ತು. ಪ್ರತಿವರ್ಷ ಇಲ್ಲಿ ಅಯ್ಯಪ್ಪ ಸನ್ನಿಧಿಯಲ್ಲಿ ಪೂಜೆ ನಡೆಸಲಾಗುತ್ತಿತ್ತು. ಈ ವರ್ಷವೂ ಎಂದಿನಂತೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ತಮ್ಮ ವ್ರತವನ್ನು ಮುಗಿಸಿ, ಅಯ್ಯಪ್ಪನಿಗೆ ಪೂಜೆ ಸಲ್ಲಿಸಿ ನಿದ್ರೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಓರ್ವ ಅಯ್ಯಪ್ಪ ಮಾಲಾಧಾರಿಯ ಕಾಲು ಗ್ಯಾಸ್ ಸಿಲಿಂಡರ್​ಗೆ ತಾಗಿದ ಪರಿಣಾಮ ಗ್ಯಾಸ್ ಸೋರಿಕೆಯಾಗಿತ್ತು. ದೇವರಿಗೆ ಹಚ್ಚಿದ್ದ ದೀಪ ಉರಿಯುತ್ತಿದ್ದರಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ 9 ಮಂದಿ ಪೈಕಿ 8 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: 8 ತಿಂಗಳ ಗರ್ಭಿಣಿ ಪತ್ನಿ ಸಾವು, ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.